ಶಾರುಖ್​ ಖಾನ್​ ಹೊಸ ಲುಕ್​ ವೈರಲ್​; ಇದು ಯಾವ ಸಿನಿಮಾ ಪೋಸ್ಟರ್​?

ಶಾರುಖ್​ ಕರಿಯ ಕೋಟ್​ ಹಾಕಿ ನಿಂತಿದ್ದಾರೆ. ಅವರು​ ಗಡ್ಡ ಬಿಟ್ಟಿದ್ದಾರೆ. ತಲೆಯಲ್ಲಿ ಉದ್ದನೆಯ ಕೂದಲಿದೆ. ಅವರ ಈ ಲುಕ್​ ಫ್ಯಾನ್​ ಪೇಜ್​ಗಳಲ್ಲಿ ವೈರಲ್​ ಆಗುತ್ತಿದೆ.

ಶಾರುಖ್​ ಖಾನ್​ ಹೊಸ ಲುಕ್​ ವೈರಲ್​; ಇದು ಯಾವ ಸಿನಿಮಾ ಪೋಸ್ಟರ್​?
ಶಾರುಖ್​ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 20, 2022 | 6:01 PM

Shah Rukh Khanಶಾರುಖ್​ ಖಾನ್​ ಅವರು (Shah Rukh Khan) ಬಾಲಿವುಡ್​ನಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ಅವರ ಚಾರ್ಮ್​ ಕೊಂಚ ಮಂಕಾಗಿದೆ. 2018ರಲ್ಲಿ ತೆರೆಗೆ ಬಂದ ‘ಝೀರೋ’ ಸಿನಿಮಾ (Zero Movie) ಕೊನೆ. ಅದಾದ ಬಳಿಕ ಅವರ ನಟನೆಯ ಯಾವುದೇ ಸಿನಿಮಾಗಳು ತೆರೆಗೆ ಬಂದಿಲ್ಲ. ಈಗ ಎರಡು ಹೊಸ ಸಿನಿಮಾಗಳ ಕೆಲಸಗಳು ಭರದಿಂದ ಸಾಗುತ್ತಿವೆ. ಅವರ ನಟನೆಯ ‘ಪಠಾಣ್​’ ಚಿತ್ರದ (Pathan Movie) ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಇದಲ್ಲದೆ, ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್​ ಕಟ್​ ಹೇಳುತ್ತಿರುವ ಚಿತ್ರದಲ್ಲೂ ಶಾರುಖ್​ ನಟಿಸುತ್ತಿದ್ದಾರೆ. ಈ ಎರಡೂ ಚಿತ್ರ ತಂಡದಿಂದ ಯಾವುದೇ ಪೋಸ್ಟರ್​ಗಳು ಅಥವಾ ಫಸ್ಟ್​ ಲುಕ್​ ರಿಲೀಸ್​ ಆಗಿಲ್ಲ. ಹೀಗಿರುವಾಗಲೇ ಶಾರುಖ್​ ಅವರ ಹೊಸ ಲುಕ್​ ಒಂದು ವೈರಲ್​ ಆಗಿದೆ. ಇದು ಯಾವ ಸಿನಿಮಾದ ಲುಕ್​ ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಶಾರುಖ್​ ಕರಿಯ ಕೋಟ್​ ಹಾಕಿ ನಿಂತಿದ್ದಾರೆ. ಅವರು​ ಗಡ್ಡ ಬಿಟ್ಟಿದ್ದಾರೆ. ತಲೆಯಲ್ಲಿ ಉದ್ದನೆಯ ಕೂದಲಿದೆ. ಅವರ ಈ ಲುಕ್​ ಫ್ಯಾನ್​ ಪೇಜ್​ಗಳಲ್ಲಿ ವೈರಲ್​ ಆಗುತ್ತಿದೆ. ಇದು ಜಾಹೀರಾತಿನ ಲುಕ್​ ಎಂದು ಕೆಲವರು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಹೊಸ ಸಿನಿಮಾ ಪೋಸ್ಟರ್​ ಎಂದು ಭಾವಿಸಿದ್ದಾರೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.

ಇದು ಶಾರುಖ್​ ಅವರ ಫೋಟೋಶಾಪ್​ ಮಾಡಿದ ಫೋಟೋ. 2017ರಲ್ಲಿ ಡಬೂ ರತ್ನಾನಿ ಅವರು ಶಾರುಖ್​ ಫೋಟೋಶೂಟ್​ ಮಾಡಿದ್ದರು. ಈ ಫೋಟೋವನ್ನು ಬಳಕೆ ಮಾಡಿಕೊಂಡು ಯಾರೋ ಅಭಿಮಾನಿ ಎಡಿಟ್​ ಮಾಡಿ ಹರಿಬಿಟ್ಟಿದ್ದಾರೆ. ಇದು ನೋಡೋಕೆ ಹೊಸ ಲುಕ್​ ಮಾದರಿಯಲ್ಲೇ ಕಾಣಿಸಿದೆ. ಕೆಲವರು ಶಾರುಖ್​ ಅವರ ಈ ಲುಕ್ ಇಷ್ಟಪಟ್ಟಿದ್ದಾರೆ. ನಿಜ ಜೀವನದಲ್ಲಿ ಅವರು ಇದೇ ಲುಕ್​ನಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್​ ಖಾನ್​; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್​?

80 ಕೋಟಿ ರೂಪಾಯಿಗೆ ಸೇಲ್​ ಆದ ಶಾರುಖ್​ ಖಾನ್ ಮತ್ತು ಆಲಿಯಾ ಭಟ್ ಹೊಸ​ ಚಿತ್ರ​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