‘ನಾನು ಶೂಟ್​ ಮಾಡಿದ ಸ್ಥಳಗಳಲ್ಲಿ ಈಗ ಬಾಂಬ್​ ಸಿಡಿಯುತ್ತಿದೆ’; ಬಾಲಿವುಡ್​ ನಿರ್ದೇಶಕನ ಬೇಸರ

2021ರ ಏಪ್ರಿಲ್​ 16ರಂದು ’99 ಸಾಂಗ್ಸ್​’ ಸಿನಿಮಾ ತೆರೆಗೆ ಬಂದಿತ್ತು. ಇಹಾನ್​ ಭಟ್​ ಹಾಗೂ ಎಡಿಲ್ಸಿ ವರ್ಗಾಸ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಎ.ಆರ್​. ರೆಹಮಾನ್​ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದರು

‘ನಾನು ಶೂಟ್​ ಮಾಡಿದ ಸ್ಥಳಗಳಲ್ಲಿ ಈಗ ಬಾಂಬ್​ ಸಿಡಿಯುತ್ತಿದೆ’; ಬಾಲಿವುಡ್​ ನಿರ್ದೇಶಕನ ಬೇಸರ
99 ಸಾಂಗ್ಸ್​ ಸಿನಿಮಾದ ಸ್ಟಿಲ್ಸ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 06, 2022 | 2:41 PM

ರಷ್ಯಾ (Russia) ದಾಳಿಗೆ ಸಿಲುಕಿರುವ ಉಕ್ರೇನ್​ಗೂ (Ukraine) ಹಾಗೂ ಭಾರತದ ಚಿತ್ರರಂಗಕ್ಕೂ ಒಂದು ನಂಟಿದೆ. ಭಾರತದ ಅನೇಕ ಸಿನಿಮಾಗಳನ್ನು ಉಕ್ರೇನ್​ನಲ್ಲಿ ಶೂಟ್​ ಮಾಡಲಾಗಿದೆ. ಆದರೆ, ಈಗ ಉಕ್ರೇನ್​ನಲ್ಲಿ ಪರಿಸ್ಥಿತಿ ಮೊದಲಿನ ರೀತಿ ಇಲ್ಲ. ಸಿನಿಮಾಗಳನ್ನು ಶೂಟ್​ ಮಾಡಿದ ಸುಂದರ ತಾಣಗಳಲ್ಲಿ ರಷ್ಯಾದ ಮಿಲಿಟರಿ ವಾಹನಗಳು ಓಡಾಡುತ್ತಿವೆ. ಅನೇಕ ಕಟ್ಟಡಗಳು ಮಿಸೈಲ್​ ಹೊಡೆತಕ್ಕೆ ಸಿಲುಕಿ ನಾಶವಾಗಿವೆ. ಈ ಬಗ್ಗೆ ನಿರ್ದೇಶಕ ವಿಶ್ವೇಶ್​ ಕೃಷ್ಣಮೂರ್ತಿ ಅವರು ಬೇಸರ ಹೊರಹಾಕಿದ್ದಾರೆ. ಅವರ ಮೊದಲ ಸಿನಿಮಾ ‘99 ಸಾಂಗ್ಸ್​​’ ಚಿತ್ರದ (99 Songs Movie) ಶೂಟಿಂಗ್​ ಉಕ್ರೇನ್​ನಲ್ಲೇ ನಡೆದಿತ್ತು.

‘ನನಗೆ ಉಕ್ರೇನ್​ನಲ್ಲಿ ಅನೇಕ ಗೆಳೆಯರಿದ್ದಾರೆ. ಅವರು ನಮ್ಮ ಸಿನಿಮಾದಲ್ಲಿ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದ್ದರು. ಅವರು ನೀಡುವ ಅಪ್​ಡೇಟ್​ಗಳನ್ನು ಓದಲು ತುಂಬಾನೇ ಕಷ್ಟವಾಗುತ್ತದೆ. ಒಳ್ಳೆಯ ತಂತ್ರಜ್ಞರ ಜತೆ ಸಿನಿಮಾ ಮಾಡೋದು ನಿಜಕ್ಕೂ ಭಾವನಾತ್ಮಕ ಪಯಣ’ ಎಂದಿದ್ದಾರೆ ವಿಶ್ವೇಶ್​.

