ನಮ್ಮ ಟೈಮ್ಗೆ ಅವರು ಫ್ರೀ ಇರ್ತಾರಾ ನೋಡಿಕೊಳ್ಳಬೇಕು; ‘ಜೇಮ್ಸ್’ ಇವೆಂಟ್ ಬಗ್ಗೆ ಚೇತನ್ ಕುಮಾರ್ ಮಾತು
ಪ್ರೀ-ರಿಲೀಸ್ ಇವೆಂಟ್ ಕೂಡ ದೊಡ್ಡ ಮಟ್ಟದಲ್ಲೇ ಆಯೋಜನೆ ಮಾಡಲಾಗುತ್ತಿದೆ. ಈಗ ಪ್ರೀ-ರಿಲೀಸ್ ಇವೆಂಟ್ ಬಗ್ಗೆ ಮಾತನಾಡಿರುವ ಚೇತನ್ ಕುಮಾರ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಚಿತ್ರ (James Movie) ಮಾರ್ಚ್ 17ರಂದು ತೆರೆಗೆ ಬರುತ್ತಿದೆ. ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಕೆ ಪ್ಲ್ಯಾನ್ಗಳು ನಡೆದಿವೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಕೂಡ ದೊಡ್ಡ ಮಟ್ಟದಲ್ಲೇ ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಬಗ್ಗೆ, ಅದಕ್ಕೆ ಬರುವ ಅತಿಥಿಗಳ ಬಗ್ಗೆ ಕೆಲ ವದಂತಿಗಳು ಹಬ್ಬಿದ್ದವು. ಇದಕ್ಕೆ ನಿರ್ಮಾಪಕರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಈಗ ಪ್ರೀ-ರಿಲೀಸ್ ಇವೆಂಟ್ ಬಗ್ಗೆ ಮಾತನಾಡಿರುವ ಚೇತನ್ ಕುಮಾರ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ‘ಪುನೀತ್ ಅವರು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹೊರ ರಾಜ್ಯದಲ್ಲೂ ಅವರಿಗೆ ಫ್ಯಾನ್ಸ್ ಇದ್ದಾರೆ. ನಾವು ಯಾರನ್ನು ಅತಿಥಿಗಳನ್ನಾಗಿ ಅಪ್ರೋಚ್ ಮಾಡಬೇಕು ಎನ್ನುವ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ನಮ್ಮ ಕಾರ್ಯಕ್ರಮದ ಸಮಯಕ್ಕೆ ಅವರು ಫ್ರೀ ಇರ್ತಾರಾ ಅನ್ನೋದನ್ನು ನೋಡಿಕೊಳ್ಳಬೇಕು’ ಎಂದಿದ್ದಾರೆ ಚೇತನ್ ಕುಮಾರ್.
ಇದನ್ನೂ ಓದಿ: ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ‘ಜೇಮ್ಸ್’ ರಿಲೀಸ್?; ಚೇತನ್ ಕುಮಾರ್ ನೀಡಿದ್ರು ಉತ್ತರ
‘ಜೇಮ್ಸ್’ ಚಿತ್ರದ ಪುನೀತ್ ಇಂಟ್ರಡಕ್ಷನ್ ಹಾಡು ಹೇಗಿರತ್ತೆ? ಬಗೆಬಗೆಯ ಮಾಹಿತಿ ತೆರೆದಿಟ್ಟ ಚೇತನ್
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

