ನಟಿ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ನಟನೆಯಿಂದ ಅವರು ಅಂತರ ಕಾಯ್ದುಕೊಂಡಿದ್ದರೂ ಅಭಿಮಾನಿಗಳ ಜತೆ ಸಂಪರ್ಕದಲ್ಲಿರೋಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಾರೆ.
1 / 5
ರಾಧಿಕಾ ಪಂಡಿತ್ ಅವರು ಮಾರ್ಚ್ 8ರಂದು 38ನೇ ವರ್ಷದ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಪುನೀತ್ ನಿಧನ ಹಿನ್ನೆಲೆಯಲ್ಲಿ ಅವರು ಬರ್ತ್ಡೇ ಆಚರಿಸಿಕೊಳ್ಳೋದೆ ಇರಬಹುದು. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ರಾಧಿಕಾಗೆ ವಿಶ್ ಮಾಡಲು ಸಿದ್ಧರಾಗಿದ್ದಾರೆ.
2 / 5
ರಾಧಿಕಾ ಪಂಡಿತ್ ಬರ್ತ್ಡೇಗೂ ಎರಡು ದಿನ ಮೊದಲು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ‘ಹ್ಯಾಪಿ ವೀಕೆಂಡ್’ ಎಂದು ಬರೆದುಕೊಂಡಿದ್ದಾರೆ. ಮೆಟ್ಟಿಲ ಮೇಲೆ ಕುಳಿತ ಫೋಟೋ ಇದಾಗಿದೆ.
3 / 5
ರಾಧಿಕಾ ಪಂಡಿತ್ ಅವರು ಸಂಪೂರ್ಣವಾಗಿ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಆಯ್ರಾ ಹಾಗೂ ಯಥರ್ವ್ ಜತೆಗೆ ಕಳೆಯುವ ಸಂತಸದ ಕ್ಷಣವನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.
4 / 5
ಇತ್ತೀಚೆಗೆ ರಾಧಿಕಾ ಪಂಡಿತ್ ಅವರು ಸಂಬಂಧಿಯ ಮದುವೆಯಲ್ಲಿ ಪಾಲ್ಗೊಂಡಿದ್ದರು. ಈ ಸಂತಸದ ಕ್ಷಣವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ವೈರಲ್ ಆಗಿತ್ತು.