‘ಗಂಗೂಬಾಯಿ..’ ಚಿತ್ರಕ್ಕೆ 20 ಕೋಟಿ ರೂ. ಸಂಬಳ ಪಡೆದ ಆಲಿಯಾ ಭಟ್; ಅಜಯ್​ ದೇವಗನ್​ಗೆ ಸಿಕ್ಕಿದ್ದೆಷ್ಟು?

Alia Bhatt Remuneration: ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಮೂಲಕ ಆಲಿಯಾ ಭಟ್​ ಅವರ ಒಂದು ಆಸೆ ಈಡೇರಿದೆ. ಜೊತೆಗೆ ಅವರಿಗೆ ಕೈತುಂಬ ಸಂಭಾವನೆ ಕೂಡ ಸಿಕ್ಕಿದೆ.

‘ಗಂಗೂಬಾಯಿ..’ ಚಿತ್ರಕ್ಕೆ 20 ಕೋಟಿ ರೂ. ಸಂಬಳ ಪಡೆದ ಆಲಿಯಾ ಭಟ್; ಅಜಯ್​ ದೇವಗನ್​ಗೆ ಸಿಕ್ಕಿದ್ದೆಷ್ಟು?
ಆಲಿಯಾ
Follow us
| Updated By: ಮದನ್​ ಕುಮಾರ್​

Updated on: Mar 05, 2022 | 5:05 PM

ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರ ಬತ್ತಳಿಕೆಯಿಂದ ಬಂದಿರುವ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ಸೂಪರ್​ ಹಿಟ್​ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಮೋಡಿ ಮಾಡಿದೆ. ಮುಖ್ಯ ಪಾತ್ರದಲ್ಲಿ ಆಲಿಯಾ ಭಟ್​ ಅವರು ಅಭಿನಯಿಸಿದ್ದು, ಅತಿಥಿ ಪಾತ್ರದಲ್ಲಿ ಅಜಯ್​ ದೇವಗನ್​ ಕಾಣಿಸಿಕೊಂಡಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಸದ್ದು ಮಾಡಿದೆ. ಗಂಗೂಬಾಯಿ ಕಾಠಿಯಾವಾಡಿ ಜೀವನ ಆಧರಿಸಿ ಈ ಚಿತ್ರ ಮೂಡಿಬಂದಿದ್ದು, ಆಲಿಯಾ ಭಟ್​ (Alia Bhatt) ಅವರು ವೇಶ್ಯೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆಲಿಯಾಗೆ ಬಾಲಿವುಡ್​ನಲ್ಲಿ ಭರ್ಜರಿ ಡಿಮ್ಯಾಂಡ್​ ಇದೆ. ಈಗಾಗಲೇ ಅವರು ಹಲವು ಹಿಟ್​ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರ ಸೂಪರ್​ ಹಿಟ್​ ಸಿನಿಮಾಗಳ ಸಾಲಿಗೆ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಕೂಡ ಸೇರಿಕೊಂಡಿದೆ. ಈ ಚಿತ್ರಕ್ಕಾಗಿ ಅವರು ತೆಗೆದುಕೊಂಡ ಸಂಭಾವನೆ (Alia Bhatt Remuneration) ಎಷ್ಟು ಎಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಆಲಿಯಾ ಭಟ್​ ಅವರು ಬರೋಬ್ಬರಿ 20 ಕೋಟಿ ರೂಪಾಯಿಯನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸಂಜಯ್ ಲೀಲಾ ಬನ್ಸಾಲಿ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಜೊತೆ ಕೆಲಸ ಮಾಡಬೇಕು ಎಂದು ಎಲ್ಲ ಕಲಾವಿದರೂ ಬಯಸುತ್ತಾರೆ. ಅದೇ ರೀತಿ ಆಲಿಯಾ ಭಟ್​ ಕೂಡ ಆಸೆ ಇಟ್ಟುಕೊಂಡಿದ್ದರು. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಮೂಲಕ ಅವರ ಆಸೆ ಈಡೇರಿತು. ಜೊತೆಗೆ ಅವರಿಗೆ ಕೈತುಂಬ ಸಂಭಾವನೆ ಕೂಡ ಸಿಕ್ಕಿದೆ. ಆಲಿಯಾ ಭಟ್​ ಅವರಿಗೆ 20 ಕೋಟಿ ರೂಪಾಯಿ ಸಿಕ್ಕಿದ್ದರೆ, ಅಜಯ್​ ದೇವಗನ್​ ಅವರು 11 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಆಗಿದೆ.

ಜಯಂತಿ ಲಾಲ್​ ಗಡಾ ಮತ್ತು ಸಂಜಯ್​ ಲೀಲಾ ಬನ್ಸಾಲಿ ಅವರು ಜೊತೆಯಾಗಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬಹುಕೋಟಿ ರೂ. ಬಜೆಟ್​ನಲ್ಲಿ ಈ ಚಿತ್ರ ತಯಾರಾಗಿದೆ. ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್​ ಬಂದಿದೆ. ಚಿತ್ರಮಂದಿರದಲ್ಲಿ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒಂದು ವಾರ ಕಳೆಯುವುದರೊಳಗೆ 73.94 ಕೋಟಿ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಬಾಲಿವುಡ್​ನಲ್ಲಿ ಮಹಿಳಾ ಪ್ರಧಾನ ಕಥೆಗೂ ಪ್ರೇಕ್ಷಕರು ಮನ್ನಣೆ ನೀಡುತ್ತಾರೆ ಎಂಬುದು ಈ ಸಿನಿಮಾ ಮೂಲಕ ಸಾಬೀತಾಗಿದೆ. ಈ ಗೆಲುವಿನಿಂದ ಆಲಿಯಾ ಭಟ್​ ಅವರ ಚಾರ್ಮ್​ ಹೆಚ್ಚಿದೆ.

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನ ನಟಿ ಕಂಗನಾ ರಣಾವತ್​ ಅವರು ಅಪಶಕುನ ನುಡಿದಿದ್ದರು. ‘ಈ ಸಿನಿಮಾದಿಂದ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಸುಟ್ಟು ಹೋಗಲಿದೆ’ ಎಂದು ಹೇಳಿದ್ದರು. ಆದರೆ ಅವರ ಮಾತು ಸುಳ್ಳಾಯಿತು. ಚಿತ್ರಕ್ಕೆ ಉತ್ತಮ ಕಲೆಕ್ಷನ್​ ಆಗಿದೆ. ಅದನ್ನು ಕಂಡು ಕಂಗನಾ ಮನಸ್ಸು ಬದಲಾಯಿತು. ನಂತರ ಚಿತ್ರತಂಡದ ಪರವಾಗಿ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು.

‘ದಕ್ಷಿಣ ಭಾರತದ ಸಿನಿಮಾಗಳ ದಾಖಲೆಯ ಕಲೆಕ್ಷನ್​ನಿಂದಾಗಿ ಚಿತ್ರಮಂದಿರಗಳಲ್ಲಿ ಮತ್ತೆ ಕಳೆ ಬಂದಿದೆ ಎಂಬುದನ್ನು ಕೇಳಿ ಖುಷಿ ಆಯಿತು. ಸೂಪರ್​ ಸ್ಟಾರ್​ ಡೈರೆಕ್ಟರ್​, ಸ್ಟಾರ್​ ಹೀರೋ ಇರುವ ಒಂದು ಮಹಿಳಾ ಪ್ರಧಾನ ಸಿನಿಮಾದಿಂದ ಹಿಂದಿ ಚಿತ್ರರಂಗ ಕೂಡ ಪುಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಪುಟ್ಟ ಹೆಜ್ಜೆಗಳೇ ಆಗಿರಬಹುದು, ಆದರೆ ಅವು ಮಹತ್ವವಾದವು. ಕಷ್ಟದ ಪರಿಸ್ಥಿತಿಯಲ್ಲಿ ಇರುವ ಚಿತ್ರಮಂದಿರಗಳಿಗೆ ಈ ಬೆಳವಣಿಗೆ ತುಂಬ ಮುಖ್ಯ. ಗ್ರೇಟ್​! ಇಂಥ ಸಂದರ್ಭದಲ್ಲಿ ಮೂವೀ ಮಾಫಿಯಾದವರು ಒಳ್ಳೆಯ ಕೆಲಸ ಮಾಡ್ತಾರೆ ಅಂಥ ನಾನು ನಿರೀಕ್ಷಿಸಿರಲಿಲ್ಲ. ಅವರು ಒಳ್ಳೆಯದು ಮಾಡಿದಾಗ ನಾನು ಖಂಡಿತಾ ಹೊಗಳುತ್ತೇನೆ. ಇನ್ನೂ ಒಳ್ಳೆಯದನ್ನು ನಿರೀಕ್ಷಿಸುತ್ತೇನೆ’ ಎಂದು ಕಂಗನಾ ರಣಾವತ್​ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ:

Alia Bhatt: ‘ಗಂಗೂಬಾಯಿ ಕಾಠಿಯಾವಾಡಿ’ ಪ್ರಚಾರದ ವೇಳೆ ಎಡವಟ್ಟು; ಸ್ವಲ್ಪದರಲ್ಲೇ ಬಚಾವಾದ ಆಲಿಯಾ

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ನೋಡಿ ಆಲಿಯಾ​ ಅಭಿಮಾನಿಗಳು ಏನಂದ್ರು? ಇಲ್ಲಿದೆ ಜನರ ವಿಮರ್ಶೆ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್