Box Office: ಗಳಿಕೆಯಲ್ಲಿ ಆಲಿಯಾ ಚಿತ್ರದ ಹೊಸ ಮೈಲಿಗಲ್ಲು; ‘ಏಕ್ ಲವ್ ಯಾ’, ‘ವಲಿಮೈ’, ‘ಭೀಮ್ಲಾ ನಾಯಕ್’ ಕಲೆಕ್ಷನ್ ಎಷ್ಟು? 

Box Office: ಗಳಿಕೆಯಲ್ಲಿ ಆಲಿಯಾ ಚಿತ್ರದ ಹೊಸ ಮೈಲಿಗಲ್ಲು; ‘ಏಕ್ ಲವ್ ಯಾ’, ‘ವಲಿಮೈ’, ‘ಭೀಮ್ಲಾ ನಾಯಕ್’ ಕಲೆಕ್ಷನ್ ಎಷ್ಟು? 
ಸಾಂಕೇತಿಕ ಚಿತ್ರ

Box Office Collection: ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಬಾಕ್ಸಾಫೀಸ್​ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಅಜಿತ್ ನಟನೆಯ ‘ವಲಿಮೈ’, ಪವನ್ ಕಲ್ಯಾಣ್ ಅಭಿನಯದ ‘ಭೀಮ್ಲಾ ನಾಯಕ್’, ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಮೊದಲಾದ ಚಿತ್ರಗಳೂ ಕಲೆಕ್ಷನ್​ನಲ್ಲಿ ಹಿಂದೆ ಬಿದ್ದಿಲ್ಲ.

TV9kannada Web Team

| Edited By: shivaprasad.hs

Mar 05, 2022 | 4:14 PM

ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಚಿತ್ರ ವಿಶ್ವದಾದ್ಯಂತ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳಿ, ಆಲಿಯಾ (Alia Bhatt) ನಟಿಸಿದ್ದ ಚಿತ್ರ ಜನಕ್ಕೆ ಪ್ರಿಯವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಬಾಕ್ಸಾಫೀಸ್ ಕಲೆಕ್ಷನ್​ನಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಇದಕ್ಕೆ ಪೂರಕವಾಗಿ ಚಿತ್ರ ಹೊಸ ಮೈಲಿಗಲ್ಲನ್ನೂ ತಲುಪಿದೆ. ಹೌದು. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಬಾಕ್ಸಾಫೀಸ್ ಲೆಕ್ಕವನ್ನು ನಿರ್ಮಾಣ ಸಂಸ್ಥೆಯೇ ಅಧಿಕೃತವಾಗಿ ನೀಡಿದೆ. ಈ ಮೂಲಕ ಯಾವುದೇ ಊಹಾಪೋಹಕ್ಕೂ ಅವಕಾಶ ಕೊಡದ ಚಿತ್ರತಂಡ, ಗಳಿಕೆಯ ಮೊತ್ತವನ್ನು ನೇರವಾಗಿ ಜನರಿಗೆ ತಲುಪಿಸಿದೆ. ಆಲಿಯಾ ನಟನೆಯ ಚಿತ್ರ ಹೊಸ ಮೈಲಿಗಲ್ಲನ್ನು ತಲುಪಿದ್ದು, ₹ 100 ಕೋಟಿ ಕ್ಲಬ್ ಸೇರಿದೆ. ಅಜಿತ್ ನಟನೆಯ ‘ವಲಿಮೈ’ (Valimai), ಪವನ್ ಕಲ್ಯಾಣ್ ಅಭಿನಯದ ‘ಭೀಮ್ಲಾ ನಾಯಕ್’ (Bheemla Nayak), ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ (Ek Love Ya) ಮೊದಲಾದ ಚಿತ್ರಗಳೂ ಕಲೆಕ್ಷನ್​ನಲ್ಲಿ ಹಿಂದೆ ಬಿದ್ದಿಲ್ಲ. ಈ ಕುರಿತ ವಿವರ ಇಲ್ಲಿದೆ.

