ಪ್ರಭಾಸ್​-ಪೂಜಾ ನಡುವಿನ ಆಪ್ತತೆ ತೋರಿಕೆಗೆ ಮಾತ್ರ? ಇಬ್ಬರ ನಡುವೆ ಯಾವುದೂ ಸರಿಯಿಲ್ಲ

ಪ್ರಭಾಸ್​-ಪೂಜಾ ನಡುವಿನ ಆಪ್ತತೆ ತೋರಿಕೆಗೆ ಮಾತ್ರ? ಇಬ್ಬರ ನಡುವೆ ಯಾವುದೂ ಸರಿಯಿಲ್ಲ
ಪೂಜಾ-ಪ್ರಭಾಸ್

ಸೆಟ್​ನಲ್ಲಿ ಪೂಜಾ ಹೆಗ್ಡೆ ಸಾಕಷ್ಟು ಸಮಯ ಹಾಳು ಮಾಡುತ್ತಾರೆ ಎನ್ನುವ ಬಗ್ಗೆ ಪ್ರಭಾಸ್​ಗೆ ಅಸಮಾಧಾನ ಇತ್ತು. ಇದನ್ನು ಹೇಳಿದಾಗ ಅವರು ಆ್ಯಟಿಟ್ಯೂಡ್ ತೋರಿಸಿದ್ದರು. ಈ ವಿಚಾರದಲ್ಲಿ ಪ್ರಭಾಸ್​ ಅವರು ಪೂಜಾ ಹೆಗ್ಡೆ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿತ್ತು.

TV9kannada Web Team

| Edited By: Rajesh Duggumane

Mar 05, 2022 | 4:37 PM

ಪ್ರಭಾಸ್ (Prabhas)​ ಹಾಗೂ ಪೂಜಾ ಹೆಗ್ಡೆ (Pooja Hegde) ಇದೇ ಮೊದಲ ಬಾರಿಗೆ ‘ರಾಧೆ ಶ್ಯಾಮ್​’ (Radhe Shhyam) ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳಿಂದ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಿದೆ. ಪೂಜಾ ಹಾಗೂ ಪ್ರಭಾಸ್​ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಆದರೆ, ಇಬ್ಬರ ನಡುವೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಮತ್ತೆ ಹುಟ್ಟಿಕೊಂಡಿದೆ. ಈ ಮೊದಲು ಇದೇ ವದಂತಿ ಹರಿದಾಡಿತ್ತು. ಈ ಬಗ್ಗೆ ಚಿತ್ರತಂಡದವರೇ ಸ್ಪಷ್ಟನೆ ನೀಡಿದ್ದರು. ಆ ಬಳಿಕ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ, ಇವರ ನಡುವೆ ಯಾವುದೂ ಸರಿಯಿಲ್ಲ, ತೋರಿಕೆಗೆ ಈ ರೀತಿ ಮಾಡುತ್ತಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಪೂಜಾ ಹೆಗ್ಡೆ ಬಗ್ಗೆ ಪ್ರಭಾಸ್​ ಅಸಮಾಧಾನಗೊಂಡಿದ್ದರು ಎಂದು ಈ ಮೊದಲು ವರದಿ ಆಗಿತ್ತು. ಪೂಜಾ ಹೆಗ್ಡೆ ಜತೆ ನಟನೆ ಮಾಡುವ ಸಂದರ್ಭದಲ್ಲಿ ಮಾತ್ರ ಪ್ರಭಾಸ್​ ಮಾತನಾಡುತ್ತಿದ್ದರು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಈ ಸಿನಿಮಾದ ನಿರ್ಮಾಣ ಸಂಸ್ಥೆ ಯು-ವಿ ಕ್ರಿಯೇಷನ್​ ಇದನ್ನು ಸಹಿಸಿಕೊಂಡಿರಲಿಲ್ಲ. ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿ ಈ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿತ್ತು.

ಸೆಟ್​ನಲ್ಲಿ ಪೂಜಾ ಹೆಗ್ಡೆ ಸಾಕಷ್ಟು ಸಮಯ ಹಾಳು ಮಾಡುತ್ತಾರೆ ಎನ್ನುವ ಬಗ್ಗೆ ಪ್ರಭಾಸ್​ಗೆ ಅಸಮಾಧಾನ ಇತ್ತು. ಇದನ್ನು ಹೇಳಿದಾಗ ಅವರು ಆ್ಯಟಿಟ್ಯೂಡ್ ತೋರಿಸಿದ್ದರು. ಈ ವಿಚಾರದಲ್ಲಿ ಪ್ರಭಾಸ್​ ಅವರು ಪೂಜಾ ಹೆಗ್ಡೆ ಬಗ್ಗೆ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿತ್ತು. ಸ್ಪಷ್ಟನೆ ನೀಡಿದ ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಈಗ ಮತ್ತೆ ಈ ಸುದ್ದಿ ಮುನ್ನೆಲೆಗೆ ಬಂದಿದೆ.

ನಮ್ಮಿಬ್ಬರ ನಡುವೆ ಏನೂ ಆಗಿಲ್ಲ ಎಂಬ ರೀತಿಯಲ್ಲಿ ಪೂಜಾ ಹಾಗೂ ಪ್ರಭಾಸ್ ಇರುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಟ್ರೇಲರ್ ಲಾಂಚ್​ ಕಾರ್ಯಕ್ರಮದಲ್ಲೂ ಇಬ್ಬರೂ ಇದೇ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಆದರೆ, ಇಬ್ಬರೂ ಮಾಡುತ್ತಿರುವುದು ನಟನೆ ಎನ್ನುತ್ತಿವೆ ಮೂಲಗಳು. ಈ ಬಗ್ಗೆ ಈ ಜೋಡಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

‘ರಾಧೆ ಶ್ಯಾಮ್​’ ಸಿನಿಮಾ ಮಾರ್ಚ್​ 11ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಯುರೋಪ್​ನಲ್ಲಿ ಈ ಸಿನಿಮಾದ ಕಥೆ ಸಾಗಲಿದೆ. ಯುರೋಪ್​ ಮಾದರಿಯ ಸೆಟ್​​ಗಳನ್ನು ಹಾಕಿ ಹಲವು ದೃಶ್ಯಗಳನ್ನು ಭಾರತದಲ್ಲೇ ಶೂಟ್​ ಮಾಡಲಾಗಿದೆ.

ಇದನ್ನೂ ಓದಿ: Sreeleela: ಶ್ರೀಲೀಲಾ ಬತ್ತಳಿಕೆಗೆ ಹೊಸ ಸಿನಿಮಾ; ಕಿರೀಟಿ ರೆಡ್ಡಿ ಮೊದಲ ಚಿತ್ರಕ್ಕೆ ನಾಯಕಿಯಾದ ‘ಕಿಸ್’ ಬೆಡಗಿ

ಪ್ಯಾನ್​ ಇಂಡಿಯಾ ಸ್ಟಾರ್​ ಆದ್ರೂ ಪ್ರಭಾಸ್​ಗೆ ಇದೆ ಭಾಷೆ ಸಮಸ್ಯೆ; ಹೌದೆಂದು ಒಪ್ಪಿಕೊಂಡ ನಟ

Follow us on

Related Stories

Most Read Stories

Click on your DTH Provider to Add TV9 Kannada