Radhe Shyam: ಮತ್ತಷ್ಟು ಕುತೂಹಲ ಹೆಚ್ಚಿಸಿದ ‘ರಾಧೆ ಶ್ಯಾಮ್’; ಹೊಸ ಕನ್ನಡ ಟ್ರೇಲರ್ನಲ್ಲಿದೆ ಶಿವಣ್ಣನ ಧ್ವನಿ
Prabhas | Pooja Hegde: ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟಿಸಿರುವ ‘ರಾಧೆ ಶ್ಯಾಮ್’ ಇದೇ ಮಾರ್ಚ್ 11ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅಪಾರ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಆಗಿದೆ.

ಪ್ರಭಾಸ್ (Prabhas) ಸದ್ಯ ‘ರಾಧೆ ಶ್ಯಾಮ್’ (Radhe Shyam) ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಕೆಲ ದಿನಗಳ ಮೊದಲು ಟ್ರೇಲರ್ ಒಂದನ್ನು ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ರಿಲೀಸ್ ಟ್ರೇಲರ್ ಬಿಡುಗಡೆ ಮಾಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನ ‘ರಾಧೆ ಶ್ಯಾಮ್’ನಲ್ಲಿ ಏನೆಲ್ಲಾ ಇರಲಿದೆ ಎಂಬುದರ ಗ್ಲಿಂಪ್ಸ್ ಅನ್ನು ಈ ಟ್ರೇಲರ್ ಕಟ್ಟಿಕೊಟ್ಟಿದೆ. 1.08 ನಿಮಿಷಗಳ ಚಿಕ್ಕ ಟ್ರೇಲರ್ ಇದಾಗಿದೆ. ಆದರೆ ಈ ಅವಧಿಯಲ್ಲೇ ಹತ್ತು ಹಲವು ವಿಚಾರಗಳನ್ನು ಟ್ರೇಲರ್ ಹೊತ್ತುತಂದಿದೆ. ಇದನ್ನು ನೋಡಿದ ಪ್ರಭಾಸ್ ಫ್ಯಾನ್ಸ್ ಮತ್ತಷ್ಟು ಎಕ್ಸೈಟ್ ಆಗಿದ್ದಾರೆ. ಟ್ರೇಲರ್ ಕೊನೆಯಲ್ಲಿ ಶಿವರಾಜ್ಕುಮಾರ್ ಧ್ವನಿ ಕೂಡ ಇದೆ. ‘‘ಪ್ರೀತಿ ಮತ್ತು ವಿಧಿ ನಡೆಯುವ ಯುದ್ಧವೇ ರಾಧೆ ಶ್ಯಾಮ್’ ಎನ್ನುವ ಸಾಲುಗಳ ಮೂಲಕ ಚಿತ್ರ ಹೇಗಿರಬಹುದು ಎಂಬ ಕಲ್ಪನೆಯನ್ನು ಟ್ರೇಲರ್ ಕಟ್ಟಿಕೊಟ್ಟಿದೆ. ಹಸ್ತಸಾಮುದ್ರಿಕ ತಿಳಿದಿರುವ ವ್ಯಕ್ತಿಯ ಪಾತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ (Pooja Hegde) ಕಾಣಿಸಿಕೊಂಡಿದ್ದಾರೆ. 1970ರ ಕಾಲಘಟ್ಟದಲ್ಲಿ ಯುರೋಪ್ನಲ್ಲಿ ನಡೆಯುವ ಕತೆ ಇದಾಗಿದೆ.
ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿರುವ ‘ರಾಧೆ ಶ್ಯಾಮ್’ಗೆ ಹಲವು ಭಾಷೆಗಳ ದಿಗ್ಗಜರು ಸಾಥ್ ನೀಡಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣ ಕನ್ನಡ ಅವತರಣಿಕೆಯ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಅಮಿತಾಭ್ ಬಚ್ಚನ್ ಹಿಂದಿ ಅವತರಣಿಕೆಗೆ ಧ್ವನಿ ನೀಡಿದ್ದಾರೆ. ತೆಲುಗಿಗೆ ರಾಜಮೌಳಿ ಧ್ವನಿ ನೀಡಿದ್ದು, ಮಲಯಾಳಂನಲ್ಲಿ ಪೃಥ್ವಿರಾಜ್ ನಿರೂಪಿಸಿದ್ದಾರೆ. ಪ್ರಸ್ತುತ ರಿಲೀಸ್ ಆಗಿರುವ ಟ್ರೇಲರ್ ಕೊನೆಯಲ್ಲಿ ಆಯಾ ಭಾಷೆಯ ತಾರೆಯರ ಧ್ವನಿ ಇದೆ.
‘ರಾಧೆ ಶ್ಯಾಮ್’ ಕನ್ನಡ ಟ್ರೇಲರ್ ಇಲ್ಲಿದೆ:
ನಿಗೂಢ ಮತ್ತು ಎಲ್ಲವನ್ನೂ ತಿಳಿದಿರುವ ಆದರೆ ಏನನ್ನೂ ಬಹಿರಂಗಪಡಿಸದ ವ್ಯಕ್ತಿ ಎಂದು ಹೇಳಿಕೊಳ್ಳುವ ಲವರ್ ಬಾಯ್ ‘ವಿಕ್ರಮ್ ಆದಿತ್ಯ’ ಪಾತ್ರದಲ್ಲಿ ಪ್ರಭಾಸ್ ‘ರಾಧೆ ಶ್ಯಾಮ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಗುಲ್ಶನ್ ಕುಮಾರ್ ಮತ್ತು ಟಿ-ಸೀರೀಸ್ ಪ್ರಸ್ತುತಪಡಿಸುತ್ತಿರುವ ‘ರಾಧೆ ಶ್ಯಾಮ್’ ಚಿತ್ರವನ್ನು ಯುವಿ ಕ್ರಿಯೇಷನ್ಸ್ ನಿರ್ಮಿಸಿದೆ. ರಾಧಾ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
ಬಹಳ ದೀರ್ಘಕಾಲದಿಂದ ರಿಲೀಸ್ಗೆ ‘ರಾಧೆ ಶ್ಯಾಮ್’ ಕಾದಿದೆ. ಕೊರೊನಾ ಕಾರಣದಿಂದ ಚಿತ್ರೀಕರಣ ಹಾಗೂ ರಿಲೀಸ್ ಮುಂದೂಡಲ್ಪಡುತ್ತಿತ್ತು. ಅಂತಿಮವಾಗಿ ಮಾರ್ಚ್ 11ರಂದು ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸದ್ಯ ಪ್ರಭಾಸ್, ಪೂಜಾ ಹೆಗ್ಡೆ ಸೇರಿದಂತೆ ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಇಂದು ಮುಂಬೈನಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಈವೆಂಟ್ ನಡೆದಿದೆ.
ಇದನ್ನೂ ಓದಿ:
ಪ್ರಭಾಸ್ ಜತೆ ‘ರಾಧೆ ಶ್ಯಾಮ್’ ಚಿತ್ರತಂಡ ಸೇರಿದ ಶಿವಣ್ಣ; ತೆಲುಗು ಸಿನಿಮಾದಲ್ಲಿ ‘ಸೆಂಚುರಿ ಸ್ಟಾರ್’ ಕೆಲಸ ಏನು?
ಹೊಸ ಬಿಡುಗಡೆ ದಿನಾಂಕ ಘೋಷಿಸಿದ ರಾಧೆ ಶ್ಯಾಮ್ ಚಿತ್ರ ತಂಡ; ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್
Published On - 4:49 pm, Wed, 2 March 22