‘ನಾವು ಇಲ್ಲಿ ಕುಳಿತು ಮಾತನಾಡುತ್ತೇವೆ. ಆದರೆ, ಅಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲು ಸಂಕಟ ಆಗುತ್ತದೆ. ನಾವು ಶೂಟ್​ ಮಾಡಿದ ಕೆಲವು ಸ್ಥಳಗಳಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದೆ. ನಾವು ಚಿತ್ರೀಕರಿಸಿದ ಅನೇಕ ಸ್ಥಳಗಳು ಬಾಂಬ್​ನಿಂದ ನಾಶಗೊಂಡಿವೆ. ನಾವು 2022ರಲ್ಲಿ ಇದ್ದೇವೆ. ಆದಾಗ್ಯೂ ಯುದ್ಧ ನಡೆಯುತ್ತಿದೆ ಎಂಬುದನ್ನು ನಾವು ಊಹಿಸಲು ಸಾಧ್ಯವಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ ವಿಶ್ವೇಶ್.

‘ಈಗ ನಡೆಯುತ್ತಿರುವ ಘಟನೆ ಬಗ್ಗೆ  ಹೇಳಲು ನನ್ನಲ್ಲಿ ಅಷ್ಟು ಮಾಹಿತಿ ಇಲ್ಲ. ಆದರೆ, ಉಕ್ರೇನ್​ ನನಗೆ ವಿಶೇಷ ಸ್ಥಳ. ದೇಶದ ಅನೇಕ ಸ್ಥಳಗಳು ನನ್ನ ಸಿನಿಮಾದಲ್ಲಿ ಇವೆ. ನನ್ನ ಸಿನಿಮಾದ ಕಥೆಗೆ ಉಕ್ರೇನ್​ ಒಂದು ಅದ್ಭುತ ಸ್ಥಳವಾಗಿತ್ತು’ ಎಂದಿದ್ದಾರೆ ವಿಶ್ವೇಶ್.

2021ರ ಏಪ್ರಿಲ್​ 16ರಂದು ’99 ಸಾಂಗ್ಸ್​’ ಸಿನಿಮಾ ತೆರೆಗೆ ಬಂದಿತ್ತು. ಇಹಾನ್​ ಭಟ್​ ಹಾಗೂ ಎಡಿಲ್ಸಿ ವರ್ಗಾಸ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಎ.ಆರ್​. ರೆಹಮಾನ್​ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದರು. ವಿಶೇಷ ಎಂದರೆ ರೆಹಮಾನ್​ ಅವರೇ ಈ ಸಿನಿಮಾಗೆ ಕಥೆ ಬರೆದಿದ್ದಾರೆ. 2011ರಲ್ಲಿ ಈ ಚಿತ್ರದ ಕಥೆಯನ್ನು ರೆಹಮಾನ್​ ಸಿದ್ಧಪಡಿಸಿದ್ದರು. 2013ರಲ್ಲಿ ಈ ಸಿನಿಮಾವನ್ನು ಎರೋಸ್ ಸಂಸ್ಥೆ​ ನಿರ್ಮಾಣ ಮಾಡಲು ಮುಂದೆ ಬಂದಿತ್ತು. ಆದರೆ, ನಂತರ ಈ ಪ್ರಾಜೆಕ್ಟ್​ನಿಂದ ಹಿಂದೆ ಸರಿದಿತ್ತು. ನಂತರ ಐಡಿಯಲ್ ಎಂಟರ್​ಟೇನ್​ಮೆಂಟ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು.

ಇದನ್ನೂ ಓದಿ: Radhika Pandit: ಜನ್ಮದಿನಕ್ಕೂ ಮುನ್ನ ಸುಂದರ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​; ಹೇಳಿದ್ದೇನು?

ರಿಲೀಸ್​ಗೆ ಸಿದ್ಧವಿರುವ ‘ಆರ್​ಆರ್​ಆರ್​’ ಚಿತ್ರಕ್ಕೆ ಸಂಕಷ್ಟ; ಎದುರಾಗಲಿದೆ ಕಾನೂನಿನ ದೊಡ್ಡ ತೊಡಕು? 

Published On - 2:41 pm, Sun, 6 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