ದೇಹದ ತೂಕ ಇಳಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಒಂದಷ್ಟು ನಿರಂತರ ಸಾಧನೆ, ಆಹಾರ ಸೇವನೆಯಲ್ಲಿ ಕಟ್ಟುನಿಟ್ಟು, ಜೀವನಶೈಲಿಯಲ್ಲಿ ಬದಲಾವಣೆ ಎಲ್ಲವೂ ಮುಖ್ಯ. ಅದಕ್ಕಾಗಿ ಇಲ್ಲಿದೆ ಒಂದಷ್ಟು ಸಲಹೆ.
1 / 8
ದೇಹದಲ್ಲಿ ತೂಕ ಹೆಚ್ಚಲು ಮುಖ್ಯ ಕಾರಣ ಎಂದರೆ ಅದು ತಪ್ಪಾದ ಆಹಾರ ಸೇವನೆ ಪದ್ಧತಿ. ಪ್ರತೀ 2-3 ಗಂಟೆಗಳಿಗೊಮ್ಮೆ ತಿನ್ನುವುದರಿಂದ ಅನಗತ್ಯ ಬೊಜ್ಜು ಕಾಡುತ್ತದೆ. ಆದ್ದರಿಂದ ಆಹಾರ ಸೇವನೆಯ ಶೈಲಿಯನ್ನು ಸರಿಯಾಗಿ ರೂಢಿಸಿಕೊಳ್ಳಿ.
2 / 8
ನಿದ್ದೆ ದೇಹವನ್ನು ಸಮತೋಲನದಲ್ಲಿಡಲು ಸಹಾಯಕ. ಅದ್ದರಿಂದ ಸರಿಯಾದ ಸಮಯದಲ್ಲಿ ನಿದ್ದೆ ಮಾಡಿ. ದೇಹಕ್ಕೆ ಅಗತ್ಯವಿರುವಷ್ಟು ವಿಶ್ರಾಂತಿ ನೀಡಿ. ನಿದ್ದೆಗೆಡುವುದರಿಂದಲೂ ಬೊಜ್ಜು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
3 / 8
ವಾಕಿಂಗ್ ದೇಹದ ಬೊಜ್ಜು ಕರಗಿಸಿಲು ಇರುವ ಸುಲಭ ವಿಧಾನ. ಪ್ರತಿದಿನ ಕನಿಷ್ಠ ಒಂದು ಕಿಮೀ ನಷ್ಟು ದೂರವಾದರೂ ನಡೆಯಿರಿ.
4 / 8
ಪ್ಯಾಕೇಜ್ ಆಹಾರಗಳನ್ನು ಆದಷ್ಟು ಅವೈಡ್ ಮಾಡಿ. ಅದರ ಬದಲು, ಹಸರಿ ತರಕಾರಿಗಳ ಸಲಾಡ್, ಹಣ್ಣುಗಳನ್ನು ಸೇವಿಸಿ.
5 / 8
ಆತಂಕದಿಂದ ದೂರವಾಗಿ. ಆತಂಕ ಖಿನ್ನತೆಯಲ್ಲಿರುವವರು ಹೆಚ್ಚು ತಿನ್ನಲು ಇಷ್ಟಪಡುತ್ತಾರೆ. ಇದು ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ.
6 / 8
ಏರೋಬಿಕ್ಸ್ ವ್ಯಾಯಾಮಗಳನ್ನು ದಿನನಿತ್ಯದ ಅಭ್ಯಾಸವಾಗಿಸಿಕೊಳ್ಳಿ. ಇವು ದೇಹದ ವಿವಿಧ ಬಾಗಗಳಲ್ಲಿ ಸೇರಿಕೊಂಡ ಬೊಜ್ಜನ್ನು ಕರಗಿಸುತ್ತದೆ.
7 / 8
ಭಾರ ಎತ್ತು ಅಭ್ಯಾಸ ಮಾಡಿಕೊಳ್ಳಿ. ವಿಶ್ವ ಆರೋಗ್ಯ ಸಂಸ್ಥೆಯೂ ಹೇಳುವಂತೆ ಭಾರ ಎತ್ತುವುದರಿಂದ ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ದೊರುಕುತ್ತದೆ. ಇದರಿಂದ ಕೊಬ್ಬು ಕರಗುತ್ತದೆ.