AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aamir Khan: ಚಿತ್ರ ವೀಕ್ಷಿಸಿ ಕಣ್ಣೀರಾದ ಆಮಿರ್; ಖ್ಯಾತ ನಟನನ್ನೇ ಭಾವುಕವಾಗಿಸಿದ ಸಿನಿಮಾ ಯಾವುದು?

Amitabh Bachchan | Jhund: ಬಾಲಿವುಡ್ ನಟ ಆಮಿರ್ ಖಾನ್ ಸಿನಿಮಾವೊಂದನ್ನು ನೋಡಿ ಭಾವುಕರಾಗಿದ್ದಾರೆ. ಈ ಹಿಂದೆಯೂ ಆಮಿರ್ ಚಿತ್ರಗಳನ್ನು ನೋಡಿ ಕಣ್ಣೀರು ಹಾಕಿದ್ದರು. ಈ ಬಾರಿ ಯಾವ ಚಿತ್ರ? ಅದರ ಬಗ್ಗೆ ಆಮಿರ್ ಹೇಳಿದ್ದೇನು? ಇಲ್ಲಿದೆ ಮಾಹಿತಿ.

Aamir Khan: ಚಿತ್ರ ವೀಕ್ಷಿಸಿ ಕಣ್ಣೀರಾದ ಆಮಿರ್; ಖ್ಯಾತ ನಟನನ್ನೇ ಭಾವುಕವಾಗಿಸಿದ ಸಿನಿಮಾ ಯಾವುದು?
‘ಭಜರಂಗಿ ಭಾಯಿಜಾನ್’ ನೋಡಿ ಭಾವುಕರಾಗಿದ್ದ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Mar 02, 2022 | 6:16 PM

Share

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಹೊಸ ರೀತಿಯ ಪ್ರಯತ್ನಗಳಿಗೆ ಬೆನ್ನುತಟ್ಟುತ್ತಾರೆ. ಅಲ್ಲದೇ ಅವರು ಬಹಳ ಭಾವುಕರಾಗಿ ಸಿನಿಮಾ ವೀಕ್ಷಿಸುತ್ತಾರೆ. ಈ ಹಿಂದೆ ಹಲವು ಸಂದರ್ಭಗಳಲ್ಲಿ ಅದು ಸಾಬೀತಾಗಿದೆ. ಇದೀಗ ಆಮಿರ್ ಹೊಸ ಚಿತ್ರವೊಂದನ್ನು ನೋಡಿದ್ದು, ಭಾವುಕರಾಗಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ಟಿ-ಸೀರೀಸ್ ಹಂಚಿಕೊಂಡಿದೆ. ಆಮಿರ್​ಗೆ ‘ಝುಂಡ್’ (Jhund) ಚಿತ್ರದ ಖಾಸಗಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಮಿತಾಭ್ ಬಚ್ಚನ್ (Amitabh Bachchan) ಬಣ್ಣಹಚ್ಚಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಇದು ಮಾಮೂಲಿ ಬಾಲಿವುಡ್ ಚಿತ್ರಗಳಂತಲ್ಲ ಎನ್ನುವುದು ಕೂಡ ಈಗಾಗಲೇ ಸಾಬೀತಾಗಿದೆ. ಆದ್ದರಿಂದ ಇದರ ಬಗ್ಗೆ ಕುತೂಹಲ ಹೆಚ್ಚಿದೆ. ಈ ವಾರ ಅಂದರೆ ಮಾರ್ಚ್ 4ರ ಶುಕ್ರವಾರ ‘ಝುಂಡ್’ ತೆರೆಗೆ ಬರಲಿದೆ. ರಿಲೀಸ್​ಗೂ ಮುನ್ನ ಆಮಿರ್​ಗೆ ಏರ್ಪಡಿಸಿದ್ದ ವಿಶೇಷ ಪ್ರದರ್ಶನದ ನಂತರ ಅವರು ಭಾವುಕರಾಗಿ ಮಾತನಾಡಿದ್ದಾರೆ.

ಚಿತ್ರ ನೋಡಿದ ನಂತರ ಆಮಿರ್ ಬಹಳ ಭಾವುಕರಾಗಿದ್ದರು. ಅಷ್ಟೇ ಅಲ್ಲ, ಎದ್ದು ನಿಂತ ಚಪ್ಪಾಳಿಯನ್ನೂ ತಟ್ಟಿದರು. ‘‘ಖಾಸಗಿ ಪ್ರದರ್ಶನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ಇದು ಮೊದಲ ಬಾರಿ’’ ಎಂದು ಆಮಿರ್ ನಂತರ ಮಾತನಾಡುತ್ತಾ ಹೇಳಿದರು. ‘‘ಭಾರತದ ಯುವಕ- ಯುವತಿಯರ ಭಾವನೆಗಳನ್ನು ಸಮರ್ಥವಾಗಿ ಕಟ್ಟಿಕೊಡಲಾಗಿದೆ. ಮಕ್ಕಳು ಈ ಚಿತ್ರದಲ್ಲಿ ನಟಿಸಿರುವುದು ಬಹಳ ಅದ್ಭುತವಾಗಿದೆ’’ ಎಂದು ಆಮಿರ್ ನುಡಿದಿದ್ದಾರೆ.

