Alia Bhatt: ‘ಗಂಗೂಬಾಯಿ ಕಾಠಿಯಾವಾಡಿ’ ಪ್ರಚಾರದ ವೇಳೆ ಎಡವಟ್ಟು; ಸ್ವಲ್ಪದರಲ್ಲೇ ಬಚಾವಾದ ಆಲಿಯಾ

Alia Bhatt: ‘ಗಂಗೂಬಾಯಿ ಕಾಠಿಯಾವಾಡಿ’ ಪ್ರಚಾರದ ವೇಳೆ ಎಡವಟ್ಟು; ಸ್ವಲ್ಪದರಲ್ಲೇ ಬಚಾವಾದ ಆಲಿಯಾ

Gangubai Kathiawadi: ಬಾಲಿವುಡ್ ನಟಿ ಆಲಿಯಾ ಭಟ್​ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಯಶಸ್ಸಿನಲ್ಲಿದ್ದಾರೆ. ಹೀಗಿದ್ದಾಗ್ಯೂ ಅವರು ಚಿತ್ರದ ಪ್ರಚಾರವನ್ನು ನಿಲ್ಲಿಸಿಲ್ಲ. ಪ್ರಚಾರದ ವೇಳೆ ಆಲಿಯಾಗೆ ಹಾನಿಯಾಗುವ ಘಟನೆಯೊಂದು ನಡೆದಿದ್ದು, ಛಾಯಾಗ್ರಾಹಕರ ಸಮಯಪ್ರಜ್ಞೆಯಿಂದ ನಟಿ ಬಚಾವಾಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

TV9kannada Web Team

| Edited By: shivaprasad.hs

Mar 02, 2022 | 2:45 PM

ಬಾಲಿವುಡ್ ನಟಿ ಆಲಿಯಾ ಭಟ್​ಗೆ (Alia Bhatt) ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ದೊಡ್ಡ ಯಶಸ್ಸನ್ನು ತಂದುಕೊಡುತ್ತಿದೆ. ಚಿತ್ರದ ರಿಲೀಸ್​ಗೂ ಮುನ್ನ ಹಲವು ಕಾರಣದಿಂದ ರಿಲೀಸ್​ಗೆ ತೊಡಕುಂಟಾಗಿತ್ತು. ಆದರೆ ಎಲ್ಲವನ್ನೂ ಮೆಟ್ಟಿನಿಂತು ಚಿತ್ರವನ್ನು ರಿಲೀಸ್ ಮಾಡಲಾಗಿತ್ತು. ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯವರ (Sanjay Leela Bhansali) ಹಲವು ವರ್ಷಗಳ ಶ್ರಮಕ್ಕೆ ಉತ್ತಮವಾಗಿಯೇ ಪ್ರತಿಕ್ರಿಯೆ ದೊರಕುತ್ತಿದೆ. ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿರುವ ಚಿತ್ರಕ್ಕೆ ಪ್ರೇಕ್ಷಕರೂ ಜೈ ಎಂದಿದ್ದಾರೆ. ಇದೇ ಕಾರಣದಿಂದ ಭಾರತದ ಹಲವು ಪ್ರದೇಶಗಳಲ್ಲಿ ಚಿತ್ರವು ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ವಿಶೇಷವಾಗಿ ಆಲಿಯಾ ನಟನೆಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ತಮ್ಮ ಪಾತ್ರಗಳ ಆಯ್ಕೆಯಿಂದಲೇ ಆಲಿಯಾ ಬಾಲಿವುಡ್​ನಲ್ಲಿ ಭದ್ರವಾಗಿ ಬೇರೂರುತ್ತಿದ್ದಾರೆ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ. ಇದೆಲ್ಲದರಿಂದ ಆಲಿಯಾ ಖುಷಿಯಾಗಿದ್ದಾರೆ. ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಚಿತ್ರತಂಡ ಪ್ರಚಾರ ಕಾರ್ಯವನ್ನು ನಿಲ್ಲಿಸಿಲ್ಲ. ವಿವಿಧ ರೂಪದಲ್ಲಿ ಪ್ರಚಾರ ನಡೆಯುತ್ತಲೇ ಇದೆ. ಪ್ರಸ್ತುತ ಆಲಿಯಾ ಮುಂಬೈನಲ್ಲಿ ಡಬಲ್ ಡೆಕ್ಕರ್​ ಬಸ್​ನಲ್ಲಿ ಪ್ರಚಾರ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದೆ.

ತೆರೆದ ಡಬಲ್ ಡಕ್ಕರ್ ಬಸ್​ನಲ್ಲಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಪರ ಆಲಿಯಾ ಪ್ರಚಾರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅನಾಹುತವೊಂದು ಸಂಭವಿಸುವುದರಲ್ಲಿತ್ತು. ಇದು ಸುತ್ತಮುತ್ತ ಇದ್ದ ಪಾಪರಾಜಿಗಳು (ಛಾಯಾಗ್ರಾಹಕರು) ಹಾಗೂ ತಂಡದವರಿಂದ ತಪ್ಪಿದೆ. ಈ ಸಂದರ್ಭದ ವಿಡಿಯೋ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಪಾಪರಾಜಿಗಳ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾಮಾನ್ಯವಾಗಿ ತಾರೆಯರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವಾಗ ಬಹಳ ಎಚ್ಚರಿಕೆ ವಹಿಸುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಆಲಿಯಾಗೂ ಹೀಗೇ ಆಗಿದೆ. ಡಬಲ್ ಡಕ್ಕರ್ ಪಯಣಿಸುತ್ತಿದ್ದ ಅವರು ಸ್ವಲ್ಪದರಲ್ಲೇ ಎಡವಟ್ಟಿಗೆ ಸಿಲುಕುತ್ತಿದ್ದರು. ಆದರೆ ಪಾಪರಾಜಿಗಳೇ ಆಲಿಯಾಗೆ ಸಹಾಯ ಮಾಡಿದ್ದಾರೆ ಮತ್ತು ಅವರಿಗೆ ಹಾನಿಯಾಗುವುದನ್ನು ತಪ್ಪಿಸಿದ್ದಾರೆ.

