ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ

ನಟಿ ಪೂಜಾ ಹೆಗ್ಡೆ ಜೊತೆ ಅಸಾಧಾರಣ ಡ್ಯಾನ್ಸ್​ ಮಾಡಲು ಹೋಗಿ ಸಲ್ಮಾನ್​ ಖಾನ್​ ಟ್ರೋಲ್​ಗೆ ಒಳಗಾಗಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
ಸಲ್ಮಾನ್ ಖಾನ್ ಪೂಜಾ ಹೆಗ್ಡೆ ವೈರಲ್​ ವಿಡಿಯೋ
Follow us
TV9 Web
| Updated By: ಮದನ್​ ಕುಮಾರ್​

Updated on:Feb 28, 2022 | 10:08 AM

ನಟ ಸಲ್ಮಾನ್​ ಖಾನ್​ (Salman Khan) ಅವರು ಬಾಲಿವುಡ್​ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಅವರು ‘ದಬಂಗ್​ ಟೂರ್​’ (Dabang Tour) ಮೂಲಕ ವಿದೇಶದಲ್ಲಿ ಇರುವ ಅಭಿಮಾನಿಗಳನ್ನು ರಂಜಿಸುತ್ತಾರೆ. ತಮ್ಮ ಬಳಗದಲ್ಲಿ ಗುರುತಿಸಿಕೊಂಡಿರುವ ಅನೇಕ ಸೆಲೆಬ್ರಿಟಿಗಳನ್ನು ಸೇರಿಸಿಕೊಂಡು, ಒಂದಷ್ಟು ಹಾಡುಗಳಿಗೆ ಡ್ಯಾನ್ಸ್​ ರಿಹರ್ಸಲ್​ ಮಾಡಿ, ನಂತರ ವಿದೇಶದ ವೇದಿಕೆಯಲ್ಲಿ ಸಲ್ಲು ಪರ್ಫಾರ್ಮ್​​ ಮಾಡುತ್ತಾರೆ. ಜನರು ಹಣ ಕೊಟ್ಟು ಟಿಕೆಟ್​ ಖರೀದಿಸಿ ಈ ಕಾರ್ಯಕ್ರಮಕ್ಕೆ ಬರುತ್ತಾರೆ. ಸಲ್ಮಾನ್​ ಖಾನ್​ ಜೊತೆ ನಟಿ ಪೂಜಾ ಹೆಗ್ಡೆ (Pooja Hegde) ಕೂಡ ದಬಂಗ್​ ಟೂರ್​ನಲ್ಲಿ ಭಾಗಿ ಆಗಿದ್ದರು. ಈ ವೇಳೆ ನಡೆದ ಪ್ರಸಂಗವೊಂದು ಸಲ್ಲುಗೆ ತೀವ್ರ ಮುಜುಗರ ಉಂಟು ಮಾಡುವಂತಾಗಿದೆ. ಆ ಕ್ಷಣದ ವಿಡಿಯೋ ಮತ್ತು ಸ್ಕ್ರೀನ್​ ಶಾಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅದನ್ನು ಕಂಡು ಸಲ್ಮಾನ್​ ಖಾನ್​ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತಿದೆ. ವೇದಿಕೆ ಮೇಲೆ ಮುಜುಗರ ಅನುಭವಿಸಿದ ಸಲ್ಲು ಬಗ್ಗೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಏನು? ಈ ಕುರಿತು ಪೂರ್ಣ ವಿವರ ಇಲ್ಲಿದೆ.

ಸಲ್ಮಾನ್​ ಖಾನ್​ ಅವರು ‘ಕಿಕ್​’ ಸಿನಿಮಾದ ‘ಜುಮ್ಮೆ ಕೆ ರಾತ್​ ಮೇ..’ ಹಾಡಿಗೆ ಪೂಜಾ ಹೆಗ್ಡೆ ಜೊತೆ ಡ್ಯಾನ್ಸ್​ ಮಾಡುತ್ತಿದ್ದರು. ಆ ಸಿನಿಮಾದ ಮೂಲ ಹಾಡಿನಲ್ಲಿ ಸಲ್ಲು ಜೊತೆ ಜಾಕ್ವೆಲಿನ್​ ಫರ್ನಾಂಡಿಸ್​ ನರ್ತಿಸಿದ್ದರು. ಅದರಲ್ಲಿ ಒಂದು ಸ್ಟೆಪ್​ ಇದೆ. ಜಾಕ್ವೆಲಿನ್​ ಫರ್ನಾಂಡಿಸ್​ ಅವರ ಸ್ಕರ್ಟ್​ ತುದಿಯನ್ನು ಸಲ್ಲು ಖಾನ್​ ಅವರು ಬಾಯಲ್ಲಿ ಕಚ್ಚಿಕೊಂಡು ಡ್ಯಾನ್ಸ್​ ಮಾಡಿದ್ದರು. ಈಗ ಅದೇ ಸ್ಟೆಪ್​ ಅನ್ನು ಪೂಜಾ ಹೆಗ್ಡೆ ಜೊತೆ ಮಾಡಲು ಹೋಗಿ ಸಲ್ಲು ಟ್ರೋಲ್​ ಆಗಿದ್ದಾರೆ.

