ಅಲ್ಲು ಅರ್ಜುನ್ ಜತೆ ನಟಿಸಲು ತುದಿಗಾಲಲ್ಲಿ ನಿಂತಿರುವ ಬಾಲಿವುಡ್ ತಾರೆಯರು; ಮನದಿಂಗಿತ ಹೇಳಿಕೊಂಡ ಆಲಿಯಾ ಭಟ್

Allu Arjun | Alia Bhatt: ಬಾಲಿವುಡ್ ನಟಿ ಆಲಿಯಾ ಭಟ್​ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಪ್ರಸ್ತುತ ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದಲ್ಲಿ ಅವರು ಬ್ಯುಸಿಯಾಗಿದ್ದಾರೆ. ‘ಪುಷ್ಪ’ ಚಿತ್ರವನ್ನು ವೀಕ್ಷಿಸಿರುವ ನಟಿ ಇದೀಗ ಹೊಸ ಬಯಕೆಯೊಂದನ್ನು ಮುಂದಿಟ್ಟಿದ್ದಾರೆ.

ಅಲ್ಲು ಅರ್ಜುನ್ ಜತೆ ನಟಿಸಲು ತುದಿಗಾಲಲ್ಲಿ ನಿಂತಿರುವ ಬಾಲಿವುಡ್ ತಾರೆಯರು; ಮನದಿಂಗಿತ ಹೇಳಿಕೊಂಡ ಆಲಿಯಾ ಭಟ್
ಆಲಿಯಾ ಭಟ್, ಅಲ್ಲು ಅರ್ಜುನ್
Follow us
TV9 Web
| Updated By: shivaprasad.hs

Updated on:Feb 11, 2022 | 3:03 PM

ಟಾಲಿವುಡ್​ ನಟ ಅಲ್ಲು ಅರ್ಜುನ್ (Allu Arjun) ‘ಪುಷ್ಪ: ದಿ ರೈಸ್’ (Pushpa: The Rise) ಚಿತ್ರದ ಮುಖಾಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. ಅಷ್ಟೇ ಅಲ್ಲ, ದೇಶವನ್ನೂ ಮೀರಿ ಪುಷ್ಪದ ಕ್ರೇಜ್ ಹವಾ ಸೃಷ್ಟಿಸಿದೆ. ವಿವಿಧ ದೇಶಗಳ ಸೆಲೆಬ್ರಿಟಿಗಳು ಪುಷ್ಪ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ; ಡೈಲಾಗ್​ಗಳಿಗೆ ತಮ್ಮ ಲಿಪ್ ಸಿಂಕ್ ಮಾಡುತ್ತಿದ್ದಾರೆ. ಈ ಟ್ರೆಂಡ್ ಬಾಲಿವುಡ್​ ಚಿತ್ರರಂಗವನ್ನೂ ಬಿಟ್ಟಿಲ್ಲ. ಈಗಾಗಲೇ ಹಲವು ತಾರೆಯರು ‘ಪುಷ್ಪ’ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ ತಾವು ಅಲ್ಲು ಅರ್ಜುನ್ ಫ್ಯಾನ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ಮತ್ತೋರ್ವ ಸೂಪರ್ ಹಿಟ್ ನಟಿ ಸೇರ್ಪಡೆಯಾಗಿದ್ದಾರೆ. ಅದು ಮತ್ಯಾರೂ ಅಲ್ಲ; ಆಲಿಯಾ ಭಟ್ (Alia Bhatt)! ಬಾಲಿವುಡ್​ನ ಯಶಸ್ವಿ ನಟಿಯರಲ್ಲಿ ಒಬ್ಬರಾಗಿರುವ ಆಲಿಯಾ, ಅಲ್ಲು ಅರ್ಜುನ್ ‘ಪುಷ್ಪ’ ಚಿತ್ರಕ್ಕೆ ಶಹಬ್ಬಾಸ್​ಗಿರಿ ನೀಡಿರುವುದಲ್ಲದೇ, ಅವರ ಫ್ಯಾನ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ‘‘ನನ್ನ ಇಡೀ ಕುಟುಂಬ ಪುಷ್ಪ ಚಿತ್ರವನ್ನು ವೀಕ್ಷಿಸಿದೆ. ಎಲ್ಲರೂ ಅಲ್ಲು ಅರ್ಜುನ್ ಫ್ಯಾನ್ ಆಗಿದ್ದಾರೆ’’ ಎಂದು ಆಲಿಯಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

