AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

11:11ಕ್ಕೆ ‘ಜೇಮ್ಸ್’ ಲಿರಿಕಲ್​ ಸಾಂಗ್​ ​; ‘ಟ್ರೇಡ್​ಮಾರ್ಕ್​..’ ಸಾಂಗ್​ಗಾಗಿ ಕಾದಿದ್ದಾರೆ ಅಭಿಮಾನಿಗಳು

ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್​ ಅವರು ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ನಂತರ ಟೀಸರ್ ರಿಲೀಸ್ ಮಾಡಿ ಅಭಿಮಾನಿಗಳ ಮನಗೆಲ್ಲಲಾಯಿತು.

11:11ಕ್ಕೆ ‘ಜೇಮ್ಸ್’ ಲಿರಿಕಲ್​ ಸಾಂಗ್​ ​; ‘ಟ್ರೇಡ್​ಮಾರ್ಕ್​..’ ಸಾಂಗ್​ಗಾಗಿ ಕಾದಿದ್ದಾರೆ ಅಭಿಮಾನಿಗಳು
ಜೇಮ್ಸ್​
TV9 Web
| Edited By: |

Updated on: Mar 01, 2022 | 6:00 AM

Share

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅಭಿಮಾನಿಗಳಿಗೆ ಇಂದು (ಮಾರ್ಚ್​ 1) ವಿಶೇಷ ದಿನ. ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್​’ನ (James Movie) ಲಿರಿಕಲ್​ ಸಾಂಗ್​​, ‘ಟ್ರೇಡ್​ಮಾರ್ಕ್​..’  (Trademark Song) ಬೆಳಗ್ಗೆ 11:11ಕ್ಕೆ ರಿಲೀಸ್​ ಆಗುತ್ತಿದೆ. ಈ ವಿಚಾರವನ್ನು ಈ ಮೊದಲು ಚಿತ್ರತಂಡ ಘೋಷಣೆ ಮಾಡಿತ್ತು. ಹೀಗಾಗಿ, ಅಭಿಮಾನಿಗಳು ಈ ಸಾಂಗ್​ ಕೇಳೋಕೆ ಕಾದು ಕೂತಿದ್ದಾರೆ. ಈಗಾಗಲೇ ಟೀಸರ್​ ಮೂಲಕ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈಗ ಚಿತ್ರದ ಹಾಡು ಹೇಗಿರಲಿದೆ ಎಂಬುದನ್ನು ನೋಡೋಕೆ ಅಭಿಮಾನಿಗಳು ಕಾದಿದ್ದಾರೆ.