ಆಲಿಯಾ ಪ್ರಯಾಣಿಸುತ್ತಿದ್ದ ಬಸ್ ಓಪನ್ ಬಸ್. ಪ್ರಯಾಣದ ವೇಳೆ ಮರವೊಂದರ ರೆಂಬೆ-ಕೊಂಬೆಗಳು ಆಲಿಯಾ ಮುಖಕ್ಕೆ ಬಡಿಯುವುದರಲ್ಲಿತ್ತು. ಸುತ್ತಲೂ ಜನರನ್ನು ನೋಡುತ್ತಿದ್ದ ಆಲಿಯಾಗೆ ಇದರ ಅರಿವಾಗಿರಲಿಲ್ಲ. ತಕ್ಷಣ ನೆರವಿಗೆ ಧಾವಿಸಿದ ಪಾಪರಾಜಿಗಳು ಆಲಿಯಾಗೆ ಮರದ ರೆಂಬೆಗಳು ತಾಗದಂತೆ ತಡೆದಿದ್ದಾರೆ. ಸಾಲುಸಾಲು ಮರದ ರೆಂಬೆಗಳು ಇದ್ದ ಕಾರಣ, ಆಲಿಯಾ ನಂತರ ಸೀರೆಯ ಸೆರಗಿನಿಂದ ಮುಖ, ತಲೆಯನ್ನು ಮುಚ್ಚಿಕೊಂಡಿದ್ದಾರೆ. ಮರ ಎಲ್ಲವೂ ಪಾಸ್ ಆಯ್ತು ಎಂದು ಸುತ್ತಮುತ್ತ ಇದ್ದವರು ಹೇಳಿದ ನಂತರವೇ ಆಲಿಯಾ ತಲೆ ಎತ್ತಿದ್ದಾರೆ.ಹೀಗೆ ಆಲಿಯಾಗೆ ಪ್ರಚಾರದ ವೇಳೆ ನಡೆಯುತ್ತಿದ್ದ ಅನಾಹುತವೊಂದು ಸ್ವಲ್ಪದರಲ್ಲೇ ಮಿಸ್ ಆಗಿದೆ. ಈ ಸಂದರ್ಭದ ವಿಡಿಯೋ ಸೆರೆಯಾಗಿದ್ದು, ಪಾಪರಾಜಿಗಳ ಸಮಯಪ್ರಜ್ಞೆಗೆ ಎಲ್ಲರೂ ಶಹಬ್ಬಾಸ್ ಎಂದಿದ್ದಾರೆ.

ವೈರಲ್ ಆಗಿರುವ ವಿಡಿಯೋ ಇಲ್ಲಿದೆ:

 

View this post on Instagram

 

A post shared by Viral Bhayani (@viralbhayani)

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಆಲಿಯಾ ಭಟ್ ಅವರೊಂದಿಗೆ ಅಜಯ್ ದೇವಗನ್, ವಿಜಯ್ ರಾಜ್, ಸೀಮಾ ಪಹ್ವಾ, ಶಂತನು ಮಹೇಶ್ವರಿ ಮೊದಲಾದವರು ಕಾಣಿಸಿಕೊಂಡಿದ್ದಾರೆ.

ಬಸ್​ನಲ್ಲಿ ಆಲಿಯಾ ಪ್ರಚಾರದಲ್ಲಿ ತೊಡಗಿದ್ದು ಹೀಗೆ:

ಬಾಕ್ಸಾಫೀಸ್​ನಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಕಳೆದ ವೀಕೆಂಡ್​ನಲ್ಲಿ ಉತ್ತಮ ಮೊತ್ತ ಗಳಿಸಿದೆ. ಶುಕ್ರವಾರ ತೆರೆ ಕಂಡಿದ್ದ ಚಿತ್ರ ಭಾನುವಾರ ಅಂತ್ಯದವರೆಗೆ ಸುಮಾರು 39.12 ಕೋಟಿ ರೂ ಬಾಚಿಕೊಂಡಿತ್ತು. ಹಿಂದಿ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳಲ್ಲಿ 50 ಪ್ರತಿಶತ ಮಾತ್ರ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ‘ಗಂಗೂಬಾಯಿ..’ ಕಲೆಕ್ಷನ್ ವಾಸ್ತವವಾಗಿ ಉತ್ತಮವಾಗಿದೆ ಎಂದು ಬಾಕ್ಸಾಫೀಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್​ ಶೆಟ್ಟಿ ಅಸಮಾಧಾನ

‘ಗಂಡ ಹಗಲು-ರಾತ್ರಿ ಕುಡಿದು, ತಲೆಗೆ ಹೊಡಿತಿದ್ದ’; ಲಾಕಪ್​ ಶೋನಲ್ಲಿ ಕಷ್ಟ ತೋಡಿಕೊಂಡ ಪೂನಂ ಪಾಂಡೆ

Follow us on

Related Stories

Most Read Stories

Click on your DTH Provider to Add TV9 Kannada