Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ‘ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟುಬಿಡಿ’; ಜ್ಯೂ ಎನ್​ಟಿಆರ್​ ಬಳಿ ಆಲಿಯಾ ವಿಶೇಷ ಬೇಡಿಕೆ

Jr NTR: ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ರಿಲೀಸ್ ಸಿದ್ಧತೆಯಲ್ಲಿರುವ ಆಲಿಯಾಗೆ ಮುಂದೆ ದಕ್ಷಿಣ ಭಾರತದ ಖ್ಯಾತ ತಾರೆಯರೊಂದಿಗೆ ನಟಿಸುವ ಆಸಕ್ತಿ ಇದೆ. ಈ ಕುರಿತು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ ಜ್ಯೂ.ಎನ್​ಟಿಆರ್ ಅಭಿಮಾನಿಗಳ ಬಗ್ಗೆ ಆಲಿಯಾ ಮಾತನಾಡಿರುವುದು ಸದ್ಯ ವೈರಲ್ ಆಗಿದೆ.

Alia Bhatt: ‘ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟುಬಿಡಿ’; ಜ್ಯೂ ಎನ್​ಟಿಆರ್​ ಬಳಿ ಆಲಿಯಾ ವಿಶೇಷ ಬೇಡಿಕೆ
ಜ್ಯೂ.ಎನ್​ಟಿಆರ್​, ಆಲಿಯಾ ಭಟ್
Follow us
TV9 Web
| Updated By: shivaprasad.hs

Updated on: Feb 15, 2022 | 11:15 AM

ಜ್ಯೂ.ಎನ್​ಟಿಆರ್​ (Jr NTR) ಈಗಾಗಲೇ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇದೀಗ ಅವರು ನಟಿಸಿರುವ ‘ಆರ್​ಆರ್​​ಆರ್​’ ಬಿಡುಗಡೆಗೆ ಸಿದ್ದವಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಅಲ್ಲದೇ ಜ್ಯೂ.ಎನ್​ಟಿಆರ್ ಅವರ ಅಭಿಮಾನಿಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ ಫ್ಯಾನ್ಸ್ ಹೆಚ್ಚುತ್ತಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ನಟ ಬದಲಾಗಲಿದ್ದಾರೆ ಎನ್ನುವುದು ಟಾಲಿವುಡ್ ಮಂದಿಯ ಅಭಿಪ್ರಾಯ. ವಿಶೇಷವೆಂದರೆ ಈ ಅಭಿಮಾನಿಗಳ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್ ತಾರೆಗಳೂ ಸೇರುತ್ತಿದ್ದಾರೆ. ಹೌದು. ಇತ್ತೀಚೆಗೆ ಹಿಂದಿ ಚಿತ್ರರಂಗದ ಖ್ಯಾತ ನಟಿ ಆಲಿಯಾ ಭಟ್ (Alia Bhatt) ಜ್ಯೂ.ಎನ್​ಟಿಆರ್ ಬಗ್ಗೆ ಮಾತನಾಡಿರುವುದು ಈಗ ಸಖತ್ ಸುದ್ದಿಯಾಗಿದೆ. ಆಲಿಯಾ ಮಾತುಗಳನ್ನು ಪಿಂಕ್​ವಿಲ್ಲಾ ವರದಿ ಮಾಡಿದೆ. ಈಗಾಗಲೇ ಚಿತ್ರರಂಗದಲ್ಲಿ ಆಲಿಯಾ ಹಾಗೂ ಜ್ಯೂ.ಎನ್​ಟಿಆರ್​ ಮತ್ತೊಂದು ಹೊಸ ಚಿತ್ರದಲ್ಲಿ ಜತೆಯಾಗಿ ಬಣ್ಣಹಚ್ಚಲಿದ್ದಾರೆ ಎಂಬ ಗಾಸಿಪ್​ಗಳು ಜೋರಾಗಿವೆ. ಇದಕ್ಕೆ ಪೂರಕವಾಗಿಯೇ ಆಲಿಯಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಒಂದಷ್ಟು ವಿಚಾರಗಳ ಕುರಿತು ಮಾತನಾಡಿದ್ದಾರೆ.

ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಆಲಿಯಾ ಭಟ್ ಹಾಗೂ ಜ್ಯೂ.ಎನ್​ಟಿಆರ್ ಜತೆಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾಮ್​ ಚರಣ್ ಕೂಡ ಬಣ್ಣಹಚ್ಚಿದ್ದಾರೆ. ಶೂಟಿಂಗ್​ ಸೆಟ್​ನಲ್ಲಿ ಜ್ಯೂ.ಎನ್​ಟಿಆರ್ ಅವರನ್ನು ಗಮನಿಸಿರುವ ಆಲಿಯಾಗೆ ನಟನ ಕಾರ್ಯವೈಖರಿ ಹಿಡಿಸಿದೆ. ಅವರ ವೃತ್ತಿಪರತೆಯನ್ನು ಆಲಿಯಾ ಕೊಂಡಾಡಿದ್ದಾರೆ.

