AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adipurush: ಅಷ್ಟಕ್ಕೂ ‘ಆದಿಪುರುಷ್’ ಮುಂದೂಡಲು ಕಾರಣವೇನು ಗೊತ್ತಾ? ಹೊರಬಿತ್ತು ಅಸಲಿ ವಿಚಾರ

Prabhas | Kriti Sanon: ಪ್ರಭಾಸ್ ನಟನೆಯ ‘ಆದಿಪುರುಷ್’ ತೀವ್ರ ಕುತೂಹಲ ಸೃಷ್ಟಿಸಿರುವ ಚಿತ್ರ. ಶಿವರಾತ್ರಿ ಸಂದರ್ಭದಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡುವುದಾಗಿ ಘೋಷಿಸಿತ್ತು. ಆದರೆ ಚಿತ್ರದ ರಿಲೀಸ್ ಮುಂದೂಡುವುದನ್ನು ಘೋಷಿಸಿ ಚಿತ್ರತಂಡ ಎಲ್ಲರಿಗೂ ಅಚ್ಚರಿ ನೀಡಿತ್ತು. ಅಸಲಿಗೆ ‘ಆದಿಪುರುಷ್’ ಮುಂದೂಡಲು ಕಾರಣವೇನು? ಇಲ್ಲಿದೆ ಮಾಹಿತಿ.

Adipurush: ಅಷ್ಟಕ್ಕೂ ‘ಆದಿಪುರುಷ್’ ಮುಂದೂಡಲು ಕಾರಣವೇನು ಗೊತ್ತಾ? ಹೊರಬಿತ್ತು ಅಸಲಿ ವಿಚಾರ
ಪ್ರಭಾಸ್, ಕೃತಿ ಸನೋನ್
TV9 Web
| Updated By: shivaprasad.hs|

Updated on: Mar 02, 2022 | 4:08 PM

Share

ಪ್ರಭಾಸ್ (Prabhas) ನಟನೆಯ ‘ಆದಿಪುರುಷ್’ (Adipurush) ಘೋಷಣೆಯಾದ ನಂತರ ತೀವ್ರ ಕುತೂಹಲ ಹುಟ್ಟುಹಾಕಿರುವ ಸಿನಿಮಾಗಳಲ್ಲೊಂದು. ಓಂ ರಾವುತ್ ನಿರ್ದೇಶನದ ಚಿತ್ರದ ಶೂಟಿಂಗ್ ಈಗಾಗಲೇ ಮುಕ್ತಾಯವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಆದಿಪುರುಷ್’ ಆಗಸ್ಟ್ 11ರಂದು ತೆರೆಗೆ ಬರಬೇಕಿತ್ತು. ಪ್ರಭಾಸ್- ಓಂ ರಾವುತ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿದೆ. ಇತ್ತೀಚೆಗೆ ಚಿತ್ರತಂಡ ಹೊಸ ಅಪ್ಡೇಟ್ ನೀಡುವುದಾಗಿ ಘೋಷಿಸಿತ್ತು. ಅಂತೆಯೇ ಶಿವರಾತ್ರಿಯಂದು ಅಪ್ಡೇಟ್ ಘೋಷಿಸಿ, ಅಭಿಮಾನಿಗಳಿಗೆ ಅಚ್ಚರಿ ನೀಡಿತ್ತು. ಕಾರಣ, ಚಿತ್ರದ ಪೋಸ್ಟರ್ ರಿಲೀಸ್ ಆಗಬಹುದು ಎಂದು ಭಾವಿಸಿದ್ದ ಅಭಿಮಾನಿಗಳಿಗೆ ಸಿಕ್ಕಿದ್ದು ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ ಎಂಬ ಅನಿರೀಕ್ಷಿತ ಸುದ್ದಿ. ಆಗಸ್ಟ್ 11ರ ಬದಲಾಗಿ ಮುಂದಿನ ವರ್ಷದ ಸಂಕ್ರಾಂತಿ ಸಂದರ್ಭದಲ್ಲಿ ಅಂದರೆ 2023ರ ಜನವರಿ 12ರಂದು ತೆರೆಗೆ ಬರಲಿದೆ ಎಂದು ಚಿತ್ರತಮಡ ತಿಳಿಸಿತ್ತು. ಈ ನಿರ್ಧಾರದ ಬಗ್ಗೆ ಸದ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ ‘ಆದಿಪುರುಷ್’ ಮುಂದೂಡಲು ಕಾರಣವೇನು ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿದೆ.