ದಬಂಗ್​ ಟೂರ್​ ವೇದಿಕೆಯಲ್ಲಿ ಸಲ್ಲು ಮತ್ತು ಪೂಜಾ ಹೆಗ್ಡೆ ಡ್ಯಾನ್​ ಮಾಡುತ್ತಿದ್ದರು. ಮೂಲ ಹಾಡಿನ ಸ್ಟೆಪ್​ ರೀತಿಯೇ ಪೂಜಾ ಹೆಗ್ಡೆ ಅವರ ಸ್ಕರ್ಟ್​ ಅನ್ನು ಕಚ್ಚಿಕೊಂಡು ಡ್ಯಾನ್ಸ್​ ಮಾಡಲು ಸಲ್ಮಾನ್​ ಖಾನ್​ ಪ್ರಯತ್ನಿಸಿದರು. ಆದರೆ ಪೂಜಾ ಧರಿಸಿದ್ದು ಬಾಡಿಕಾನ್​ ಡ್ರೆಸ್​ ಆದ್ದರಿಂದ ಅದನ್ನು ಕಚ್ಚಿಕೊಳ್ಳಲು ಸಲ್ಲುಗೆ ಸಾಧ್ಯವಾಗಲಿಲ್ಲ. ಸಲ್ಮಾನ್​ ಖಾನ್​ ಪ್ರಯತ್ನಿಸುತ್ತಿರುವಾಗಲೇ ಪೂಜಾ ಹೆಗ್ಡೆ ಅವರು ತಪ್ಪಿಸಿಕೊಂಡು ಮುಂದೆ ಮುಂದೆ ಸಾಗಿದರು. ಇದರಿಂದ ಸಲ್ಲುಗೆ ತೀವ್ರ ಮುಜುಗರ ಆಯಿತು. ಈಗ ಇದೇ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇದೇ ಕಾರ್ಯಕ್ರಮದಲ್ಲಿ ಸಲ್ಮಾನ್​ ಖಾನ್​ ಜೊತೆ ಬಾಲಿವುಡ್​ ನಟಿ ದಿಶಾ ಪಟಾನಿ ಕೂಡ ಭಾಗವಹಿಸಿದ್ದರು. ಅವರು ಸಲ್ಲು ಜೊತೆ ‘ಸೀಟಿ ಮಾರ್​..’ ಹಾಡಿಗೆ ಸ್ಟೆಪ್ ಹಾಕಿದರು. ಆ ವಿಡಿಯೋ ಕೂಡ ವೈರಲ್​ ಆಗಿದ್ದು, ಜನರು ಮೆಚ್ಚಿಕೊಂಡಿದ್ದಾರೆ. ಆದರೆ ಪೂಜಾ ಹೆಗ್ಡೆ ಜೊತೆ ಅಸಾಧಾರಣ ಡ್ಯಾನ್ಸ್​ ಮಾಡಲು ಹೋಗಿ ಸಲ್ಮಾನ್​ ಖಾನ್​ ಟ್ರೋಲ್​ಗೆ ಒಳಗಾಗಿದ್ದಾರೆ.

ಸದ್ಯ ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್​’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಭಾಸ್​ ಮತ್ತು ಪೂಜಾ ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದು ಮಾ.11ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಕೆಲವು ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿರುವ ಪೂಜಾಗೆ ಹಿಂದಿಯಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ.

ಇದನ್ನೂ ಓದಿ:

‘ನನ್ನ ಹೆಸರು ಸಲ್ಮಾನ್​ ಖಾನ್​’: ವಿದೇಶದಲ್ಲಿ ವಿನಯದಿಂದ​ ಪರಿಚಯ ಹೇಳಿಕೊಂಡ ಸಲ್ಲು; ವಿಡಿಯೋ ವೈರಲ್

ಸಲ್ಮಾನ್​ ಖಾನ್​ ಜತೆ ಕೆಲಸ ಮಾಡಿದ್ರೆ ಆಗುವ ಲಾಭ-ನಷ್ಟದ ಬಗ್ಗೆ ಬಾಯ್ಬಿಟ್ಟ ಪ್ರೇಯಸಿ ಯೂಲಿಯಾ

Published On - 8:50 am, Mon, 28 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