‘ಜ್ಯೂ.ಎನ್​ಟಿಆರ್ ಜತೆ ಇನ್ನೊಂದು ಚಿತ್ರ ಮಾಡಲು ಅವಕಾಶ ಸಿಕ್ಕರೆ ಸಖತ್ ಖುಷಿಯಾಗುತ್ತದೆ. ಅವರು ಪ್ರತಿಭಾವಂತ, ಅದ್ಭುತ ನಟ. ದೊಡ್ಡ ಸ್ಟಾರ್. ಅಷ್ಟಾಗ್ಯೂ ಅವರಿಗೆ ಅಹಂಕಾರವಿಲ್ಲ. ಇದುವರೆಗೆ ಜ್ಯೂ.ಎನ್​ಟಿಆರ್ ನಟಿಸಿರುವ ಚಿತ್ರಗಳು ಮೆಚ್ಚುವಂಥದ್ದು’ ಎಂದು ಹೊಗಳಿದ್ದಾರೆ ಆಲಿಯಾ. ಈಗಾಗಲೇ ಆಲಿಯಾ ಹಾಗೂ ಜ್ಯೂ.ಎನ್​ಟಿಆರ್ ‘ಆರ್​ಆರ್​ಆರ್​’ ಚಿತ್ರದ ಪ್ರೊಮೋಷನ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ತೆರೆಯ ಮೇಲೆ ಆಲಿಯಾ- ಜ್ಯೂ.ಎನ್​ಟಿಆರ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.

ಜ್ಯೂ.ಎನ್​ಟಿಆರ್ ಫ್ಯಾನ್ಸ್ ಪ್ರೀತಿ ಕಂಡು ಫಿದಾ ಆದ ಆಲಿಯಾ; ನಟಿ ಹೇಳಿದ್ದೇನು?

ಜ್ಯೂ.ಎನ್​ಟಿಆರ್ ಕಾರ್ಯವೈಖರಿಯನ್ನು ಇಷ್ಟಪಟ್ಟಿರುವ ಆಲಿಯಾಗೆ ಅವರಿಗಿರುವ ಅಭಿಮಾನಿಗಳನ್ನು ಕಂಡು ಅಚ್ಚರಿಯಾಗಿದೆ. ಜತೆಗೆ ಫ್ಯಾನ್ಸ್ ನಿಷ್ಠೆಯನ್ನು ಹೊಗಳಿರುವ ಆಲಿಯಾ, ದಯವಿಟ್ಟು ಈ ಅಭಿಮಾನಿಗಳನ್ನು ನನಗೆ ಕೊಟ್ಟುಬಿಡಿ ಎಂದು ವಿಶೇಷ ಬೇಡಿಕೆ ಇಟ್ಟಿದ್ದಾರೆ. ಸಂದರ್ಶನದಲ್ಲಿ ಆಲಿಯಾ, ‘‘ದಯವಿಟ್ಟು ನಿಮ್ಮ ಅಭಿಮಾನಿಗಳನ್ನು ನನಗೆ ಕೊಟ್ಟುಬಿಡಿ. ಕಾರಣ, ಜ್ಯೂ.ಎನ್​ಟಿಆರ್ ಅವರ ಅಭಿಮಾನಿಗಳು ಬಹಳ ನಿಷ್ಠಾವಂತರು’’ ಎಂದಿದ್ದಾರೆ. ಈ ಮೂಲಕ ತಮ್ಮ ವಿಶೇಷ ಬೇಡಿಕೆಯೊಂದನ್ನು ಜ್ಯೂ.ಎನ್​ಟಿಆರ್ ಮುಂದಿಟ್ಟಿದ್ದಾರೆ. ಆಲಿಯಾ ಅವರ ಮಾತುಗಳು ಸದ್ಯ ಜ್ಯೂ.ಎನ್​ಟಿಆರ್ ಅಭಿಮಾನಿ ವಲಯದಲ್ಲಿ ಸಖತ್ ವೈರಲ್ ಆಗಿದೆ.