ಗಂಗೂಬಾಯಿ ಕಲೆಕ್ಷನ್ ರಿಪೋರ್ಟ್:

ಮೊದಲ ವಾರ ಭರ್ಜರಿ ಗಳಿಕೆ ಕಂಡಿದ್ದ ಆಲಿಯಾ ಭಟ್ ನಟನೆಯ ಚಿತ್ರ, ಎರಡನೇ ವಾರದಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಗಂಗೂಬಾಯಿ ಕಾಠಿಯಾವಾಡಿ ಚಿತ್ರವು ಬಾಕ್ಸಾಫೀಸ್​ನಲ್ಲಿ ಇದುವೆರೆಗೆ ವಿಶ್ವದಾದ್ಯಂತ ಬರೋಬ್ಬರಿ ₹ 108.3 ಕೋಟಿ ರೂ ಕಲೆಕ್ಷನ್ ಮಾಡಿದೆ. ಈ ಮಾಹಿತಿ ಹಂಚಿಕೊಂಡಿರುವ ಬನ್ಸಾಲಿ ಪ್ರೊಡಕ್ಷನ್ ಹೌಸ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದೆ. ‘ಈ ಪ್ರೀತಿಗೆ ಧನ್ಯವಾದಗಳು’ ಎಂದು ಚಿತ್ರತಂಡ ಖುಷಿ ಹಂಚಿಕೊಂಡಿದೆ. ಭಾರತೀಯ ಬಾಕ್ಸಾಫೀಸ್​ನಲ್ಲಿ ಈ ಚಿತ್ರ ಸುಮಾರು 70 ಕೋಟಿ ರೂ ಕಮಾಯಿ ಮಾಡಿದೆ.

ಫೆ.25ರಂದು ಅಂದರೆ ಕಳೆದ ವಾರ ತೆರೆಕಂಡಿದ್ದ, ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಮೊದಲ ದಿನವೇ 10.5 ಕೋಟಿ ರೂ ಬಾಚಿಕೊಂಡಿತ್ತು. ವೀಕೆಂಡ್​ನಲ್ಲಿ ಕಲೆಕ್ಷನ್ ಹೆಚ್ಚಿಸಿಕೊಂಡಿದ್ದ ಚಿತ್ರ ಶನಿವಾರ ಹಾಗೂ ಭಾನುವಾರ ಕ್ರಮವಾಗಿ ₹ 13.32 ಕೋಟಿ, ₹ 15.30 ಕೋಟಿ ಗಳಿಸಿತ್ತು. ವೀಕೆಂಡ್ ಕಳೆದರೂ ನಂತರ ಎರಡು ದಿನದಲ್ಲಿ ಚಿತ್ರದಲ್ಲಿ ಕಲೆಕ್ಷನ್ ತಗ್ಗಿರಲಿಲ್ಲ. ಆ ಎರಡು ದಿನಗಳಿಂದ ಸುಮಾರು 18 ಕೋಟಿ ರೂಗಳನ್ನು ಚಿತ್ರ ಗಳಿಸಿತ್ತು. ವಾರದ ಮಧ್ಯದಲ್ಲೂ ಚಿತ್ರದ ಗಳಿಕೆಯಲ್ಲಿ ಸ್ಥಿರತೆ ಇತ್ತು. ಇದುವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಚಿತ್ರ 73.94 ಕೋಟಿ ರೂ ಗಳಿಸಿದೆ.

ವಿವಿಧ ಭಾಷೆಗಳ ಚಿತ್ರಗಳ ಕಲೆಕ್ಷನ್ ಹೇಗಿದೆ?

