AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಂಡ ಹಗಲು-ರಾತ್ರಿ ಕುಡಿದು, ತಲೆಗೆ ಹೊಡಿತಿದ್ದ’; ಲಾಕಪ್​ ಶೋನಲ್ಲಿ ಕಷ್ಟ ತೋಡಿಕೊಂಡ ಪೂನಂ ಪಾಂಡೆ

ಪೂನಂ ಪಾಂಡೆ ಅವರ ಪತಿ ಸ್ಯಾಮ್​ ಬಾಂಬೆ ವರ್ತನೆ ವಿಚಿತ್ರವಾಗಿತ್ತು. ಕುಡಿತದ ಚಟದಿಂದಾಗಿ ಅವರ ಸಂಸಾರ ಮುರಿದುಬಿತ್ತು. ಆ ಬಗ್ಗೆ ಲಾಕಪ್​ ಶೋನಲ್ಲಿ ಪೂನಂ ಮಾತಾಡಿದ್ದಾರೆ.

‘ಗಂಡ ಹಗಲು-ರಾತ್ರಿ ಕುಡಿದು, ತಲೆಗೆ ಹೊಡಿತಿದ್ದ’; ಲಾಕಪ್​ ಶೋನಲ್ಲಿ ಕಷ್ಟ ತೋಡಿಕೊಂಡ ಪೂನಂ ಪಾಂಡೆ
ಪೂನಂ ಪಾಂಡೆ, ಸ್ಯಾಮ್ ಬಾಂಬೆ
TV9 Web
| Updated By: ಮದನ್​ ಕುಮಾರ್​|

Updated on: Mar 02, 2022 | 1:15 PM

Share

ಹೊಸದಾಗಿ ಶುರುವಾಗಿರುವ ‘ಲಾಕಪ್​’ (Lock Upp) ರಿಯಾಲಿಟಿ ಶೋ ಎಲ್ಲರ ಗಮನ ಸೆಳೆಯುತ್ತಿದೆ. ಅನೇಕ ವಿವಾದಾತ್ಮಕ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿದ್ದಾರೆ. ನಟಿ ಕಂಗನಾ ರಣಾವತ್​ ಅವರು ‘ಲಾಕಪ್​’ ಸಾರಥ್ಯ ವಹಿಸಿದ್ದಾರೆ. ಅಂದರೆ, ನಿರೂಪಣೆಯ ಜವಾಬ್ದಾರಿಯನ್ನು ಅವರು ನಿಭಾಯಿಸುತ್ತಿದ್ದಾರೆ. ಬಿಗ್​ ಬಾಸ್​ ರೀತಿಯೇ ಈ ಶೋ ಕೂಡ ಹಲವು ಕಾರಣಗಳಿಂದಾಗಿ ಸುದ್ದಿ ಆಗುತ್ತಿದೆ. ಹಾಟ್​ ನಟಿ ಪೂನಂ ಪಾಂಡೆ (Poonam Pandey) ಅವರು ಇದರಲ್ಲಿ ಹೈಲೈಟ್​ ಆಗುತ್ತಿದ್ದಾರೆ. ವೃತ್ತಿಜೀವನ ಮತ್ತು ಖಾಸಗಿ ಬದುಕಿನಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿರುವ ಪೂನಂ ಪಾಂಡೆ ಅವರು ‘ಲಾಕಪ್​’ ಕಾರ್ಯಕ್ರಮದಲ್ಲಿ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗಂಡ ಸ್ಯಾಮ್​ ಬಾಂಬೆ (Sam Bombay) ಜೊತೆಗೆ ವೈವಾಹಿಕ ಜೀವನ ಮುರಿದು ಬೀಳಲು ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಸಂಸಾರದಲ್ಲಿ ಅವರು ಎದುರಿಸಿದ ಶಾಕಿಂಗ್​ ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 2020ರ ಸೆಪ್ಟೆಂಬರ್​ 1ರಂದು ಪೂನಂ ಪಾಂಡೆ ಮತ್ತು ಸ್ಯಾಮ್​ ಬಾಂಬೆ ಮದುವೆ ಆಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಘೋರ ಜಗಳ ನಡೆದಿತ್ತು. ಆ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು.

