ಆಲಿಯಾ ಭಟ್​ ಅನುಕರಣೆ ಮಾಡಿದ ಬಾಲಕಿ; ಕಂಗನಾ ಅಸಮಾಧಾನಕ್ಕೆ ಕಾರಣವಾಯ್ತು ಆ ವಿಡಿಯೋ

ಕಿಯಾರಾ ಖನ್ನಾ ಅವರು ನೋಡೋಕೆ ಆಲಿಯಾ ಭಟ್​ ರೀತಿಯಲ್ಲಿದ್ದಾಳೆ. ಅವಳದ್ದು ಇನ್ನೂ ಚಿಕ್ಕ ವಯಸ್ಸು. ಆಲಿಯಾ ಭಟ್​ ಹಂಚಿಕೊಂಡ ವಿಡಿಯೋ ಒಂದಕ್ಕೆ ರೀಲ್ಸ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಈ ದೃಶ್ಯದಲ್ಲಿ ಆಲಿಯಾ ಬಾಯಿಗೆ ಬೀಡಿ ಇಟ್ಟಂತೆ ಇವಳು ಕೂಡ ಬಾಯಿಗೆ ಬೀಡಿ ಇಟ್ಟುಕೊಂಡಿದ್ದಾಳೆ.

ಆಲಿಯಾ ಭಟ್​ ಅನುಕರಣೆ ಮಾಡಿದ ಬಾಲಕಿ; ಕಂಗನಾ ಅಸಮಾಧಾನಕ್ಕೆ ಕಾರಣವಾಯ್ತು ಆ ವಿಡಿಯೋ
ಕಿಯಾರಾ-ಆಲಿಯಾ-ಕಂಗನಾ
TV9kannada Web Team

| Edited By: Rajesh Duggumane

Feb 14, 2022 | 7:33 PM

ಆಲಿಯಾ ಭಟ್ (Alia Bhatt)​ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ದೊಡ್ಡ ಮಟ್ಟದಲ್ಲಿ ಹೈಪ್​ ಪಡೆದುಕೊಂಡಿದೆ. ಈ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ. ಸದ್ಯ ಆಲಿಯಾ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಹಲವು ವಾಹಿನಿಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದಲ್ಲಿ ಬರುವ ಡೈಲಾಗ್​ ಕ್ಲಿಪ್​ ಒಂದನ್ನು ಆಲಿಯಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಭರ್ಜರಿ ವೈರಲ್​ ಆಗುತ್ತಿದೆ. ಈಗ ಚಿಕ್ಕ ಬಾಲಕಿ ಒಬ್ಬಳು ಆಲಿಯಾ ಅವರನ್ನು ಅನುಕರಣೆ ಮಾಡಿದ್ದಾಳೆ. ಇದಕ್ಕೆ ಬಾಲಿವುಡ್​ ನಟಿ ಕಂಗನಾ ರಣಾವತ್ (Kangana Ranaut)​ ಟೀಕೆ ಮಾಡಿದ್ದಾರೆ.

ಕಿಯಾರಾ ಖನ್ನಾ ಎಂಬ ಬಾಲಕಿ ನೋಡೋಕೆ ಆಲಿಯಾ ಭಟ್​ ರೀತಿಯಲ್ಲಿದ್ದಾಳೆ. ಅವಳದ್ದು ಇನ್ನೂ ಚಿಕ್ಕ ವಯಸ್ಸು. ಆಲಿಯಾ ಭಟ್​ ಹಂಚಿಕೊಂಡ ವಿಡಿಯೋ ಒಂದಕ್ಕೆ ರೀಲ್ಸ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಈ ದೃಶ್ಯದಲ್ಲಿ ಆಲಿಯಾ ಬಾಯಿಗೆ ಬೀಡಿ ಇಟ್ಟಂತೆ ಇವಳು ಕೂಡ ಬಾಯಿಗೆ ಬೀಡಿ ಇಟ್ಟುಕೊಂಡಿದ್ದಾಳೆ. ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಅನೇಕರು ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ, ಈ ಬಗ್ಗೆ ಕಂಗನಾ ಅಸಮಾಧಾನ ಹೊರಹಾಕಿದ್ದಾರೆ.