ಅಮಿತಾಭ್ ಬಚ್ಚನ್ ನಟನೆಯ ‘ಝುಂಡ್’ ಚಿತ್ರವು ಮೊದಲ ದಿನವೇ 1 ಕೋಟಿ 50 ಲಕ್ಷ ರೂಪಾಯಿ ಮೊತ್ತವನ್ನು ಬಾಕ್ಸಾಫೀಸ್​ನಲ್ಲಿ ಗಳಿಸಿದೆ. ಈ ಬಗ್ಗೆ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಪೋಸ್ಟ್ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಈ ಚಿತ್ರ ಎರಡು ಮತ್ತು ಮೂರನೇ ದಿನದಲ್ಲಿ ಅಂದರೆ ವಾರಾಂತ್ಯದಲ್ಲಿ ಉತ್ತಮ ಗಳಿಕೆ ಮಾಡಬಲ್ಲದು ಎಂದು ಹೇಳಲಾಗುತ್ತಿದೆ.

ಅಜಿತ್ ಅಭಿನಯದ ‘ವಲಿಮೈ’ ಕೂಡ ಉತ್ತಮ ಗಳಿಕೆ ಮಾಡುತ್ತಿದ್ದು, ಚಿತ್ರದ ಒಟ್ಟಾರೆ ಗಳಿಕೆ 200 ಕೋಟಿ ರೂ ದಾಟಿದೆ ಎನ್ನಲಾಗಿದೆ. ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ನಟಿಸಿರುವ ‘ಭೀಮ್ಲಾ ನಾಯಕ್’ ಕೂಡ ಉತ್ತಮವಾಗಿ ಗಳಿಸಿದೆ. ಇದುವರೆಗೆ ಸುಮಾರು 170 ಕೋಟಿ ರೂ ಬಾಚಿಕೊಂಡಿದೆ ಎಂದು ಬಾಕ್ಸಾಫೀಸ್ ವರದಿಗಳು ಹೇಳಿವೆ.

‘ಏಕ್ ಲವ್ ಯಾ’ ಕಲೆಕ್ಷನ್ ಎಷ್ಟು?

ಸ್ಯಾಂಡಲ್​ವುಡ್​​ನ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ನಿರ್ಮಾಪಕಿ ರಕ್ಷಿತಾ ಪ್ರೇಮ್ ಬಳ್ಳಾರಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಚಿತ್ರ ಚೆನ್ನಾಗಿ ಓಡುತ್ತಿದೆ. 2ನೇ ವಾರದಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರ ಸ್ಪಂದನೆ ಉತ್ತಮವಾಗಿದೆ’’ ಎಂದಿದ್ದಾರೆ. ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿರುವ ರಕ್ಷಿತಾ ಪ್ರೇಮ್, ಗುಟ್ಟು ಕಾಯ್ದುಕೊಂಡಿದ್ದಾರೆ. ‘‘ಚಿತ್ರದ ಕಲೆಕ್ಷನ್ ಚೆನ್ನಾಗಿದೆ. ನಮ್ಮ ಮ್ಯಾನೇಜರ್ ಇನ್ನೂ ಲೆಕ್ಕ ಕೊಟ್ಟಿಲ್ಲ’’ ಎಂದು ರಕ್ಷಿತಾ ನುಡಿದಿದ್ದಾರೆ.

ಇದನ್ನೂ ಓದಿ:

Sreeleela: ಶ್ರೀಲೀಲಾ ಬತ್ತಳಿಕೆಗೆ ಹೊಸ ಸಿನಿಮಾ; ಕಿರೀಟಿ ರೆಡ್ಡಿ ಮೊದಲ ಚಿತ್ರಕ್ಕೆ ನಾಯಕಿಯಾದ ‘ಕಿಸ್’ ಬೆಡಗಿ

ಪ್ಯಾನ್​ ಇಂಡಿಯಾ ಸ್ಟಾರ್​ ಆದ್ರೂ ಪ್ರಭಾಸ್​ಗೆ ಇದೆ ಭಾಷೆ ಸಮಸ್ಯೆ; ಹೌದೆಂದು ಒಪ್ಪಿಕೊಂಡ ನಟ

Follow us on

Most Read Stories

Click on your DTH Provider to Add TV9 Kannada