ಪೂನಂ ಪಾಂಡೆ ಅವರ ಪತಿ ಸ್ಯಾಮ್​ ಬಾಂಬೆ ವರ್ತನೆ ವಿಚಿತ್ರವಾಗಿತ್ತು. ಕುಡಿತದ ಚಟದಿಂದಾಗಿ ಅವರ ಸಂಸಾರ ಮುರಿದುಬಿತ್ತು. ಆ ಬಗ್ಗೆ ಲಾಕಪ್​ ಶೋನಲ್ಲಿ ಪೂನಂ ಪಾಂಡೆ ಮಾತಾಡಿದ್ದಾರೆ. ‘ಅವನು ಹಗಲು-ರಾತ್ರಿ ಕುಡಿಯುತ್ತಿದ್ದ. ನನ್ನ ಬಗ್ಗೆ ಸಿಕ್ಕಾಪಟ್ಟೆ ಪೊಸೆಸಿವ್​ ಆಗಿದ್ದ. ನಾನು ಮನೆಯಲ್ಲಿದ್ದರೂ ಕೂಡ ನನ್ನ ಎಲ್ಲ ಚಲನವಲನಗಳನ್ನು ಗಮನಿಸುತ್ತಿದ್ದ. ಅವನ ಜೊತೆ ನಾನು ಕೂಡ ರೂಮ್​ನಲ್ಲೇ ಇರಬೇಕಿತ್ತು. ನನ್ನ ಫೋನ್​ ಆತನೇ ಇಟ್ಟುಕೊಳ್ಳುತ್ತಿದ್ದ. ನನಗೆ ಮುಟ್ಟಲು ಕೊಡುತ್ತಿರಲಿಲ್ಲ. ಅವರ ವರ್ತನೆ ಕಂಡು ಮನೆ ಕೆಲಸದವರು ಕೂಡ ಹೆದರುತ್ತಿದ್ದರು. ಯಾರೂ ಕೂಡ ಮನೆಯಲ್ಲಿ ಇರುತ್ತಿರಲಿಲ್ಲ’ ಎಂದು ಪೂನಂ ಪಾಂಡೆ ಹೇಳಿದ್ದಾರೆ.

ಕೌಟುಂಬಿಕ ದೌರ್ಜನ್ಯವನ್ನೂ ಪೂನಂ ಪಾಂಡೆ ಎದುರಿಸಿದ್ದರು. ‘ಅವನು ನನ್ನ ತಲೆಗೆ ಹೊಡೆಯುತ್ತಿದ್ದ. ಒಂದೇ ಜಾಗಕ್ಕೆ ಪದೇ ಪದೇ ಹೊಡಿದಿದ್ದರಿಂದ ಬ್ರೇನ್​ ಇಂಜ್ಯುರಿ ವಾಸಿ ಆಗಲೇ ಇಲ್ಲ. ನಾನು ಮೇಕಪ್​ ಹಾಕಿಕೊಂಡು ಜನರ ಎದುರು ನಗುತ್ತಿದ್ದೆ. ಕೂಲ್​ ಆಗಿ ಇರುತ್ತಿದ್ದೆ’ ಎಂದು ಪೂನಂ ಪಾಂಡೆ ಹೇಳಿದ್ದಾರೆ. ತಮ್ಮ ಜೀವನದಲ್ಲಿ ಆದ ಕೆಲವು ಅನಿರೀಕ್ಷಿತ ಘಟನೆಗಳ ಬಗ್ಗೆ ಅವರು ಇತ್ತೀಚೆಗೆ ಬಾಯಿ ಬಿಟ್ಟಿದ್ದರು.

ಇತ್ತೀಚೆಗೆ ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಪೂನಂ ಪಾಂಡೆ ಅವರು ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದರು. ‘ನನಗೆ ಕೆಲಸ ಇಲ್ಲದೇ ಇದ್ದಾಗ ವಿವಾದಗಳನ್ನು ಮಾಡಿಕೊಂಡೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಕೆಲಸ ಮಾಡಬೇಕು ಅಂತ ಬಯಸಿದ್ದೇನೆ. ಭವಿಷ್ಯ ಕಟ್ಟಿಕೊಳ್ಳಲು ಅದು ಮಾಡು, ಇದು ಮಾಡು ಅಂತ ಹೇಳಿದವರ ಎಲ್ಲ ಮಾತನ್ನೂ ನಾನು ಕೇಳಿದೆ. ಆದರೆ ಅದು ತಪ್ಪು ಎಂಬುದು ನನಗೆ ನಂತರ ಅರಿವಾಯಿತು. ಜೀವನದಲ್ಲಿ ಯಶಸ್ವಿ ಆಗಬೇಕು ಎಂದರೆ ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ಅದರಿಂದ ಇನ್ನಷ್ಟು ಕೆಲಸ ಸಿಗುತ್ತದೆ. ಜೀವನದಲ್ಲಿ 15 ನಿಮಿಷದ ಜನಪ್ರಿಯತೆ ಮುಖ್ಯ ಅಲ್ಲ. ಇನ್ಮುಂದೆ ನಾನು ಕೆಲಸ ಮಾಡಿ ತೋರಿಸುತ್ತೇನೆ’ ಎಂದು ಪೂನಂ ಪಾಂಡೆ ಹೇಳಿದ್ದರು.

ಇದನ್ನೂ ಓದಿ:

ಮಾದಕ ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು; ಪತಿಯನ್ನು ಬಂಧಿಸಿದ ಪೊಲೀಸರು

‘Lock Upp​’ ಹೋಸ್ಟ್ ಮಾಡುತ್ತಿರುವ ಕಂಗನಾಗೆ ಮೊದಲ ದಿನವೇ ತೀವ್ರ ಅವಮಾನ; ಟೀಕೆಗೆ ಗುರಿಯಾದ ಶೋ

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು