‘ಪರಭಾಷೆಯ ಯಾವ ಚಿತ್ರಕ್ಕೂ ಕಮ್ಮಿ ಇಲ್ಲ ಜೇಮ್ಸ್ ಟೀಸರ್’; ಹಾಡಿ ಹೊಗಳಿದ ಪುನೀತ್ ಫ್ಯಾನ್ಸ್
James Movie Teaser: ‘ಪಿಆರ್ಕೆ ಆಡಿಯೋ’ ಮೂಲಕ ‘ಜೇಮ್ಸ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ಬಹುನಿರೀಕ್ಷಿತ ‘ಜೇಮ್ಸ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ನಿರ್ದೇಶಕ ಚೇತನ್ಕುಮಾರ್ ಅವರು ಈ ಚಿತ್ರವನ್ನು ಅದ್ದೂರಿಯಾಗಿ ಕಟ್ಟಿಕೊಡುತ್ತಿದ್ದಾರೆ ಎಂಬುದಕ್ಕೆ ಈ ಟೀಸರ್ನಲ್ಲಿ ಸಾಕ್ಷಿ ಸಿಕ್ಕಿದೆ. ಟೀಸರ್ ನೋಡಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು (Puneeth Rajkumar Fans) ಫಿದಾ ಆಗಿದ್ದಾರೆ. ಎಲ್ಲರಿಂದಲೂ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಈ ಮೂಲಕ ‘ಜೇಮ್ಸ್’ (James Kannada Movie) ಸಿನಿಮಾ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ‘ಪರಭಾಷೆಯ ಯಾವ ಚಿತ್ರಕ್ಕೂ ಜೇಮ್ಸ್ ಸಿನಿಮಾ ಟೀಸರ್ ಕಮ್ಮಿ ಇಲ್ಲ. ಅಪ್ಪು ಅವರು ತುಂಬ ಯಂಗ್ ಆಗಿ ಕಾಣಿಸುತ್ತಿದ್ದಾರೆ. ಈ ರೀತಿ ಕ್ವಾಲಿಟಿ ಸಿನಿಮಾ ನೀಡಿದರೆ ನಾವು ಹಿಂದೆಂದಿಗಿಂತಲೂ ಭರ್ಜರಿಯಾಗಿ ಸೆಲೆಬ್ರೇಟ್ ಮಾಡುತ್ತೇವೆ’ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ‘ಪುನೀತ್ ರಾಜ್ಕುಮಾರ್ ಅವರು ನಮಗೆ ಸ್ಫೂರ್ತಿ. ಜೇಮ್ಸ್ ಎಷ್ಟು ದಿನ ಪ್ರದರ್ಶನ ಕಾಣಲಿದೆಯೋ ಅಷ್ಟು ದಿನಗಳ ಕಾಲ ಚಿತ್ರಮಂದಿರದ ಎದುರು ಅನ್ನದಾನ, ನೇತ್ರದಾನ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದಿದ್ದಾರೆ ಅಪ್ಪು ಫ್ಯಾನ್ಸ್. ‘ಪಿಆರ್ಕೆ ಆಡಿಯೋ’ ಮೂಲಕ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಮಾ.17ರಂದು ಈ ಸಿನಿಮಾ ಕನ್ನಡದ ಜೊತೆ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ.
ಇದನ್ನೂ ಓದಿ:
‘ಜೇಮ್ಸ್’ ಚಿತ್ರಕ್ಕೆ ಹೇಗೆ ಡಬ್ಬಿಂಗ್ ಮಾಡಿದ್ನೋ ಗೊತ್ತಿಲ್ಲ, ದೇವರೇ ನನಗೆ ಶಕ್ತಿ ಕೊಟ್ಟಿರಬೇಕು: ಶಿವಣ್ಣ
ಈ ಶಾಲೆಯಲ್ಲಿ ಪುನೀತ್ ಫೋಟೋಗೆ ದಿನವೂ ಪೂಜೆ! ಪ್ರತಿ ವರ್ಷ 15 ಮಕ್ಕಳ ದತ್ತು ಸ್ವೀಕಾರ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