ಲಿರಿಕಲ್​ ಸಾಂಗ್​ ರಿಲೀಸ್ ಮಾಡುವಾಗ ಅದಕ್ಕೊಂದು ಸಿದ್ಧಸೂತ್ರವಿದೆ. ಸಿನಿಮಾದ ಸ್ಟಿಲ್​ಗಳನ್ನು ಹಾಕಿ, ಬ್ಯಾಕ್​ಗ್ರೌಂಡ್​ನಲ್ಲಿ ಸಾಂಗ್​ ಹಾಕಲಾಗುತ್ತದೆ. ಬಹುತೇಕರು ಹೀಗೆಯೇ ಮಾಡುತ್ತಾರೆ. ಆದರೆ, ‘ಟ್ರೇಡ್​ಮಾರ್ಕ್​’ ಲಿರಿಕಲ್​ ಸಾಂಗ್​ ಆ ರೀತಿಯಲ್ಲಿ ಇರುವುದಿಲ್ಲ ಎಂಬುದನ್ನು ಇತ್ತೀಚೆಗೆ ಚೇತನ್​ ಕುಮಾರ್ ಹೇಳಿದ್ದರು. ‘ಟ್ರೇಡ್​ಮಾರ್ಕ್​ ಸಾಂಗ್​ಅನ್ನು 5 ಗಾಯಕರು ಹಾಡಿದ್ದಾರೆ. ಫೋಟೋ ಮೇಲೆ ಲಿರಿಕ್ಸ್​ ಹಾಕಿ ರಿಲೀಸ್​ ಮಾಡುವ ಹಾಗೆ ರೆಗ್ಯುಲರ್​ ಆಗಿ ಇದನ್ನು ಬಿಡುಗಡೆ ಮಾಡಲ್ಲ. ತುಂಬ ವಿಶೇಷವಾದ ಕಲಾವಿದರು ಇದರಲ್ಲಿ ಪರ್ಫಾರ್ಮ್​ ಮಾಡಿದ್ದಾರೆ. ಅದರ ಜೊತೆಗೆ ಮೇಕಿಂಗ್​ ವಿಡಿಯೋ ಕೂಡ ಇರಲಿದೆ. ಮಾ.1ರಂದು ಎಲ್ಲ ಮಾಹಿತಿ ತಿಳಿಯಲಿದೆ. ಇದು ಪವರ್​ಫುಲ್​ ರ‍್ಯಾಪ್​ ಸಾಂಗ್​. ಅಭಿಮಾನಿಗಳಿಗೆ ಇದು ಹೆಚ್ಚು ಇಷ್ಟ ಆಗಲಿದೆ’ ಎಂದಿದ್ದರು. ಈ ಕಾರಣಕ್ಕೂ ಹಾಡಿನ ಬಗ್ಗೆ ನಿರೀಕ್ಷೆ ಹುಟ್ಟಿದೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್​ ಅವರು ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ನಂತರ ಟೀಸರ್ ರಿಲೀಸ್ ಮಾಡಿ ಅಭಿಮಾನಿಗಳ ಮನಗೆಲ್ಲಲಾಯಿತು. 1 ನಿಮಿಷ 27 ಸೆಕೆಂಡ್​ಗಳ ಟೀಸರ್​ನಲ್ಲಿ ‘ಜೇಮ್ಸ್​​’ ಪಾತ್ರದ ಒಂದು ಸಣ್ಣ ಪರಿಚಯ ನೀಡಲಾಗಿತ್ತು. ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾ ಇದಾಗಿರಲಿದೆ ಎಂಬುದನ್ನು ಟೀಸರ್ ನೋಡಿದ ಯಾರಾದರೂ ಊಹಿಸಬಹುದು. ಈ ಸಿನಿಮಾದಲ್ಲಿ ಪುನೀತ್​ ಪಾತ್ರಕ್ಕೆ ಶಿವರಾಜ್​ಕುಮಾರ್​ ಕಂಠದಾನ ಮಾಡಿದ್ದು, ಒಂದು ಪವರ್​ಫುಲ್ ಡೈಲಾಗ್ ಕೂಡ ಟೀಸರ್​ನಲ್ಲಿ ಹೈಲೈಟ್​ ಆಗಿದೆ. ‘ಭಾವನೆಗಳು ಬ್ಯುಸಿನೆಸ್​ಗಿಂತ ದೊಡ್ಡದು- ಜೇಮ್ಸ್’ ಎಂಬ ಬರಹವನ್ನು ಟೀಸರ್​ನಲ್ಲಿ ತೋರಿಸಲಾಗಿದೆ. ಇಂದು ಬಿಡುಗಡೆ ಆಗೋ ಸಾಂಗ್​ ಹೇಗಿರಲಿದೆ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ: ನಮ್ಮ ಟೈಮ್​ಗೆ ಅವರು ಫ್ರೀ ಇರ್ತಾರಾ ನೋಡಿಕೊಳ್ಳಬೇಕು; ‘ಜೇಮ್ಸ್’​ ಇವೆಂಟ್​ ಬಗ್ಗೆ ಚೇತನ್​ ಕುಮಾರ್ ಮಾತು

‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ಗೆ ಡಬ್​ ಮಾಡುವಾಗ ಶಿವಣ್ಣ ಎಮೋಷನಲ್​ ಆಗಿದ್ದರು: ನಿರ್ದೇಶಕ ಚೇತನ್​

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!