ಸೋನಾಕ್ಷಿ ಸಿನ್ಹಾ-ಸಲ್ಮಾನ್​ ಖಾನ್​ ಸೀಕ್ರೆಟ್​ ಮದುವೆ? ವೈರಲ್​ ಆಗಿರುವ ಫೋಟೋದ ಅಸಲಿಯತ್ತು ಇಲ್ಲಿದೆ

ಸೋನಾಕ್ಷಿ ಸಿನ್ಹಾ-ಸಲ್ಮಾನ್​ ಖಾನ್​ ಸೀಕ್ರೆಟ್​ ಮದುವೆ? ವೈರಲ್​ ಆಗಿರುವ ಫೋಟೋದ ಅಸಲಿಯತ್ತು ಇಲ್ಲಿದೆ
ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ

ಸಲ್ಮಾನ್​ ಖಾನ್​ ಕುಟುಂಬದ ಜೊತೆ ಸೋನಾಕ್ಷಿ ಸಿನ್ಹಾ ಆಪ್ತವಾಗಿದ್ದಾರೆ. ಆದರೆ ಸಲ್ಲು ಜೊತೆ ಮದುವೆ ಆಗುವ ಬಗ್ಗೆ ಅವರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

TV9kannada Web Team

| Edited By: Madan Kumar

Mar 02, 2022 | 11:47 AM

ನಟ ಸಲ್ಮಾನ್​ ಖಾನ್ (Salman Khan) ಅವರ ಮದುವೆ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​ ಎನಿಸಿಕೊಂಡಿರುವ ಅವರು ಹಲವರ ಜೊತೆ ಡೇಟಿಂಗ್​ ಮಾಡಿದ್ದರು. ಆದರೆ ಯಾರೂ ಕೂಡ ಸಲ್ಲು ಜೊತೆ ಮದುವೆ ಆಗಲು ಮುಂದೆ ಬರಲಿಲ್ಲ. ಈಗ ಸಲ್ಮಾನ್​ ಖಾನ್​ ಮತ್ತು ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮದುವೆ ಆಗಿದ್ದಾರೆ ಎಂಬ ಗಾಳಿ ಸುದ್ದಿ ಎಲ್ಲೆಲ್ಲೂ ಹರಡಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ. ಸಲ್ಮಾನ್​ ಖಾನ್​ ಮತ್ತು ಸೋನಾಕ್ಷಿ ಸಿನ್ಹಾ ಅವರು ನವ ದಂಪತಿಯ ರೀತಿಯಲ್ಲಿ ಮದುವೆ ಡ್ರೆಸ್​ನಲ್ಲಿ ಕಾಣಿಸಿಕೊಂಡಿರುವ ಈ ಫೋಟೋ ವೈರಲ್​ ಆಗಿದೆ. ಈ ಜೋಡಿಯ ನಡುವೆ ಉತ್ತಮ ಒಡನಾಟ ಇದೆ ಎಂಬುದು ನಿಜ. ಆದರೆ ಮದುವೆ (Salman Khan Marriage) ಆಗಿದ್ದಾರೆ ಎಂಬುದೆಲ್ಲ ಬರೀ ಕಟ್ಟುಕಥೆ. ಇದೊಂದು ಎಡಿಟೆಡ್​ ಫೋಟೋ. ಬೇರೆ ಯಾರದ್ದೋ ಮದುವೆ ಫೋಟೋಗೆ ಸೋನಾಕ್ಷಿ ಸಿನ್ಹಾ ಹಾಗೂ ಸಲ್ಮಾನ್​ ಖಾನ್​ ಅವರ ಮುಖವನ್ನು ಎಡಿಟ್​ ಮಾಡಿ ಈ ರೀತಿ ವೈರಲ್​ ಮಾಡಲಾಗಿದೆ. ಅದನ್ನು ನಿಜ ಎಂದು ನಂಬಿಕೊಂಡವರು ನಂತರ ಸತ್ಯ ಏನೆಂಬುದು ತಿಳಿದು ಪೆಚ್ಚಾಗಿದ್ದಾರೆ.

