ಶೂಟಿಂಗ್​ ವೇಳೆ ತೆರೆ ಹಿಂದೆ ರಶ್ಮಿಕಾ ಮಂದಣ್ಣ ಮಾಡುವ ತರ್ಲೆ-ತಮಾಷೆಗೆ ಈ ವಿಡಿಯೋ ಸಾಕ್ಷಿ

ಶೂಟಿಂಗ್​ ವೇಳೆ ತೆರೆ ಹಿಂದೆ ರಶ್ಮಿಕಾ ಮಂದಣ್ಣ ಮಾಡುವ ತರ್ಲೆ-ತಮಾಷೆಗೆ ಈ ವಿಡಿಯೋ ಸಾಕ್ಷಿ
ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರಿಗೆ ಪ್ರತಿ ಸಿನಿಮಾದ ಗೆಲುವು ತುಂಬ ಮುಖ್ಯ ಆಗಲಿದೆ. ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾದಿಂದ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ಆಗಿದೆ.

TV9kannada Web Team

| Edited By: Madan Kumar

Mar 06, 2022 | 1:04 PM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ದೇಶಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಹಲವು ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ತುಂಬ ಬೇಡಿಕೆ ಇದೆ. ಅದರಲ್ಲೂ ‘ಪುಷ್ಪ’ ಸಿನಿಮಾ ತೆರೆಕಂಡ ಬಳಿಕ ಅವರ ಚಾರ್ಮ್​ ಹೆಚ್ಚಿದೆ. ಟಾಲಿವುಡ್​ ನಟ ಶರ್ವಾನಂದ್​ ಜೊತೆ ಅವರು ಅಭಿನಯಿಸಿರುವ ‘ಆಡವಾಳ್ಳು ಮೀಕು ಜೋಹಾರ್ಲು’ (Aadavallu Meeku Johaarlu) ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಶರ್ವಾನಂದ್​ (Sharwanand) ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿದ್ದಾರೆ. ಸೋಶಿಯಲ್​ ಮಿಡಿಯಾದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ರಶ್ಮಿಕಾ ಮಂದಣ್ಣ ಅವರು ಆ ಮೂಲಕವೂ ಸಿನಿಮಾ ಪ್ರಚಾರ ಮಾಡುತ್ತಾರೆ. ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾದ ಶೂಟಿಂಗ್​ ವೇಳೆ ಕಳೆದ ಕೆಲವು ಖುಷಿಖುಷಿಯ ಕ್ಷಣಗಳನ್ನು ಅವರೀಗ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಶೂಟಿಂಗ್​ ಸಮಯದಲ್ಲಿ ರಶ್ಮಿಕಾ ಏನೆಲ್ಲ ಮಾಡ್ತಾರೆ ಎನ್ನೋದಕ್ಕೆ ಈ ವಿಡಿಯೋದಲ್ಲಿ ಸಾಕ್ಷಿ ಇದೆ. ಸೆಟ್​ನಲ್ಲಿ ಇರುವ ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಅವರು ಸ್ನೇಹಪೂರ್ವಕವಾಗಿ ನಡೆದುಕೊಳ್ಳುತ್ತಾರೆ. ಈ ವಿಡಿಯೋ ನೋಡಿದರೆ ಅದು ತಿಳಿಯುತ್ತದೆ.

‘ಪುಷ್ಪ’ ಚಿತ್ರಕ್ಕೆ ಹೋಲಿಸಿದರೆ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್​ ಪಡೆದುಕೊಂಡಿಲ್ಲ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಿರುಮಲ ಕಿಶೋರ್​ ನಿರ್ದೇಶನ ಮಾಡಿರುವ ಈ ಸಿನಿಮಾಗೆ  ಎಸ್​ಎಲ್​ವಿ ಸಿನಿಮಾಸ್​ ಸಂಸ್ಥೆ ಬಂಡವಾಳ ಹೂಡಿದೆ. ಅಂದುಕೊಂಡ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಈ ಸಂದರ್ಭದಲ್ಲಿ ಜನರ ಗಮನ ಸೆಳೆಯಲು ಚಿತ್ರತಂಡ ಪ್ರಯತ್ನಿಸುತ್ತಿದೆ.

‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾಗೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತಿದೆ ಎಂಬುದನ್ನು ನೇರವಾಗಿ ನೋಡಿ ತಿಳಿಯಲು ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್​ನ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ಸದಾ ಖುಷಿಯಿಂದ ಕಾಲ ಕಳೆಯಲು ಇಷ್ಟ ಪಡುವ ವ್ಯಕ್ತಿ ರಶ್ಮಿಕಾ ಮಂದಣ್ಣ. ಶೂಟಿಂಗ್​ ಸಂದರ್ಭದಲ್ಲಿಯೂ ಅವರು ಹಾಗೆಯೇ ಇರುತ್ತಾರೆ. ಎಲ್ಲರ ಜೊತೆ ನಗುನಗುತ್ತಾ, ಮಾತನಾಡುತ್ತ, ಕಾಲೆಳೆಯುತ್ತ ಕೆಲಸ ಮಾಡುತ್ತಾರೆ. ಆ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಅದನ್ನೀಗ ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ಪ್ರತಿ ಸಿನಿಮಾದ ಗೆಲವು ಮುಖ್ಯ ಆಗಲಿದೆ. ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾದಿಂದ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ಆಗಿದೆ. ನಿರೀಕ್ಷಿತ ಮಟ್ಟದಲ್ಲಿ ಈ ಸಿನಿಮಾ ಮೂಡಿಬಂದಿಲ್ಲ ಎಂದು ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ವಿಮರ್ಶಕರಿಂದಲೂ ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್​ನಲ್ಲಿ ಕೂಡ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರ ನಟಿಸುತ್ತಿದ್ದಾರೆ. ಸಿದ್ದಾರ್ಥ್​ ಮಲ್ಹೋತ್ರ ಜೊತೆ ‘ಮಿಷನ್​ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ಅಭಿನಯಸಿದ್ದಾರೆ. ಅದು ಅವರ ಮೊದಲ ಬಾಲಿವುಡ್​ ಚಿತ್ರ. ಅದರ ಜೊತೆ ‘ಗುಡ್​ ಬೈ’ ಸಿನಿಮಾದಲ್ಲೂ ರಶ್ಮಿಕಾ ಬಣ್ಣ ಹಚ್ಚಿದ್ದು, ಅದರಲ್ಲಿ ಅಮಿತಾಭ್​ ಬಚ್ಚನ್​ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಆ ಸಿನಿಮಾಗಳು ತೆರೆಕಂಡು ಯಶಸ್ವಿ ಆಗಿಬಿಟ್ಟರೆ ಬಾಲಿವುಡ್​ನಲ್ಲಿ ರಶ್ಮಿಕಾ ಅವರು ಭದ್ರವಾಗಿ ನೆಲೆಕಂಡುಕೊಳ್ಳಲು ಸುಲಭ ಆಗುತ್ತದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಮದುವೆ ಆಗುತ್ತಾರೆ ಎಂಬ ಗಾಳಿಸುದ್ದಿ ಕೆಲವೇ ದಿನಗಳ ಹಿಂದೆ ಹಬ್ಬಿತ್ತು. ಅದನ್ನು ಇವರಿಬ್ಬರೂ ತಳ್ಳಿ ಹಾಕಿದ್ದಾರೆ. ಮದುವೆ ಬಗ್ಗೆ ತಾವು ಇನ್ನೂ ಆಲೋಚನೆ ಮಾಡಿಲ್ಲ ಎಂದು ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗಿನ ಸಂದರ್ಶನಲ್ಲಿ ಹೇಳಿದ್ದರು.

ಇದನ್ನೂ ಓದಿ:

‘ನಾನು ಪ್ಯಾನ್​ ಇಂಡಿಯಾ ನಟಿ ಆಗಬೇಕು’; ರಶ್ಮಿಕಾ ಮಂದಣ್ಣ ಹೀಗೆ ಹೇಳಲು ಇದೆ ಒಂದು ಮುಖ್ಯ ಕಾರಣ

ರಶ್ಮಿಕಾ ಎಕ್ಸ್​ಪ್ರೆಷನ್​ ಕ್ವೀನ್​ ಎನ್ನಲು ಇದಕ್ಕಿಂತ ಸಾಕ್ಷಿ ಬೇಕಿಲ್ಲ

Follow us on

Related Stories

Most Read Stories

Click on your DTH Provider to Add TV9 Kannada