ಗಂಗೂಬಾಯಿ ವೇಶ್ಯೆ ಆಗಿರುತ್ತಾಳೆ. ನಂತರ ಅವರು ಕಾಮಾಟಿಪುರದ ಡಾನ್​ ಆಗಿ ಬೆಳೆಯುತ್ತಾಳೆ. ಇದೇ ಕಥೆ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ರೀತಿಯ ಕಥೆಯುಳ್ಳ ಸಿನಿಮಾಗಳ ಡೈಲಾಗ್​ಗಳನ್ನು ಬಾಲಕಿ ಕಿಯಾರಾ ಕಾಪಿ ಮಾಡಿರುವುದಕ್ಕೆ ಕಂಗನಾ ಅಸಮಾಧಾನ ಹೊರಹಾಕಿದ್ದಾರೆ.  ‘ಚಿಕ್ಕ ಮಕ್ಕಳು ಬಾಯಲ್ಲಿ ಬೀಡಿ ಇಟ್ಟುಕೊಂಡು, ವೇಶ್ಯೆ ಪಾತ್ರವನ್ನು ಅನುಕರಣೆ ಮಾಡುವುದು ಎಷ್ಟು ಸರಿ? ಇಷ್ಟು ಸಣ್ಣ ವಯಸ್ಸಿಗೆ ಅವಳ ಮನಸ್ಸಿನಲ್ಲಿ ಈ ರೀತಿ ವಿಚಾರ ತುಂಬುವುದು ಸರಿಯೇ? ಹಲವು ಚಿಕ್ಕಮಕ್ಕಳು ಇವರನ್ನೇ ಹಿಂಬಾಲಿಸುತ್ತಿರುತ್ತಾರೆ’ ಎಂದು ಕಂಗನಾ ಆತಂಕ ಹೊರ ಹಾಕಿದ್ದಾರೆ. ಈ ಪೋಸ್ಟ್​​ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಗೆ ಟ್ಯಾಗ್ ಮಾಡಿದ್ದಾರೆ.

ದೀಪಿಕಾ ಸಿನಿಮಾ ಟೀಕಿಸಿದ್ದ ಕಂಗನಾ:

ದೀಪಿಕಾ ನಟನೆಯ ‘ಗೆಹರಾಯಿಯಾ’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಬೋಲ್ಡ್​ ದೃಶ್ಯಗಳು ಇವೆ ಎಂಬ ಕಾರಣಕ್ಕೆ ಕೆಲವರು ‘ಗೆಹರಾಯಿಯಾ’ ಸಿನಿಮಾ ಬಗ್ಗೆ ನೆಗೆಟಿವ್​ ಕಮೆಂಟ್​ ಮಾಡುತ್ತಿದ್ದಾರೆ. ಕಂಗನಾ ರಣಾವತ್​ ಕೂಡ ‘ಗೆಹರಾಯಿಯಾ’ ಸಿನಿಮಾವನ್ನು ಟೀಕಿಸಿದ್ದರು. ಅದು ಕೂಡ ಖಾರದ ಮಾತುಗಳಲ್ಲಿ. ‘ಇದೊಂದು ಕೆಟ್ಟ ಸಿನಿಮಾ’ ಎಂದು ಅವರು ಹೇಳಿದ್ದರು.

‘ನಾನೂ ಕೂಡ ಈ ಕಾಲದವಳು. ಈ ಬಗೆಯ ರೊಮ್ಯಾನ್ಸ್​ ಅನ್ನು ಗುರುತಿಸಿ, ಅರ್ಥ ಮಾಡಿಕೊಳ್ಳಬಲ್ಲೆ. ಹೊಸ ಯುಗದ ಸಿನಿಮಾ, ನಗರ ಪ್ರದೇಶದ ಸಿನಿಮಾ ಎಂಬ ಹೆಸರಿನಲ್ಲಿ ತ್ಯಾಜ್ಯವನ್ನೆಲ್ಲ ಮಾರಾಟ ಮಾಡಬೇಡಿ. ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾವೇ ಆಗಿರುತ್ತದೆ. ಎಷ್ಟೇ ಪ್ರಮಾಣದಲ್ಲಿ ಅಶ್ಲೀಲತೆ ಮತ್ತು ಮೈ ತೋರಿಸಿದರೂ ಈ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಇದು ಬೇಸಿಕ್​ ಸತ್ಯ. ಯಾವುದೇ ಆಳವಾದ (ಗೆಹರಾಯಿಯಾ) ವಿಷಯ ಅಲ್ಲ’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದರು.

ಇದನ್ನೂ ಓದಿ: Kangana Ranaut: ‘ನಿಮ್ಮನ್ನು ಬಂಧಿಸಿಕೊಳ್ಳಬೇಡಿ, ಸ್ವತಂತ್ರರಾಗುವತ್ತ ಯೋಚಿಸಿ’; ಹಿಜಾಬ್ ಪ್ರಕರಣದ ಕುರಿತು ಕಂಗನಾ ಪ್ರತಿಕ್ರಿಯೆ

47ರ ಪ್ರಾಯದ ನಟನಿಗೆ 20ರ ಹರೆಯದ ನಟಿ ಜೋಡಿ; ಇದು ಸರಿ ಎಂದು ಸಮರ್ಥಿಸಿಕೊಂಡ ಕಂಗನಾ ರಣಾವತ್​

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada