Janhvi Kapoor: 25ನೇ ವಸಂತಕ್ಕೆ ಕಾಲಿಟ್ಟ ಜಾಹ್ನವಿ; ಇಲ್ಲಿವೆ ನಟಿಯ ಕುರಿತ ಕುತೂಹಲಕಾರಿ ವಿಚಾರಗಳು
Janhvi Kapoor Photos: ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ಗೆ 25ನೇ ಜನ್ಮದಿನದ ಸಂಭ್ರಮ. ಖ್ಯಾತ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಪುತ್ರಿಯಾಗಿದ್ದರೂ ಚಿತ್ರರಂಗದಲ್ಲಿ ಸ್ವಂತ ಪರಿಶ್ರಮದಿಂದ ಜಾಹ್ನವಿ ಗುರುತಿಸಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಭಿನ್ನತೆ ಕಾಯ್ದುಕೊಂಡಿರುವುದು ಅವರ ವಿಶೇಷತೆ. ಇಲ್ಲಿವೆ ನಟಿಯ ವಿಶೇಷ ಫೋಟೋಗಳು.
Updated on: Mar 06, 2022 | 9:35 AM

ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಇಂದು 25ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ತಾರೆಯರ ಪುತ್ರಿಯಾದ ಜಾಹ್ನವಿ ಕುರಿತ ಕುತೂಹಲಕರ ವಿಚಾರಗಳು ಇಲ್ಲಿವೆ.

ಜಾಹ್ನವಿ ಕಪೂರ್ ಬಾಲಿವುಡ್ ಪ್ರವೇಶಿಸಿದ್ದು 2018ರಲ್ಲಿ ತೆರೆಕಂಡ ‘ಧಡಕ್’ ಚಿತ್ರದ ಮೂಲಕ. ಪುತ್ರಿಯ ಈ ಚಿತ್ರದ ಬಗ್ಗೆ ಶ್ರೀದೇವಿಗೆ ಅಪಾರ ನಿರೀಕ್ಷೆಗಳಿತ್ತು. ಆದರೆ ‘ಧಡಕ್’ ರಿಲೀಸ್ ಆಗುವ ಮುನ್ನವೇ ಅವರು ನಿಧನರಾದರು. ಈ ಚಿತ್ರಕ್ಕೆ ಜಾಹ್ನವಿ ಜೀ ಸಿನಿ ಪ್ರಶಸ್ತಿ ಪಡೆದಿದ್ದರು.

ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದ ಜಾಹ್ನವಿ ನಂತರ ಕಾಣಿಸಿಕೊಂಡಿದ್ದು 2020ರಲ್ಲಿ ತೆರೆಕಂಡ ‘ಘೋಸ್ಟ್ ಸ್ಟೋರೀಸ್’ನಲ್ಲಿ. ಅದೇ ವರ್ಷ ತೆರೆಕಂಡ ‘ಗುಂಜನ್ ಸಕ್ಸೇನಾ’ ಜಾಹ್ನವಿಗೆ ಅಪಾರ ಖ್ಯಾತಿ ತಂದುಕೊಟ್ಟಿತು.

ವಿಭಿನ್ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಜಾಹ್ನವಿ, 2021ರಲ್ಲಿ ತೆರೆಕಂಡ ಹಾರರ್ ಕಾಮಿಡಿ ಚಿತ್ರ ‘ರೂಹಿ’ಯಲ್ಲೂ ಗಮನ ಸೆಳೆದಿದ್ದರು.

ಜಾಹ್ನವಿ ಬತ್ತಳಿಕೆಯಲ್ಲಿ ಸದ್ಯ ಮೂರು ಚಿತ್ರಗಳಿವೆ. ‘ದೋಸ್ತಾನಾ 2’, ‘ಮಿಲಿ’, ‘ಗುಡ್ ಲಕ್ ಜೆರ್ರಿ’ಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಜಾಹ್ನವಿ ಕಪೂರ್



















