- Kannada News Photo gallery Puneeth Rajkumar starring James Kannada Movie teaser released Puneeth Acting stills amazed fans
James Teaser: ಪವರ್ಫುಲ್ ‘ಜೇಮ್ಸ್‘ ನೋಡಿ ಫ್ಯಾನ್ಸ್ ಫಿದಾ; ಇಲ್ಲಿದೆ ಮೈನವಿರೇಳಿಸುವ ಪುನೀತ್ ಆಕ್ಷನ್ ಫೋಟೋಗಳು
Puneeth Rajkumar | Appu: ಪುನೀತ್ ರಾಜ್ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರದ ಹೊಸ ಟೀಸರ್ ರಿಲೀಸ್ ಆಗಿದೆ. ಅಪ್ಪು ಸಖತ್ ಸ್ಟೈಲಿಶ್ ಆಗಿ, ಮಾಸ್ ಆಗಿ ಕಾಣಿಸಿಕೊಂಡಿದ್ದು ಆಕ್ಷನ್ ದೃಶ್ಯಗಳು ಮೈನವಿರೇಳಿಸುವಂತಿದೆ. ‘ಜೇಮ್ಸ್’ ಟೀಸರ್ನಲ್ಲಿ ಗಮನಸೆಳೆಯುತ್ತಿರುವ ಅಪ್ಪು ಸ್ಟಿಲ್ಗಳು ಇಲ್ಲಿವೆ.
Updated on: Feb 11, 2022 | 12:33 PM

ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಜೇಮ್ಸ್’ ಟೀಸರ್ ರಿಲೀಸ್ ಆಗಿದೆ. ಪವರ್ಫುಲ್ ಜೇಮ್ಸ್ ಆಗಿ ಸ್ಟೈಲಿಶ್ ಆಗಿ, ಮಾಸ್ ಆಗಿ ಅಪ್ಪು ಕಾಣಿಸಿಕೊಂಡಿದ್ದಾರೆ. (Credits: PRK Audio/ Youtube)

ಟೀಸರ್ನಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿದ್ದು, ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿಸಿದೆ. (Credits: PRK Audio/ Youtube)

ವಿಭಿನ್ನ ಲುಕ್ಗಳಲ್ಲಿ ಪುನೀತ್ ಮಾಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನು ಚಿತ್ರ ಖಚಿತಪಡಿಸಿದೆ. (Credits: PRK Audio/ Youtube)

ಜೇಮ್ಸ್ ಟೀಸರ್ನಲ್ಲಿರುವ ಮೈನವಿರೇಳಿಸುವ ಆಕ್ಷನ್ ದೃಶ್ಯಗಳ ಸ್ಟಿಲ್ಗಳು ಇಲ್ಲಿವೆ. (Credits: PRK Audio/ Youtube)

‘ಜೇಮ್ಸ್’ ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. (Credits: PRK Audio/ Youtube)

ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರಲಿದೆ. (Credits: PRK Audio/ Youtube)

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. (Credits: PRK Audio/ Youtube)

ಟೀಸರ್ ಅಭಿಮಾನಿಗಳಲ್ಲಿ ಸಖತ್ ನಿರೀಕ್ಷೆ ಹುಟ್ಟಿಸಿದ್ದು, ಮಾರ್ಚ್ 17ರಂದು ಜೇಮ್ಸ್ ಚಿತ್ರವನ್ನು ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದಾರೆ.



















