AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​ ಜತೆ ‘ರಾಧೆ ಶ್ಯಾಮ್​’ ಚಿತ್ರತಂಡ ಸೇರಿದ ಶಿವಣ್ಣ; ತೆಲುಗು ಸಿನಿಮಾದಲ್ಲಿ ‘ಸೆಂಚುರಿ ಸ್ಟಾರ್​’ ಕೆಲಸ ಏನು?

Shivarajkumar | Radhe Shyam Movie: ಶಿವರಾಜ್​ಕುಮಾರ್​ ಅವರಿಗೆ ‘ರಾಧೆ ಶ್ಯಾಮ್​’ ನಿರ್ಮಾಣ ಸಂಸ್ಥೆಯಾದ ‘ಯುವಿ ಕ್ರಿಯೇಷನ್ಸ್​’ ಧನ್ಯವಾದ ತಿಳಿಸಿದೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.

ಪ್ರಭಾಸ್​ ಜತೆ ‘ರಾಧೆ ಶ್ಯಾಮ್​’ ಚಿತ್ರತಂಡ ಸೇರಿದ ಶಿವಣ್ಣ; ತೆಲುಗು ಸಿನಿಮಾದಲ್ಲಿ ‘ಸೆಂಚುರಿ ಸ್ಟಾರ್​’ ಕೆಲಸ ಏನು?
ಶಿವರಾಜ್​ಕುಮಾರ್​, ಪ್ರಭಾಸ್​, ಪೂಜಾ ಹೆಗ್ಡೆ
TV9 Web
| Updated By: ಮದನ್​ ಕುಮಾರ್​|

Updated on: Feb 28, 2022 | 8:06 AM

Share

ಇನ್ನೇನು ಕೆಲವೇ ದಿನಗಳಲ್ಲಿ ‘ರಾಧೆ ಶ್ಯಾಮ್​’ (Radhe Shyam Movie) ಸಿನಿಮಾ ಬಿಡುಗಡೆ ಆಗಲಿದೆ. ಬಹುಭಾಷಾ ನಟಿ ಪೂಜಾ ಹೆಗ್ಡೆ ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ (Prabhas) ಅಭಿನಯದ ಈ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಆಗಿದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುವಂತಹ ಹೊಸ ಸುದ್ದಿ ಈಗ ಹೊರಬಿದ್ದಿದೆ. ಮೂಲ ತೆಲುಗಿನ ಈ ಚಿತ್ರತಂಡಕ್ಕೆ ಈಗ ಶಿವರಾಜ್​ಕುಮಾರ್​ (Shivarajkumar) ಕೂಡ ಜೊತೆಯಾಗಿದ್ದಾರೆ. ಇದು ಗಾಸಿಪ್​ ಅಲ್ಲವೇ ಅಲ್ಲ. ‘ರಾಧೆ ಶ್ಯಾಮ್​’ ಸಿನಿಮಾದ ನಿರ್ಮಾಪಕರು ಸ್ವತಃ ಈ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಶಿವರಾಜ್​ಕುಮಾರ್​ ಮಾತ್ರವಲ್ಲದೇ ಖ್ಯಾತ ನಿರ್ದೇಶಕ ರಾಜಮೌಳಿ, ಮಲಯಾಳಂ ಸೂಪರ್​ ಸ್ಟಾರ್​ ಪೃಥ್ವಿರಾಜ್ ಸುಕುಮಾರನ್​ ಕೂಡ ‘ರಾಧೆ ಶ್ಯಾಮ್​’ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಸುದ್ದಿಕೇಳಿ ಅಭಿಮಾನಿಗಳಿಗೆ ಸಖತ್​ ಥ್ರಿಲ್​ ಆಗಿದೆ. ಕೊನೇ ಹಂತದಲ್ಲಿ ಈ ದಿಗ್ಗಜರೆಲ್ಲ ‘ರಾಧೆ ಶ್ಯಾಮ್​’ ಸಿನಿಮಾ ತಂಡವನ್ನು ಸೇರಿಕೊಂಡಿದ್ದು ಯಾಕೆ? ಈ ಸಿನಿಮಾದಲ್ಲಿ ಅವರ ಕೆಲಸ ಏನು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ಈಗಾಗಲೇ ತಿಳಿದಿರುವಂತೆ ‘ರಾಧೆ ಶ್ಯಾಮ್​’ ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ‘ಬಾಹುಬಲಿ’ ಯಶಸ್ಸಿನ ನಂತರ ಪ್ರಭಾಸ್​ ಅವರು ದೇಶಾದ್ಯಂತ ಫೇಮಸ್​ ಆದರು. ಹಾಗಾಗಿ ಅವರ ಎಲ್ಲ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತದೆ. ‘ರಾಧೆ ಶ್ಯಾಮ್​’ ಕೂಡ ಅದೇ ಮಾರ್ಗವನ್ನು ಅನುಸರಿಸುತ್ತಿದೆ. ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೆ ಈ ಸಿನಿಮಾ ಡಬ್​ ಆಗಿ ರಿಲೀಸ್​ ಆಗುತ್ತಿದೆ. ಸಿನಿಮಾದಲ್ಲಿ ಬರುವ ಒಂದು ಹಿನ್ನೆಲೆ ನಿರೂಪಣೆಗೆ ಧ್ವನಿ ನೀಡಲು ಆಯಾ ಭಾಷೆಯ ದೊಡ್ಡ ಸೆಲೆಬ್ರಿಟಿಗಳು ಒಪ್ಪಿಕೊಂಡಿದ್ದಾರೆ.

