ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ವಿದ್ಯಾರ್ಥಿಗಳು ಪಾಲಿಸುವ ವಿಶ್ವಾಸ ವ್ಯಕ್ತಪಡಿಸಿದರು ಶಿಕ್ಷಣ ಸಚಿವ ಬಿ ಸಿ ನಾಗೇಶ

TV9kannada Web Team

TV9kannada Web Team | Edited By: Arun Belly

Updated on: Feb 11, 2022 | 4:08 PM

ಕಾಲೇಜುಗಳನ್ನು ಸಹ ಓಪನ್ ಮಾಡುವ ಬಗ್ಗೆ ಮಾತಾಡಿದ ಸಚಿವರು ಸೋಮವಾರ ಸಾಯಂಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ಕರೆಯಲಿದ್ದು ಆ ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಗುವುದು ಮತ್ತು ಅಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರದ ಮೇಲೆ ಕಾಲೇಜುಗಳನ್ನು ನಡೆಸುವ ಅನುಮತಿ ನೀಡಲಾಗುವುದು ಎಂದು  ಹೇಳಿದರು.

ಹಿಜಾಬ್-ಕೇಸರಿ ಶಾಲು ವಿವಾದ (Hijab-Kesari Shawl Row) ಪ್ರಕರಣ ವಿಚಾರಣೆ ನಡೆಸುತ್ತಿರುವ ರಾಜ್ಯ ಹೈಕೋರ್ಟ್ (The High Court) ಒಂದು ಮಧ್ಯಂತರ ಆದೇಶವೊಂದನ್ನು ನೀಡಿದ್ದು, ಸೋಮವಾರ ವಿಚಾರಣೆಯನ್ನು (hearing) ಮುಂದುವರಿಸಲಾಗುವುದು ಮತ್ತು ತಾನು ತೀರ್ಪು ನೀಡುವವರೆಗೆ ವಿದ್ಯಾರ್ಥಿಗಳು ಹಿಜಾಬ್ ಆಗಲೀ ಕೇಸರಿ ಶಾಲಾಗಲೀ ಅಥವಾ ಧಾರ್ಮಿಕ ಸಂಕೇತಗಳನ್ನು ಬಿಂಬಿಸುವ ಯಾವುದೇ ವಸ್ತುವನ್ನು ಧರಿಸದೆ ತಾವು ವ್ಯಾಸಂಗ ಮಾಡುತ್ತಿರುವ ಶಾಲಾ ಕಾಲೇಜುಗಳಿಗೆ ಹೋಗಬೇಕೆಂದು ಹೇಳಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ (BC Nagesh) ಅವರು ವಿದ್ಯಾರ್ಥಿಗಳು ಕೋರ್ಟಿನ ಮಧ್ಯಂತರ ಆದೇಶವನ್ನು ಪಾಲಿಸಿ ಧಾರ್ಮಿಕತೆನ್ನು ಬಿಂಬಿಸುವ ಯಾವ ವಸ್ತ್ರವಾಗಲೀ ಅಥವಾ ವಸ್ತುವಾಗಲೀ ಧರಿಸದೆ, ಪ್ರದರ್ಶಿಸಿದೆ ತರಗತಿಗಳನ್ನು ಅಟೆಂಡ್ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮಾಧ್ಯಮದವರೊಂದಿಗೆ ಶುಕ್ರವಾರ ಮಾತಾಡಿದ ಸಚಿವರು, ‘ನಾವೆಲ್ಲ, ದೇಶವನ್ನು ಮತ್ತು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸುವ ಜನಗಳಾಗಿದ್ದೇವೆ, ನ್ಯಾಯಾಲಯಗಳು ನೀಡುವ ಆದೇಶವನ್ನು ಪಾಲಿಸುವ, ಅದಕ್ಕೆ ಬದ್ಧರಾಗುವ ಪ್ರವೃತ್ತಿ ನಮ್ಮೆಲ್ಲರಲ್ಲೂ ಇದೆ, ನಮ್ಮ ರಾಜ್ಯದಲ್ಲಿ ಹೈಕೋರ್ಟ್ ಆದೇಶಗಳಿಗೆ ವ್ಯತಿರಿಕ್ತವಾಗಿ ಯಾರೂ ನಡೆದುಕೊಂಡ ಉದಾಹರಣೆ ಇಲ್ಲ. ನಾವು ಮುಂದಿನ ವಾರದಿಂದ ಹೈಸ್ಕೂಲುಗಳನ್ನು ಆರಂಭಿಸುತ್ತಿದ್ದೇವೆ ಮತ್ತು ಮಕ್ಕಳು ಕೇವಲ ಸಮವಸ್ತ್ರ ಮಾತ್ರ ಧರಿಸಿ ಶಾಲೆಗಳಿಗೆ ಬರುತ್ತಾರೆ ಎಂಬ ವಿಶ್ವಾಸ ನಮಗಿದೆ,’ ಎಂದು ಹೇಳಿದರು.

ಕಾಲೇಜುಗಳನ್ನು ಸಹ ಓಪನ್ ಮಾಡುವ ಬಗ್ಗೆ ಮಾತಾಡಿದ ಸಚಿವರು ಸೋಮವಾರ ಸಾಯಂಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ಕರೆಯಲಿದ್ದು ಆ ಸಭೆಯಲ್ಲಿ ವಿಷಯವನ್ನು ಚರ್ಚಿಸಲಾಗುವುದು ಮತ್ತು ಅಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರದ ಮೇಲೆ ಕಾಲೇಜುಗಳನ್ನು ನಡೆಸುವ ಅನುಮತಿ ನೀಡಲಾಗುವುದು ಎಂದು  ಹೇಳಿದರು.

ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಕಟ್ಟುನಿಟ್ಟಾಗಿ ಶಾಲಾ ಮತ್ತು ಕಾಲೇಜು ಆವರಣಗಳಲ್ಲಿ ಜಾರಿಗೆ ತರುವ ಹೊಣೆಗಾರಿಕೆ ಆಯಾ ವಿದ್ಯಾಲಯಗಳ ಮೇಲೂ ಇದೆ.

ಇದನ್ನೂ ಓದಿ: ಚುನಾವಣೆಗೆ ಬೇರೇನೂ ವಿಷಯವಿಲ್ಲ ಅಂತ ಹಿಜಾಬ್ ವಿಷಯ ದೊಡ್ಡದು ಮಾಡ್ತಿದ್ದಾರೆ: ಇಬ್ರಾಹಿಂ ಆರೋಪ

Follow us on

Click on your DTH Provider to Add TV9 Kannada