Sunny Leone: ಸನ್ನಿ ಲಿಯೋನ್ ಹೆಸರಲ್ಲಿ ಲೋನ್ ಪಡೆದ ಖದೀಮ; ಶಾಕ್ ಆದ ನಟಿ
ಸನ್ನಿ ಲಿಯೋನ್ ಕೈಯಲ್ಲಿ ಹಲವು ಸಿನಿಮಾಗಳಿವೆ. 2019ರಿಂದ ಈಚೆಗೆ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ, ಹಿಂದಿ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.
ನಟಿ ಸನ್ನಿ ಲಿಯೋನ್ (Sunny Leone) ಅವರಿಗೆ ಬಾಲಿವುಡ್ನಲ್ಲಿ ದೊಡ್ಡ ಬೇಡಿಕೆ ಇದೆ. ನೀಲಿ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದ ಅವರು, ನಂತರ ಅದನ್ನು ತೊರೆದು ಬಾಲಿವುಡ್ಗೆ ಕಾಲಿಟ್ಟರು. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಕನ್ನಡದ (Sandalwood) ವಿಶೇಷ ಹಾಡಿನಲ್ಲೂ ಸನ್ನಿ ಡ್ಯಾನ್ಸ್ ಮಾಡಿದ್ದಾರೆ. ಬೇಸರದ ಸಂಗತಿ ಎಂದರೆ ಸನ್ನಿ ಲಿಯೋನ್ಗೆ ಮೋಸ ಆಗಿದೆ! ಅವರ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್ ಪಡೆಯಲಾಗಿದೆ. ಈ ವಿಚಾರವನ್ನು ಕೇಳಿ ಸನ್ನಿ ಲಿಯೋನ್ ನಿಜಕ್ಕೂ ಶಾಕ್ ಆಗಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಬೇಸರ ತೋಡಿಕೊಂಡಿದ್ದಾರೆ. ಸನ್ನಿ ಈ ರೀತಿ ಟ್ವೀಟ್ ಮಾಡಿದ ಬೆನ್ನಲ್ಲೇ ಅನೇಕರು ಇದೇ ಮಾದರಿಯ ಟ್ವೀಟ್ ಮಾಡಿದ್ದು, ತಮಗೂ ಮೋಸ ಆಗಿದೆ ಎಂದಿದ್ದಾರೆ.
ಸನ್ನಿ ಲಿಯೋನ್ ಅವರ ನಕಲಿ ಪಾನ್ ಕಾರ್ಡ್ ಬಳಕೆ ಮಾಡಿಕೊಂಡು ಈ ಲೋನ್ ಪಡೆಯಲಾಗಿದೆ. ಧಾನಿ ಸ್ಟಾಕ್ ಲಿಮಿಟೆಡ್ ಪ್ಲಾಟ್ಫಾರ್ಮ್ನಲ್ಲಿ ಈ ಮೊಸ ನಡೆದಿದೆ. ‘ಯಾವುದೋ ಮೂರ್ಖ ನನ್ನ ಹೆಸರಲ್ಲಿ ಎರಡು ಸಾವಿರ ರೂಪಾಯಿ ಲೋನ್ ಪಡೆದಿದ್ದಾನೆ! ಸಿಬಿಲ್ ಸ್ಕೋರ್ಗೆ ತೊಂದರೆ ಆಗಿದೆ. ಇಂಡಿಯಾಬುಲ್ ಸೆಕ್ಯೂರಿಟಿ ಲಿಮಿಟೆಡ್ನಲ್ಲಿ (ಧಾನಿ ಸ್ಟಾಕ್ ಈ ಮೊದಲು ಇಂಡಿಯನ್ ಬುಲ್ ಸೆಕ್ಯೂರಿಟಿ ಆಗಿತ್ತು)ಈ ಫ್ರಾಡ್ ನಡೆದಿದೆ’ ಎಂದಿದ್ದಾರೆ ಸನ್ನಿ.
Thank you @IVLSecurities @ibhomeloans @CIBIL_Official for swiftly fixing this & making sure it will NEVER happen again. I know you will take care of all the others who have issues to avoid this in the future. NO ONE WANTS TO DEAL WITH A BAD CIBIL !!! Im ref. to my previous post.
— sunnyleone (@SunnyLeone) February 17, 2022
ಗ್ರೋಸರಿ ಮೊದಲಾದ ವಸ್ತು ಖರೀದಿ ಮಾಡಲು 5 ಲಕ್ಷ ರೂಪಾಯಿ ವರೆಗೆ ಲೋನ್ ನೀಡುವ ಸೇವೆಯನ್ನು ಧಾನಿ ಮಾಡುತ್ತಿದೆ. ಈ ರೀತಿಯಲ್ಲಿ ಟ್ವೀಟ್ ಮಾಡಿದ ನಂತರದಲ್ಲಿ ಸಂಸ್ಥೆ ಸಮಸ್ಯೆಯನ್ನು ಬಗೆಹರಿಸಿದೆ. ಈ ಬಗ್ಗೆಯೂ ಸನ್ನಿ ಟ್ವೀಟ್ ಮಾಡಿದ್ದು, ‘ಬ್ಯಾಡ್ ಸಿಬಿಲ್ ಸ್ಕೋರ್ ಯಾರಿಗೂ ಇಷ್ಟವಿರುವುದಿಲ್ಲ’ ಎಂದಿದ್ದಾರೆ. ಈ ರೀತಿಯ ಅನೇಕ ಘಟನೆಗಳು ನಡೆದ ಬಗ್ಗೆ ವರದಿ ಆಗಿವೆ.
Shocking revelation in my credit report. A loan disbursed by IVL Finance (Indiabulls) @dhanicares with my PAN number & name, addresses in Uttar Pradesh and Bihar. I have no clue. How can a disbursal happen on my name and PAN. In default already @RBI @IncomeTaxIndia @nsitharaman pic.twitter.com/LMMrwKyeit
— Aditya Kalra (@adityakalra) February 13, 2022
ಸನ್ನಿ ಲಿಯೋನ್ ಕೈಯಲ್ಲಿ ಹಲವು ಸಿನಿಮಾಗಳಿವೆ. 2019ರಿಂದ ಈಚೆಗೆ ಅವರ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ, ಹಿಂದಿ, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ವಿಶೇಷ ಹಾಡಿನಲ್ಲೂ ಅವರು ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಕಾಟನ್ಪೇಟೆಯಲ್ಲಿ ಸನ್ನಿ ಲಿಯೋನ್ ಡಾನ್ಸ್; ಮತ್ತೆ ಕರ್ನಾಟಕಕ್ಕೆ ಬಂದ ಬಾಲಿವುಡ್ ನಟಿ
ಸನ್ನಿ ಲಿಯೋನ್ ಕೈಯಲ್ಲಿವೆ 7 ಸಿನಿಮಾಗಳು; ನಟಿಗೆ ಯಶಸ್ಸು ತಂದುಕೊಡಲಿದೆಯೇ 2022?