‘ರಾಧೆ ಶ್ಯಾಮ್​’ ಚಿತ್ರದ ಕನ್ನಡ ವರ್ಷನ್​ ನಿರೂಪಣೆಗೆ ಶಿವರಾಜ್​ಕುಮಾರ್​ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಅದೇ ರೀತಿ, ತೆಲುಗಿನಲ್ಲಿ ರಾಜಮೌಳಿ ಹಾಗೂ ಮಲಯಾಳಂನಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರು ಈ ಕೆಲಸ ಮಾಡಿದ್ದಾರೆ. ಆ ಮೂಲಕ ಈ ಘಟಾನುಘಟಿಗಳು ‘ರಾಧೆ ಶ್ಯಾಮ್​’ ತಂಡದ ಭಾಗವಾಗಿದ್ದಾರೆ. ಇದರಿಂದ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

‘ನಿಮ್ಮ ಧ್ವನಿಯಿಂದಾಗಿ ಈ ರೊಮ್ಯಾಂಟಿಕ್​ ಕಥೆಯನ್ನು ಇನ್ನಷ್ಟು ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು’ ಎಂದು ಶಿವರಾಜ್​ಕುಮಾರ್​, ರಾಜಮೌಳಿ ಹಾಗೂ ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ‘ರಾಧೆ ಶ್ಯಾಮ್​’ ನಿರ್ಮಾಣ ಸಂಸ್ಥೆಯಾದ ‘ಯುವಿ ಕ್ರಿಯೇಷನ್ಸ್​’ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.

‘ರಾಧೆ ಶ್ಯಾಮ್​’ ಹಿಂದಿ ವರ್ಷನ್​ಗೆ ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ ಅವರು ಹಿನ್ನೆಲೆ ಧ್ವನಿ ನೀಡಿದ್ದಾರೆ. ಆ ಕಾರಣದಿಂದ ಹಿಂದಿ ಪ್ರೇಕ್ಷಕರಲ್ಲೂ ನಿರೀಕ್ಷೆ ಹೆಚ್ಚುವಂತಾಗಿದೆ. ಮಾ.11ರಂದು ವಿಶ್ವಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ. ರಾಧಾಕೃಷ್ಣ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ಗೆ ಸಿನಿಪ್ರಿಯರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಕಣ್ತಂಬಿಕೊಳ್ಳಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಇದು ಪ್ರಭಾಸ್​ ಅವರ ವೃತ್ತಿಜೀವನದ ಡಿಫರೆಂಟ್​ ಸಿನಿಮಾ ಎಂದು ಹೇಳಲಾಗಿದೆ. ಆ ಕಾರಣದಿಂದಲೂ ಹೈಪ್​ ಸೃಷ್ಟಿ ಆಗಿದೆ. ಲವರ್​ ಬಾಯ್​ ಅವತಾರದಲ್ಲಿ ಪ್ರಭಾಸ್​ ಕಾಣಿಸಿಕೊಂಡಿದ್ದಾರೆ. ಇದಲ್ಲದೇ, ‘ಸಲಾರ್​’, ‘ಆದಿಪುರುಷ್​’ ಮುಂತಾದ ಸಿನಿಮಾ ಕೆಲಸಗಳಲ್ಲಿ ಕೂಡ ಪ್ರಭಾಸ್​ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಮಾಡಿದ ಶಿವರಾಜ್​​ಕುಮಾರ್​; ಇಲ್ಲಿವೆ ಫೋಟೋಗಳು

‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!