‘ನೀವು ಮಗಳನ್ನು ದತ್ತು ಪಡೆದಿದ್ದು ಪಬ್ಲಿಸಿಟಿ ಗಿಮಿಕ್’; ಅಭಿಮಾನಿ ಮಾತಿಗೆ ಸನ್ನಿ ಲಿಯೋನ್ ಉತ್ತರ ಏನು?
ನಿಶಾ ಬಗ್ಗೆ ಸನ್ನಿ ಗಮನ ಹರಿಸುತ್ತಿಲ್ಲ ಎಂದು ಕೆಲವರು ಟೀಕಿಸಿದ್ದರು. ‘ನಿಶಾನ ದತ್ತು ಪಡೆದಿದ್ದು ಪಬ್ಲಿಸಿಟಿ ಗಿಮಿಕ್ ಈ ಬಗ್ಗೆ ಸಂದರ್ಶನದಲ್ಲಿ ಸನ್ನಿ ಮೌನ ಮುರಿದಿದ್ದಾರೆ.

ನೀಲಿ ಚಿತ್ರ ಲೋಕವನ್ನು ತೊರೆದ ನಂತರ ಸನ್ನಿ ಲಿಯೋನ್ (Sunny Leone) ಬೇರೆಯದೇ ರೀತಿಯಲ್ಲಿ ಜೀವನ ಕಟ್ಟಿಕೊಂಡರು. ಬಾಲಿವುಡ್ಗೆ (Bollywood) ಬಂದು ಅನೇಕ ಸಿನಿಮಾಗಳಲ್ಲಿ ನಟಿಸಿದರು. ಈಗ ದಕ್ಷಿಣ ಭಾರತಕ್ಕೂ ಅವರು ಕಾಲಿಟ್ಟಿದ್ದಾರೆ. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ. ಇದರ ಜತೆಗೆ ಅನೇಕ ಸಾಮಾಜಿ ಕಾರ್ಯಗಳಲ್ಲೂ ಸನ್ನಿ ಲಿಯೋನ್ ತೊಡಗಿಕೊಂಡಿದ್ದಾರೆ. ಸನ್ನಿ ಹಾಗೂ ಅವರ ಪತಿ ಡ್ಯಾನಿಯಲ್ ವೇಬರ್ (Daniel Weber) 2017ರಲ್ಲಿ ನಿಶಾ ಹೆಸರಿನ ಬಾಲಕಿಯನ್ನು ದತ್ತು ಪಡೆದರು. ನಂತರ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ಸನ್ನಿ ತಮ್ಮ ಮಕ್ಕಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ. ಆದರೆ, ಇದು ಕೇವಲ ಪಬ್ಲಿಸಿಟಿ ಗಿಮಿಕ್ ಎಂದು ಕೆಲವರು ಟೀಕೆ ಮಾಡಿದ್ದಿದೆ. ಇದಕ್ಕೆ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ.
ಇತ್ತೀಚೆಗೆ ಸನ್ನಿ ಲಿಯೋನ್ ಅವರು ಮಕ್ಕಳ ಜತೆ ಕಳೆದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಮೂರು ಮಕ್ಕಳ ಜತೆ ಮೆಟ್ಟಿಲು ಇಳಿಯುತ್ತಿದ್ದರು. ಅವಳಿ ಮಕ್ಕಳಿಗೆ ಮೆಟ್ಟಿಲು ಇಳಿಯಲು ಸನ್ನಿ ಸಹಾಯ ಮಾಡುತ್ತಿದ್ದರು. ಆದರೆ, ನಿಶಾ ತಾನೇ ಮೆಟ್ಟಿಲು ಇಳಿದು ಬರುತ್ತಿದ್ದಳು. ಇದನ್ನು ಕಂಡ ಅನೇಕರು ಸನ್ನಿ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ನಿಶಾ ಬಗ್ಗೆ ಸನ್ನಿ ಗಮನ ಹರಿಸುತ್ತಿಲ್ಲ ಎಂದು ಕೆಲವರು ಟೀಕಿಸಿದ್ದರು. ‘ನಿಶಾನ ದತ್ತು ಪಡೆದಿದ್ದು ಪಬ್ಲಿಸಿಟಿ ಗಿಮಿಕ್ ಈ ಬಗ್ಗೆ ಡಿಎನ್ಎಗೆ ನೀಡಿದ ಸಂದರ್ಶನದಲ್ಲಿ ಸನ್ನಿ ಮೌನ ಮುರಿದಿದ್ದಾರೆ.
‘ಈ ರೀತಿ ಕಮೆಂಟ್ ಮಾಡಿದ ವ್ಯಕ್ತಿಗೂ ನನ್ನ ಲೈಫ್ಗೂ ಏನೂ ಸಂಬಂಧವಿಲ್ಲ. ಒಂದು ಫೋಟೋ ಆಧರಿಸಿ ನಾನು ಹೇಗೆ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎನ್ನುವುದನ್ನು ಜಡ್ಜ್ ಮಾಡೋದು ಬೇಡ. ನನ್ನ ಲೈಫ್ಅನ್ನು ಎಲ್ಲಿಯೋ ಕುಳಿತು ನೋಡಿ ಹೇಗೆ ನಿರ್ಧರಿಸಲಾಗುತ್ತದೆ? ನನ್ನ ಮಕ್ಕಳೇ ನನ್ನ ಕುಟುಂಬ. ಈ ರೀತಿಯ ಕಮೆಂಟ್ಗಳು ಹಾಕೋದು ನಿಜಕ್ಕೂ ಮಕ್ಕಳಾಟ ಎನಿಸುತ್ತದೆ’ ಎಂದಿದ್ದಾರೆ ಸನ್ನಿ ಲಿಯೋನ್.
‘ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಅವರ ಪಾಲಕರಿಗೆ ಗೊತ್ತಿರುತ್ತದೆ. ಈ ಬಗ್ಗೆ ಬೇರೆಯವರು ಜಡ್ಜ್ ಮಾಡೋದು ಬೇಡ. ಈ ಬಗ್ಗೆ ಕಮೆಂಟ್ ಮಾಡೋದು ನಿಲ್ಲಿಸಿ. ಸ್ವಲ್ಪ ದೊಡ್ಡವರಾಗಿ. ನಾನು ಇಷ್ಟನ್ನು ಮಾತ್ರ ಹೇಳಲು ಸಾಧ್ಯ’ ಎಂದು ಹೇಳುವ ಮೂಲಕ ಸನ್ನಿ ಸರಿಯಾದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: Sunny Leone: ಸನ್ನಿ ಲಿಯೋನ್ ಹೊಸ ಹಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನ?; ನೆಟ್ಟಿಗರ ತೀವ್ರ ವಿರೋಧ
Sunny Leone: ಸನ್ನಿ ಲಿಯೋನ್ ಕೈಯಲ್ಲಿವೆ 7 ಸಿನಿಮಾಗಳು; ನಟಿಗೆ ಯಶಸ್ಸು ತಂದುಕೊಡಲಿದೆಯೇ 2022?