‘ಆದಿಪುರುಷ್’ ದೊಡ್ಡ ಬಜೆಟ್​ನಲ್ಲಿ ತಯಾರಾಗುತ್ತಿರುವ ಚಿತ್ರ. ಸುಮಾರು 350 ರಿಂದ 400 ಕೋಟಿ ರೂ ಬಜೆಟ್​ನಲ್ಲಿ ಚಿತ್ರವನ್ನು ರೂಪಿಸಲಾಗುತ್ತಿದೆ. ಪ್ರಭಾಸ್ ರಾಮನಾಗಿ ಬಣ್ಣಹಚ್ಚುತ್ತಿರುವ ಈ ಚಿತ್ರದಲ್ಲಿ ಕೃತಿ ಸನೋನ್ ನಾಯಕಿ. ಅವರು ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್ ಅಲಿ ಖಾನ್ ರಾವಣನಾಗಿ ಪ್ರಭಾಸ್ ಎದುರು ತೊಡೆ ತಟ್ಟಲಿದ್ದಾರೆ. ಈ ಪೌರಾಣಿಕ ಚಿತ್ರದ ಚಿತ್ರೀಕರಣ ಮುಗಿದಿದ್ದರೂ ಕೂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜಾಸ್ತಿ ಇವೆ.

ಚಿತ್ರವನ್ನು ವಿಶೇಷವಾಗಿ ತೆರೆಯ ಮೇಲೆ ತರಲು ಯೋಜನೆ ರೂಪಿಸಿರುವ ಚಿತ್ರತಂಡಕ್ಕೆ ವಿಎಫ್​ಎಕ್ಸ್ ಕೆಲಸಗಳನ್ನು ಲಗುಬಗೆಯಲ್ಲಿ ಮುಗಿಸಲು ಮನಸ್ಸಿಲ್ಲ. ನಿಧಾನವಾಗಿ ಸಮಯ ತೆಗೆದುಕೊಂಡು ಅಚ್ಚುಕಟ್ಟಾಗಿ ಮುಗಿಸಲು ಚಿತ್ರತಂಡ ಯೋಜಿಸಿದೆ. ಚಿತ್ರೀಕರಣವಾಗಿರುವ ಭಾಗಗಳು ಅತ್ಯುತ್ತಮವಾಗಿ ಮೂಡಿಬಂದಿರುವಾಗ ಬೇಗ ರಿಲೀಸ್ ಮಾಡಬೇಕೆಂಬ ಕಾರಣದಿಂದ ವಿಎಫ್​ಎಕ್ಸ್ ಕೆಲಸಗಳಲ್ಲಿ ಎಡವಬಾರದು. ನಿಧಾನವಾದರೂ ಜನರಿಗೆ ಉತ್ತಮವಾದದ್ದನ್ನೇ ನೀಡಬೇಕು ಎಂದು ಯೋಚಿಸಿದೆ. ಈ ಕಾರಣದಿಂದ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿದೆ ಎಂದು ಇಟೈಮ್ಸ್ ವರದಿ ಮಾಡಿದೆ. ಈ ಹಿಂದೆಯೂ ಕೂಡ ಹಲವು ಚಿತ್ರಗಳು ವಿಎಫ್​ಎಕ್ಸ್ ಕೆಲಸಗಳಿಗೆ ಸಮಯ ಹಿಡಿದ ಕಾರಣ ಮುಂದೂಡಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಆದಿಪುರುಷ್’ ಚಿತ್ರತಂಡ ಇನ್ನೂ ಮೊದಲ ಲುಕ್ ಕೂಡ ರಿವೀಲ್ ಮಾಡಿಲ್ಲ. ಆಗಸ್ಟ್​​ನಲ್ಲಿ ಚಿತ್ರ ರಿಲೀಸ್ ಆಗುವುದಿದ್ದರೆ ಪ್ರಚಾರ ಕಾರ್ಯಗಳಿಗೆ ತೊಡಕಾಬಹುದು. ಪ್ರಚಾರಕ್ಕೂ ದೀರ್ಘಾವಧಿ ಬೇಕಿದೆ. ಈ ಕಾರಣದಿಂದಲೂ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿದೆ ಎಂದು ಹಲವು ವರದಿಗಳು ಹೇಳಿವೆ.

ಚಿತ್ರದ ರಿಲೀಸ್ ಬಗ್ಗೆ ಪ್ರಭಾಸ್ ಪೋಸ್ಟ್:

View this post on Instagram

A post shared by Prabhas (@actorprabhas)

‘ಆದಿಪುರುಷ್’ 3ಡಿಯಲ್ಲಿ ತೆರೆಕಾಣಲಿರುವ ಚಿತ್ರವಾಗಿದ್ದು, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ದಕ್ಷಿಣದಲ್ಲಿ ಸಂಕ್ರಾಂತಿ ವಿಶೇಷವಾಗಿದ್ದು. ಹಾಗಾಗಿ ಈ ಸಂದರ್ಭದಲ್ಲಿ ಚಿತ್ರಗಳು ತೆರೆಕಾಣುವುದನ್ನು ಜನರು ಸ್ವಾಗತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಹಳ ಮೊದಲೇ, ಮುಂದಿನ ವರ್ಷದ ಸಂಕ್ರಾಂತಿಗೆ ತನ್ನ ಆಗಮನವನ್ನು ‘ಆದಿಪುರುಷ್’ ಘೋಷಿಸಿದೆ. ಟಿ- ಸೀರೀಸ್ ಹಾಗೂ ರೆಟ್ರೋಫೈಲ್ಸ್ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಆಗಸ್ಟ್ 11ರಂದು ತೆರೆಗೆ ಬರಲಿದೆ ಎನ್ನಲಾಗುದೆ. ಈ ಹಿಂದೆ ಏಪ್ರಿಲ್ 14ರಂದು ‘ಕೆಜಿಎಫ್ 2’ ಜತೆ ‘ಲಾಲ್ ಸಿಂಗ್ ಛಡ್ಡಾ’ ರಿಲೀಸ್ ಆಗುವುದಾಗಿ ಘೊಷಿಸಿತ್ತು. ನಂತರದಲ್ಲಿ ಚಿತ್ರದ ಬಿಡುಗಡೆ ಮುಂದೂಡಲಾಗಿತ್ತು. ‘ಆದಿಪುರುಷ್’ ಮುಂದೂಡಲ್ಪಟ್ಟಿರುವುದರಿಂದ ಆಗಸ್ಟ್ 11ರಂದು ‘ಲಾಲ್ ಸಿಂಗ್ ಛಡ್ಡಾ’ ತೆರೆಕಾಣಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:

Adipurush: ‘ಆದಿಪುರುಷ್’ ಚಿತ್ರತಂಡದಿಂದ ಬಿಗ್ ಅಪ್ಡೇಟ್; ₹ 400 ಕೋಟಿ ಬಜೆಟ್​​ನ ಚಿತ್ರ ತೆರೆಗೆ ಬರೋದು ಯಾವಾಗ?

Amulya: ಅಮೂಲ್ಯ- ಜಗದೀಶ್; ತಾರಾ ದಂಪತಿಯ ಮುದ್ದಾದ ಫೋಟೋಗಳು ಇಲ್ಲಿವೆ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