ಗಂಡ-ಹೆಂಡತಿ ವೇಷದಲ್ಲಿ ಸೋನಾಕ್ಷಿ-ಸಲ್ಮಾನ್ ಖಾನ್; ನಕಲಿ ಫೋಟೋ ನೋಡಿ ಯಾಮಾರಿದ ನೆಟ್ಟಿಗರು
ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಅವರ ವಿವಾಹ ನೆರವೇರಿದೆ ಎಂಬ ಗಾಳಿ ಸುದ್ದಿ ಜೋರಾಗಿ ಹರಡಿದೆ. ಅದಕ್ಕೆ ಕಾರಣ ಆಗಿರುವುದು ಒಂದು ನಕಲಿ ಫೋಟೋ.
Updated on: Mar 02, 2022 | 3:17 PM

Fact Check: Sonakshi Sinha and Salman Khan viral wedding photo is fake

Fact Check: Sonakshi Sinha and Salman Khan viral wedding photo is fake

2010ರಲ್ಲಿ ಸಲ್ಮಾನ್ ಖಾನ್ ನಟನೆಯ ‘ದಬಂಗ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುವ ಅವಕಾಶ ಸೋನಾಕ್ಷಿ ಸಿನ್ಹಾ ಅವರಿಗೆ ಸಿಕ್ಕಿತು. ಮೊದಲ ಸಿನಿಮಾದಲ್ಲಿಯೇ ಅವರು ಭರ್ಜರಿ ಯಶಸ್ಸು ಪಡೆದುಕೊಂಡರು. ಆ ದಿನಗಳಿಂದ ಇಂದಿನವರೆಗೆ ಸಲ್ಮಾನ್ ಖಾನ್ ಕುಟುಂಬದ ಜೊತೆ ಸೋನಾಕ್ಷಿ ಆಪ್ತವಾಗಿದ್ದಾರೆ.

ಸಲ್ಮಾನ್ ಖಾನ್ ಕುಟುಂಬದ ಜೊತೆ ಸೋನಾಕ್ಷಿಗೆ ಆಪ್ತತೆ ಇರುವುದು ನಿಜ. ಹಾಗೆಂದ ಮಾತ್ರಕ್ಕೆ ಸಲ್ಲು ಜೊತೆ ಮದುವೆ ಆಗುವ ಅವರು ಯಾವುದೇ ನಿರ್ಧಾರವನ್ನು ಸೋನಾಕ್ಷಿ ಸಿನ್ಹಾ ತೆಗೆದುಕೊಂಡಿಲ್ಲ. ಪ್ರಸ್ತುತ ಕೆಲವು ಸಿನಿಮಾಗಳ ಕೆಲಸಗಳಲ್ಲಿ ಸೋನಾಕ್ಷಿ ಬ್ಯುಸಿ ಆಗಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರಿಗೆ ಈಗ 34 ವರ್ಷ ವಯಸ್ಸು. ಸದ್ಯಕ್ಕಂತೂ ಅವರು ಮದುವೆ ಬಗ್ಗೆ ಆಲೋಚನೆ ಮಾಡಿದಂತಿಲ್ಲ. ಅದೇ ರೀತಿ ಸಲ್ಮಾನ್ ಖಾನ್ ಅವರಿಗೆ 56ರ ಪ್ರಾಯ. ಅವರಿಗೂ ಕೂಡ ಮದುವೆ ಚಿಂತೆ ಇಲ್ಲ. ಸಿಂಗಲ್ ಆಗಿಯೇ ಅವರು ಹಾಯಾಗಿ ಇದ್ದಾರೆ.