2010ರಲ್ಲಿ ಸಲ್ಮಾನ್​ ಖಾನ್​ ನಟನೆಯ ‘ದಬಂಗ್​’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುವ ಅವಕಾಶ ಸೋನಾಕ್ಷಿ ಸಿನ್ಹಾ ಅವರಿಗೆ ಸಿಕ್ಕಿತು. ಮೊದಲ ಸಿನಿಮಾದಲ್ಲಿಯೇ ಅವರು ಭರ್ಜರಿ ಯಶಸ್ಸು ಪಡೆದುಕೊಂಡರು. ಆ ದಿನಗಳಿಂದ ಇಂದಿನವರೆಗೆ ಸಲ್ಮಾನ್​ ಖಾನ್​ ಕುಟುಂಬದ ಜೊತೆ ಸೋನಾಕ್ಷಿ ಆಪ್ತವಾಗಿದ್ದಾರೆ. ಆದರೆ ಸಲ್ಲು ಜೊತೆ ಮದುವೆ ಆಗುವ ಅವರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಸ್ತುತ ಕೆಲವು ಸಿನಿಮಾಗಳ ಕೆಲಸಗಳಲ್ಲಿ ಸೋನಾಕ್ಷಿ ಬ್ಯುಸಿ ಆಗಿದ್ದಾರೆ. ಈಗ ಅವರಿಗೆ 34 ವರ್ಷ ವಯಸ್ಸು. ಸದ್ಯಕ್ಕಂತೂ ಅವರು ಮದುವೆ ಬಗ್ಗೆ ಆಲೋಚನೆ ಮಾಡಿದಂತಿಲ್ಲ.

ಇತ್ತೀಚೆಗೆ ಅಭಿಮಾನಿಯೊಬ್ಬರು ಸೋನಾಕ್ಷಿ ಸಿನ್ಹಾ ಅವರ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದರು.​ ಅದಕ್ಕೆ ಉತ್ತರಿಸಿದ್ದ ‘ದಬಂಗ್​’ ಬೆಡಗಿ ಕೊಂಚ ಖಾರವಾಗಿ ಪ್ರತಿಕ್ರಿಯಿಸಿದ್ದರು. ಏನದು ಪ್ರಶ್ನೆ? ‘ಎಲ್ಲರಿಗೂ ಮದುವೆ ಆಗುತ್ತಿದೆ ಮೇಡಂ. ನೀವು ಯಾವಾಗ ಮದುವೆ ಆಗ್ತೀರಿ’ ಎಂದು ಅಭಿಮಾನಿ ಕೇಳಿದ್ದರು. ಈ ಪ್ರಶ್ನೆಗೆ ಸೋನಾಕ್ಷಿ ಸಿನ್ಹಾ ಅವರು ಕೊಂಕಾಗಿ ಉತ್ತರಿಸಿದ್ದರು. ಬೇಸರ ಮಾಡಿಕೊಂಡಂತಿರುವ ಮುಖದ ಫೋಟೋ ಹಾಕಿ ಉತ್ತರ ನೀಡಿದ್ದರು. ಅದನ್ನು ಉತ್ತರ ಎನ್ನುವುದಕ್ಕಿಂತ ಮರುಪ್ರಶ್ನೆ ಎಂಬುದೇ ಉತ್ತಮ. ‘ಎಲ್ಲರಿಗೂ ಕೊವಿಡ್​ ಬರುತ್ತಿದೆ. ನನಗೂ ಬರಬೇಕಾ?’ ಎಂದು ಸೋನಾಕ್ಷಿ ಕೇಳಿದ್ದರು.

ಸಲ್ಲು ಯಾಕಿನ್ನೂ ಮದುವೆ ಆಗಿಲ್ಲ?

ಸಲ್ಮಾನ್​ ಖಾನ್​ ಸಹೋದರಿ ಅರ್ಪಿತಾ ಖಾನ್​ ಅವರನ್ನು ಆಯುಶ್​ ಶರ್ಮಾ ಮದುವೆ ಆಗಿದ್ದಾರೆ. ಸಲ್ಲು ಯಾಕೆ ಇನ್ನೂ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ಆಯುಶ್​ ಶರ್ಮಾ ಈ ಹಿಂದೆ ಉತ್ತರ ನೀಡಿದ್ದರು. ‘ಸಲ್ಮಾನ್​ ಮದುವೆಯ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಹೇಗೆ ಕೆಲಸ ಮಾಡುತ್ತಾರೆ, ಹೇಗೆ ಬದುಕುತ್ತಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ನನಗೆ ಅನಿಸಿದಂತೆ ಅವರಿಗೆ ಮದುವೆ ಆಗಲು ಸಮಯ ಇಲ್ಲ. ಈಗ ಹೇಗಿದ್ದಾರೋ ಹಾಗೆಯೇ ಅವರು ಖುಷಿ ಆಗಿದ್ದಾರೆ. ಬದುಕಿನ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ’ ಎಂದು ಆಯುಶ್​ ಶರ್ಮಾ ಹೇಳಿದ್ದರು.

ಇದನ್ನೂ ಓದಿ:

‘ನನ್ನ ಹೆಸರು ಸಲ್ಮಾನ್​ ಖಾನ್​’: ವಿದೇಶದಲ್ಲಿ ವಿನಯದಿಂದ​ ಪರಿಚಯ ಹೇಳಿಕೊಂಡ ಸಲ್ಲು; ವಿಡಿಯೋ ವೈರಲ್

ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ

Follow us on

Related Stories

Most Read Stories

Click on your DTH Provider to Add TV9 Kannada