ಆರ್​​ಆರ್​​ಆರ್​​ ಚಿತ್ರದಲ್ಲಿ ಆಲಿಯಾ ಭಟ್:

View this post on Instagram

A post shared by Gangubai ?? (@aliaabhatt)

ದಕ್ಷಿಣದ ಚಿತ್ರರಂಗದ ಮೇಲೆ ಆಲಿಯಾಗೆ ಹೆಚ್ಚುತ್ತಿದೆ ಮೋಹ; ಹಲವು ಬಾರಿ ಹೇಳಿಕೊಂಡಿರುವ ನಟಿ

ದಕ್ಷಿಣದ ಚಿತ್ರಗಳು ಬಾಲಿವುಡ್ ಚಿತ್ರಗಳನ್ನೂ ಕಲೆಕ್ಷನ್​ನಲ್ಲಿ ಮೀರಿಸುತ್ತಿದ್ದು, ಮೊದಲಿದ್ದಂತೆ ಪ್ರಾದೇಶಿಕ ಭಾಷೆಗಳ ಚಿತ್ರಗಳನ್ನು ಒಪ್ಪಿಕೊಳ್ಳುವಲ್ಲಿ ಬಿಟೌನ್ ತಾರೆಯರು ಯೋಚಿಸುತ್ತಿದ್ದ ಪರಿಸ್ಥಿತಿ ಈಗಿಲ್ಲ. ಬದಲಾಗಿ ಈಗ ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಬೇಕು ಎಂದು ಬಹಿರಂಗವಾಗಿ ತಾರೆಯರು ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಅಜಯ್ ದೇವಗನ್, ಕೃತಿ ಸನೋನ್, ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಹಲವು ತಾರೆಯರು ದಕ್ಷಿಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಲಿಯಾ ಭಟ್​ ‘ಆರ್​ಆರ್​ಆರ್​’ ಚಿತ್ರದಲ್ಲಿ ನಟಿಸಿದ ನಂತರ ಅವರಿಗೂ ಕೂಡ ದಕ್ಷಿಣ ಭಾರತದ ಚಿತ್ರರಂಗದ ಮೇಲೆ ವಿಶೇಷ ಪ್ರೀತಿ ಉಂಟಾಗಿದೆ.

ಆಲಿಯಾ ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಜತೆ ನಟಿಸುವ ಬಯಕೆಯನ್ನು ಹೇಳಿಕೊಂಡಿದ್ದರು. ‘ಪುಷ್ಪ’ ಚಿತ್ರ ನೋಡಿದ ಕುಟುಂಬದವರು ‘ಆಲೂ, ನೀನು ಅಲ್ಲು ಜತೆ ನಟಿಸುವುದು ಯಾವಾಗ?’ ಎಂದು ಪ್ರಾಸವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದರು. ಅಲ್ಲದೇ ಅಂತಹ ಅವಕಾಶ ಸಿಕ್ಕರೆ ನಟಿಸುವುದಾಗಿಯೂ ಆಲಿಯಾ ತಿಳಿಸಿದ್ದರು.

ಇತ್ತೀಚೆಗೆ ಸಮಂತಾ ಜತೆ ಅವಕಾಶ ಸಿಕ್ಕರೆ ನಟಿಸುವುದಾಗಿಯೂ ಆಲಿಯಾ ಹೇಳಿಕೊಂಡಿದ್ದರು. ’ಫ್ಯಾಮಿಲಿ ಮ್ಯಾನ್ 2’ ಸರಣಿಯಲ್ಲಿ  ಸಮಂತಾ ನಟನೆಯನ್ನು ಹೊಗಳಿದ್ದ ಆಲಿಯಾ, ‘ಆಕ್ಷನ್ ಸಿನಿಮಾದಲ್ಲಿ ಸಮಂತಾ ಜತೆ ನಟಿಸಲು ಅವಕಾಶ ಸಿಕ್ಕರೆ ಖುಷಿ’ ಎಂದು ನುಡಿದಿದ್ದರು.

ಇದನ್ನೂ ಓದಿ:

ಅಲ್ಲು ಅರ್ಜುನ್ ಜತೆ ನಟಿಸಲು ತುದಿಗಾಲಲ್ಲಿ ನಿಂತಿರುವ ಬಾಲಿವುಡ್ ತಾರೆಯರು; ಮನದಿಂಗಿತ ಹೇಳಿಕೊಂಡ ಆಲಿಯಾ ಭಟ್

Samantha: ಸಮಂತಾ ಜತೆ ಆ್ಯಕ್ಷನ್ ಚಿತ್ರದಲ್ಲಿ ನಟಿಸಬೇಕು; ಆಲಿಯಾ ಭಟ್​ಗೆ ಹೀಗೊಂದು ಆಸೆ

Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು