Adipurush: ‘ಆದಿಪುರುಷ್’ ಚಿತ್ರತಂಡದಿಂದ ಬಿಗ್ ಅಪ್ಡೇಟ್; ₹ 400 ಕೋಟಿ ಬಜೆಟ್​​ನ ಚಿತ್ರ ತೆರೆಗೆ ಬರೋದು ಯಾವಾಗ?

Adipurush: ‘ಆದಿಪುರುಷ್’ ಚಿತ್ರತಂಡದಿಂದ ಬಿಗ್ ಅಪ್ಡೇಟ್; ₹ 400 ಕೋಟಿ ಬಜೆಟ್​​ನ ಚಿತ್ರ ತೆರೆಗೆ ಬರೋದು ಯಾವಾಗ?
ಪ್ರಭಾಸ್, ಕೃತಿ ಸನೋನ್

Prabhas | Kriti Sanon: ಪ್ರಭಾಸ್ ಹಾಗೂ ಕೃತಿ ಸನೋನ್ ನಟಿಸುತ್ತಿರುವ ‘ಆದಿಪುರುಷ್’ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರತಂಡ ಪ್ರಸ್ತುತ ಪೋಸ್ಟ್​ ಪ್ರೊಡಕ್ಷನ್ ಕೆಲಸಗಳನ್ನು ತೊಡಗಿಸಿಕೊಂಡಿದೆ. ಶಿವರಾತ್ರಿಯ ಸಂದರ್ಭದಲ್ಲಿ ಚಿತ್ರದ ಹೊಸ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ.

TV9kannada Web Team

| Edited By: shivaprasad.hs

Mar 01, 2022 | 8:10 AM

ಪ್ರಭಾಸ್ (Prabhas) ನಟನೆಯ ಹಲವಾರು ಚಿತ್ರಗಳ ಕೆಲಸಗಳು ಏಕಕಾಲದಲ್ಲಿ ನಡೆಯುತ್ತಿವೆ. ಈ ಪೈಕಿ ದೀರ್ಘಕಾಲದಿಂದ ಬಿಡುಗಡೆಗೆ ಕಾದಿದ್ದ ‘ರಾಧೆ ಶ್ಯಾಮ್’ (Radhe Shyam) ಮಾರ್ಚ್ 11ರಂದು ತೆರೆಗೆ ಬರಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಸಲಾರ್’ನಲ್ಲಿ ಮಾಸ್ ಅವತಾರದಲ್ಲಿ ಪ್ರಭಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ 2022ರ ಏಪ್ರಿಲ್​ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿತ್ತು. ಇದೀಗ ಆ ದಿನಾಂಕದಲ್ಲಿ ‘ಕೆಜಿಎಫ್ 2’ ರಿಲೀಸ್ ಆಗಲಿದೆ. ‘ಸಲಾರ್’ ಬಿಡುಗಡೆ ಮುಂದೂಡಲ್ಪಟ್ಟಿದ್ದು, ದಿನಾಂಕ ಅಂತಿಮವಾಗಿಲ್ಲ. ಈ ನಡುವೆ ಪ್ರಭಾಸ್ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮೊದಲಾದ ತಾರೆಯರು ಕಾಣಿಸಿಕೊಳ್ಳುತ್ತಿರುವ ಈ ಚಿತ್ರ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಪ್ರಭಾಸ್ ಜತೆ ಮೊದಲ ಬಾರಿಗೆ ನಟಿಸುವಾಗ ಶೂಟಿಂಗ್​ ಸೆಟ್​ನಲ್ಲಾದ ಅನುಭವಗಳನ್ನು ಹಂಚಿಕೊಂಡಿದ್ದರು. ‘ಪ್ರಾಜೆಕ್ಟ್ ಕೆ’ ಸದ್ಯ ಶೂಟಿಂಗ್ ಹಂತದಲ್ಲಿರುವುದರಿಂದ ಚಿತ್ರದ ರಿಲೀಸ್ ತಡವಾಗಲಿದೆ. ಈ ಎಲ್ಲಾ ಚಿತ್ರಗಳ ಮಧ್ಯೆ ಪ್ರಭಾಸ್ ನಟನೆಯ ‘ಆದಿಪುರುಷ್’ (Adipurush) ತೀವ್ರ ಕುತೂಹಲ ಹುಟ್ಟುಹಾಕಿತ್ತು. ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್ ಬಣ್ಣಹಚ್ಚುತ್ತಿದ್ದಾರೆ. ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ (ಮಾ.01) ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

‘ಆದಿಪುರುಷ್’ ಹಲವು ಕಾರಣಗಳಿಗೆ ಸದ್ದು ಮಾಡುತ್ತಿರುವ ಚಿತ್ರ. ಈ ಚಿತ್ರದ ಬಜೆಟ್ ಸುಮಾರು 350- 400 ಕೋಟಿ ರೂ ಎಂದು ಹೇಳಲಾಗುತ್ತಿದೆ. ಈ ಮೊದಲು 2022ರ ಆಗಸ್ಟ್ 11ರಂದು ತೆರೆಗೆ ಬರಲು ಚಿತ್ರತಂಡ ಯೋಜಿಸಿತ್ತು. ಇದೀಗ ಚಿತ್ರದ ರಿಲೀಸ್ ಮುಂದೂಡಲ್ಪಟ್ಟಿದೆ. ಓಂ ರಾವುತ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.

ಆದಿಪುರುಷ್​ನಲ್ಲಿ ಪ್ರಭಾಸ್​ಗೆ ಜತೆಯಾಗಿ ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ಬಣ್ಣಹಚ್ಚುತ್ತಿದ್ದಾರೆ. ವಿಶೇಷವೆಂದರೆ ರಾವಣನಾಗಿ ಪ್ರಭಾಸ್​ ಎದುರು ತೊಡೆತಟ್ಟಲಿರುವವರು ಸೈಫ್ ಅಲಿ ಖಾನ್. ಇಷ್ಟೆಲ್ಲಾ ದೊಡ್ಡ ತಾರಾಗಣವಿದ್ದರೂ ಕೂಡ ‘ಆದಿಪುರುಷ್’ ಚಿತ್ರತಂಡ ಇದುವರೆಗೆ ಚಿತ್ರದ ಯಾವುದೇ ಪೋಸ್ಟರ್ ರಿಲೀಸ್ ಮಾಡದೇ ಇರುವುದು ವಿಶೇಷ. ಆದರೆ ಚಿತ್ರೀಕರಣದ ಕುರಿತ ಅಪ್ಡೇಟ್​ ನೀಡುವುದನ್ನು ಮಿಸ್ ಮಾಡಿಲ್ಲ.

‘ಆದಿಪುರುಷ್’ ಹೊಸ ಬಿಡುಗಡೆ ದಿನಾಂಕ ಯಾವಾಗ?

ಶಿವರಾತ್ರಿಯ ಸಂದರ್ಭದಲ್ಲಿ ‘ಆದಿಪುರುಷ್’ ಚಿತ್ರದ ಬಿಗ್ ಅಪ್ಡೇಟ್ ನೀಡುವುದಾಗಿ ಚಿತ್ರತಂಡ ಘೋಷಿಸಿತ್ತು. ಅದರಂತೆ ಇದೀಗ ಹೊಸ ಮಾಹಿತಿ ನೀಡಲಾಗಿದ್ದು, ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ. 2023ರ ಸಂಕ್ರಾಂತಿಯ ಕೆಲ ದಿನ ಮೊದಲು ಅಂದರೆ ಜನವರಿ 12ರಂದು ‘ಆದಿಪುರುಷ್’ ತೆರೆಕಾಣಲಿದೆ. ಈ ಕುರಿತು ನಾಯಕಿ ಕೃತಿ ಸನೋನ್, ನಿರ್ದೇಶಕ ಓಂ ರಾವುತ್ ಹಾಗೂ ಚಿತ್ರತಂಡ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ‘ಆದಿಪುರುಷ್’ ‘3ಡಿ’ಯಲ್ಲಿ ತೆರೆಗೆ ಬರಲಿದೆ.

ಕೃತಿ ಸನೋನ್ ಹಂಚಿಕೊಂಡ ಟ್ವೀಟ್:

ಈ ಚಿತ್ರ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ದಕ್ಷಿಣದಲ್ಲಿ ಸಂಕ್ರಾಂತಿ ವಿಶೇಷವಾಗಿದ್ದು. ಹಾಗಾಗಿ ಈ ಸಂದರ್ಭದಲ್ಲಿ ಚಿತ್ರಗಳು ತೆರೆಕಾಣುವುದನ್ನು ಜನರು ಸ್ವಾಗತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಹಳ ಮೊದಲೇ, ಮುಂದಿನ ವರ್ಷದ ಸಂಕ್ರಾಂತಿಗೆ ತನ್ನ ಆಗಮನವನ್ನು ‘ಆದಿಪುರುಷ್’ ಘೋಷಿಸಿದೆ. ಟಿ- ಸೀರೀಸ್ ಹಾಗೂ ರೆಟ್ರೋಫೈಲ್ಸ್ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ.

ಇದನ್ನೂ ಓದಿ:

11:11ಕ್ಕೆ ‘ಜೇಮ್ಸ್’ ಲಿರಿಕಲ್​ ಸಾಂಗ್​ ​; ‘ಟ್ರೇಡ್​ಮಾರ್ಕ್​..’ ಸಾಂಗ್​ಗಾಗಿ ಕಾದಿದ್ದಾರೆ ಅಭಿಮಾನಿಗಳು

ಪ್ರಭಾಸ್​, ಸೈಫ್​ ಅಲಿ ಖಾನ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಯಾವ ಪಾತ್ರ?

Follow us on

Related Stories

Most Read Stories

Click on your DTH Provider to Add TV9 Kannada