‘ಆಲೂ, ನೀನು ಅಲ್ಲು ಜತೆ ತೆರೆ ಹಂಚಿಕೊಳ್ಳೋದು ಯಾವಾಗ?’; ಆಲಿಯಾಗೆ ಕುಟುಂಬದವರ ಪ್ರಶ್ನೆ

‘ಪುಷ್ಪ’ ಚಿತ್ರ ನೋಡಿದ ಆಲಿಯಾ ಕುಟುಂಬದವರು ಕೇವಲ ಅಲ್ಲು ಅರ್ಜುನ್ ನಟನೆಯನ್ನು ಹೊಗಳಿ ಸುಮ್ಮನಾಗಿಲ್ಲ. ಬದಲಾಗಿ ಆಲಿಯಾಗೆ ಹೊಸ ಪ್ರಶ್ನೆ ಮುಂದಿಟ್ಟಿದ್ದಾರೆ. ಇದನ್ನು ಆಲಿಯಾ ಸ್ವತಃ ಹೇಳಿಕೊಂಡಿದ್ದಾರೆ. ‘ಆಲೂ, ನೀನು ಅಲ್ಲು ಜತೆ ಕೆಲಸ ಮಾಡುವುದು ಯಾವಾಗ?’ ಎಂದು ಕುಟುಂಬಸ್ಥರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ, ಆಲಿಯಾ ತಮ್ಮ ಮನದಿಂಗಿತವನ್ನೂ ಹೇಳಿಕೊಂಡಿದ್ದಾರೆ. ಒಂದು ವೇಳೆ ಅಲ್ಲು ಅರ್ಜುನ್ ಜತೆ ಕೆಲಸ ಮಾಡುವ ಅವಕಾಶ ಸಿಕ್ಕರೆ ನನಗೆ ಬಹಳ ಖುಷಿಯಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

‘ಪುಷ್ಪ’ವನ್ನು ಹೊಗಳಿದ ಅನುಪಮ್ ಖೇರ್:

ಬಾಲಿವುಡ್​ನ ಹಿರಿಯ ನಟ ಅನುಪಮ್ ಖೇರ್ ಪುಷ್ಪ ಚಿತ್ರವನ್ನು ಹೊಗಳಿದ್ದಾರೆ. ಪುಷ್ಪ ಚಿತ್ರ ಪಕ್ಕಾ ಪೈಸಾ ವಸೂಲ್ ಎಂದು ಕರೆದಿರುವ ಅನುಪಮ್, ಅಲ್ಲು ಅರ್ಜುನ್ ಜತೆ ನಟಿಸುವ ಆಕಾಂಕ್ಷೆಯನ್ನೂ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಡೀ ತಂಡಕ್ಕೆ ಅಭಿನಂದನೆಗಳನ್ನು ಹೇಳಿದ್ದಾರೆ ಅನುಪಮ್.

ಅನುಪಮ್ ಖೇರ್ ಹಂಚಿಕೊಂಡಿರುವ ಟ್ವೀಟ್:

‘ಪುಷ್ಪ’ ಚಿತ್ರ ಅಲ್ಲು ಅರ್ಜುನ್ ವೃತ್ತಿ ಜೀವನದ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರವಾಗಿ ದಾಖಲಾಗಿದೆ. ಹಿಂದಿ ಅವತರಣಿಕೆಯೊಂದೇ ನೂರು ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ 300 ಕೋಟಿ ದಾಟಿದೆ ಎಂದು ವರದಿಗಳು ಹೇಳಿವೆ. ‘ಪುಷ್ಪ’ದ ಎರಡನೇ ಭಾಗ ‘ಪುಷ್ಪ: ದಿ ರೂಲ್’ಗೆ ಸಿದ್ಧತೆಗಳು ನಡೆಯುತ್ತಿದ್ದು, ಮಾರ್ಚ್​ನಿಂದ ಸೆಟ್ಟೇರುವ ನಿರೀಕ್ಷೆ ಇದೆ.

ಇದನ್ನೂ ಓದಿ:

Rashmika Mandanna: ನಿಮ್ಮನ್ನು ಮದುವೆ ಆಗುವವರು ತುಂಬಾನೇ ಲಕ್ಕಿ ಎಂದ ರಶ್ಮಿಕಾ ಮಂದಣ್ಣ

‘ಪರಭಾಷೆಯ ಯಾವ ಚಿತ್ರಕ್ಕೂ ಕಮ್ಮಿ ಇಲ್ಲ ಜೇಮ್ಸ್​ ಟೀಸರ್​’; ಹಾಡಿ ಹೊಗಳಿದ ಪುನೀತ್​ ಫ್ಯಾನ್ಸ್​

Published On - 2:57 pm, Fri, 11 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