‘ಝುಂಡ್’ನಲ್ಲಿ ಕೆಲಸ ಮಾಡಿದ ಮಕ್ಕಳನ್ನು ಹೊಗಳಿದ ಅಮಿತಾಭ್, ನಂತರ ಅಮಿತಾಭ್​ರನ್ನೂ ಹೊಗಳಿದರು. ಅವರ ವೃತ್ತಿ ಜೀವನದ ಮಹೋನ್ನತ ಚಿತ್ರಗಳಲ್ಲಿ ಇದೂ ಒಂದು ಎಂದು ಆಮಿರ್ ಅಭಿಪ್ರಾಯಪಟ್ಟಿದ್ದಾರೆ.

ಆಮಿರ್ ಭಾವುಕರಾಗಿರುವ ವಿಡಿಯೋ ಇಲ್ಲಿದೆ:

ಆಮಿರ್ ಖಾನ್ ಚಿತ್ರ ನೋಡಿದ ನಂತರ ಭಾವುಕರಾಗಿದ್ದು ಇದು ಮೊದಲೇನಲ್ಲ. ಈ ಹಿಂದೆ ಕಂಗನಾ ರಣಾವತ್ ಹಾಗೂ ಇರ್ಫಾನ್ ಖಾನ್ ಅಭಿನಯದ ‘ಕಟ್ಟೀ-ಬಟ್ಟೀ’ ನೋಡಿದಾಗಲೂ ಆಮಿರ್ ಭಾವುಕರಾಗಿದ್ದರು. ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ನೋಡಿದಾಗ ಆಮಿರ್ ಕಣ್ಣೀರು ಹಾಕಿದ್ದರು. ಆಗ ಅವರು ಟವೆಲ್​ನಲ್ಲಿ ಕಣ್ಣೀರು ಒರೆಸುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು.

‘ಝುಂಡ್’ ಚಿತ್ರ ಕ್ರೀಡಾ ಕತೆಯನ್ನು ಹೊಂದಿರುವ ಜೀವನ ಕಥನವಾಗಿದೆ. ಸಾಮಾಜಿಕ ಕಾರ್ಯಕರ್ತ, ಸ್ಲಮ್ ಸಾಸರ್ ಎನ್​ಜಿಒ ಸಂಸ್ಥಾಪಕ ವಿಜಯ್ ಬರ್ಸೆ ಅವರ ಜೀವನವನ್ನು ಆಧರಿಸಿ ಚಿತ್ರ ತಯಾರಾಗಿದೆ. ಸ್ಲಂ ಮಕ್ಕಳಿಗೆ ಫುಟ್​ಬಾಲ್ ತಂಡ ಕಟ್ಟಲು ವಿಜಯ್ ಪ್ರೇರಣೆ ತುಂಬಿದ್ದರು.

ಚಿತ್ರದ ಟ್ರೇಲರ್ ಇಲ್ಲಿದೆ:

ನಾಗ್ರಾಜ್ ಮಂಜುಲೆ ನಿರ್ದೇಶನದ ಈ ಚಿತ್ರವನ್ನು ಭೂಷಣ್ ಕುಮಾರ್ ಟಿ-ಸಿರೀಸ್ ಬ್ಯಾನರ್​ನಲ್ಲಿ ನಿರ್ಮಾಣ ಮಾಡಿದ್ದಾರೆ. ಇದರೊಂದಿಗೆ ತಾಂಡವ್ ಫಿಲ್ಮ್ಸ್ ಎಂಟರ್​ಟೈನ್​ಮೆಂಟ್, ಆತ್ಪತ್ ಫಿಲ್ಮ್ಸ್ ಸಹ ನಿರ್ಮಾಣ ಮಾಡಿದೆ. ಅಮಿತಾಭ್ ಬಚ್ಚನ್​ರೊಂದಿಗೆ ಆಕಾಶ್ ತೋಸರ್, ರಿಂಕು ರಾಜ್​ಗುರು ಮೊದಲಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

Radhe Shyam: ಮತ್ತಷ್ಟು ಕುತೂಹಲ ಹೆಚ್ಚಿಸಿದ ‘ರಾಧೆ ಶ್ಯಾಮ್’; ಹೊಸ ಕನ್ನಡ ಟ್ರೇಲರ್​ನಲ್ಲಿದೆ ಶಿವಣ್ಣನ ಧ್ವನಿ

Adipurush: ಅಷ್ಟಕ್ಕೂ ‘ಆದಿಪುರುಷ್’ ಮುಂದೂಡಲು ಕಾರಣವೇನು ಗೊತ್ತಾ? ಹೊರಬಿತ್ತು ಅಸಲಿ ವಿಚಾರ

Published On - 6:10 pm, Wed, 2 March 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್