AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ಮಾಡಿದ ಶಿವರಾಜ್​​ಕುಮಾರ್​; ಇಲ್ಲಿವೆ ಫೋಟೋಗಳು

ನಟ ಶಿವರಾಜ್​ಕುಮಾರ್​ ಅವರು ಸಿನಿಮಾ ಕೆಲಸಗಳಿಂದ ಕೊಂಚ ಬಿಡುವು ಪಡೆದುಕೊಂಡು ಚೆನ್ನೈಗೆ ತೆರಳಿದ್ದಾರೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿ ಅನೇಕ ಗಣ್ಯರನ್ನು ಶಿವಣ್ಣ ಭೇಟಿ ಮಾಡಿದ್ದಾರೆ.

TV9 Web
| Edited By: |

Updated on: Feb 16, 2022 | 8:40 PM

Share
ನಟ ಶಿವರಾಜ್​ಕುಮಾರ್​ ಚೆನ್ನೈಗೆ ಭೇಟಿ ನೀಡಿದ್ದಾರೆ. ಈ ವೇಳೆ ರಾಜಭವನಕ್ಕೆ ತೆರಳಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಆಗಿದ್ದಾರೆ. ಈ ಸಂದರ್ಭದ ಫೋಟೋಗಳು ಲಭ್ಯವಾಗಿವೆ.

Shivarajkumar meets Vice President Venkaiah Naidu in Chennai

1 / 5
ಅನೇಕ ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಬಿಡುವು ಮಾಡಿಕೊಂಡು ಅವರು ತಮಿಳುನಾಡಿಗೆ ತೆರಳಿದ್ದಾರೆ. ವೆಂಕಯ್ಯ ನಾಯ್ಡು ಅವರ ಜತೆ ಕೆಲವು ವಿಷಯಗಳ ಬಗ್ಗೆ ಅವರು ಮಾತುಕತೆ ನಡೆಸಿದ್ದಾರೆ.

Shivarajkumar meets Vice President Venkaiah Naidu in Chennai

2 / 5
ವೆಂಕಯ್ಯ ನಾಯ್ಡು ಮತ್ತು ಶಿವರಾಜ್​ಕುಮಾರ್ ಅವರದ್ದು ಸಹಜ ಭೇಟಿ ಎಂದು ಹೇಳಲಾಗುತ್ತಿದೆ. ಭೇಟಿಯ ಉದ್ದೇಶ ಏನು ಎಂಬ ಬಗ್ಗೆ ಶಿವಣ್ಣ ಅಧಿಕೃತ ಹೇಳಿಕೆ ನೀಡಬೇಕಿದೆ.

ವೆಂಕಯ್ಯ ನಾಯ್ಡು ಮತ್ತು ಶಿವರಾಜ್​ಕುಮಾರ್ ಅವರದ್ದು ಸಹಜ ಭೇಟಿ ಎಂದು ಹೇಳಲಾಗುತ್ತಿದೆ. ಭೇಟಿಯ ಉದ್ದೇಶ ಏನು ಎಂಬ ಬಗ್ಗೆ ಶಿವಣ್ಣ ಅಧಿಕೃತ ಹೇಳಿಕೆ ನೀಡಬೇಕಿದೆ.

3 / 5
ಶಿವರಾಜ್​ಕುಮಾರ್​ ಅವರು ರಾಜಭವನಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಸಿಬ್ಬಂದಿ ಕೂಡ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಶಿವಣ್ಣನ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ.

ಶಿವರಾಜ್​ಕುಮಾರ್​ ಅವರು ರಾಜಭವನಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಸಿಬ್ಬಂದಿ ಕೂಡ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಶಿವಣ್ಣನ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿವೆ.

4 / 5
ಡಾ. ರಾಜ್​ಕುಮಾರ್​ ಕುಟುಂಬದ ಜೊತೆ ಅನೇಕ ಗಣ್ಯರಿಗೆ ಒಡನಾಟ ಇದೆ. ಹಲವು ರಾಜ್ಯಗಳ ರಾಜಕಾರಣಿಗಳ ಜೊತೆಗೂ ಶಿವಣ್ಣ ಸ್ನೇಹ ಹೊಂದಿದ್ದಾರೆ. ಇತ್ತೀಚೆಗೆ ಅವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ಅವರನ್ನು ಭೇಟಿ ಮಾಡಿದ್ದರು.

ಡಾ. ರಾಜ್​ಕುಮಾರ್​ ಕುಟುಂಬದ ಜೊತೆ ಅನೇಕ ಗಣ್ಯರಿಗೆ ಒಡನಾಟ ಇದೆ. ಹಲವು ರಾಜ್ಯಗಳ ರಾಜಕಾರಣಿಗಳ ಜೊತೆಗೂ ಶಿವಣ್ಣ ಸ್ನೇಹ ಹೊಂದಿದ್ದಾರೆ. ಇತ್ತೀಚೆಗೆ ಅವರು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ಅವರನ್ನು ಭೇಟಿ ಮಾಡಿದ್ದರು.

5 / 5