AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಕ ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು; ಪತಿಯನ್ನು ಬಂಧಿಸಿದ ಪೊಲೀಸರು

ಪೂನಂ ಪಾಂಡೆ ಒಂದು ಕಣ್ಣು ಮತ್ತು ಮುಖಕ್ಕೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಪೂನಂ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾದಕ ನಟಿ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು; ಪತಿಯನ್ನು ಬಂಧಿಸಿದ ಪೊಲೀಸರು
ಪೂನಂ ಪಾಂಡೆ, ಸ್ಯಾಮ್​ ಬಾಂಬೆ
TV9 Web
| Edited By: |

Updated on:Nov 09, 2021 | 11:40 AM

Share

ಮಾದಕ ನಟಿ ಪೂನಂ ಪಾಂಡೆ ಅವರು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ವೈಯಕ್ತಿಕ ಜೀವನ ಅನೇಕ ತಿರುವುಗಳನ್ನು ಪಡೆದುಕೊಂಡಿದೆ. ಕಳೆದ ವರ್ಷ ಸ್ಯಾಮ್ ಬಾಂಬೆ ಜೊತೆ ಮದುವೆ ಆಗಿದ್ದ ಅವರು, ಕೆಲವೇ ದಿನಗಳಲ್ಲಿ ಗಂಡನಿಂದ ದೂರವಾಗಿದ್ದರು. ಇಬ್ಬರ ನಡುವೆ ತೀವ್ರ ಜಗಳ ನಡೆದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ತಮ್ಮ ಮೇಲೆ ಸ್ಯಾಮ್ ಬಾಂಬೆ (sam bombay) ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ ಎಂದು ಪೂನಂ ಪಾಂಡೆ (Poonam pandey) ಆರೋಪಿಸಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಒಂದಾಗಿದ್ದರು. ಇದೀಗ ಮತ್ತೆ ತನ್ನ ಪತಿ ಮೇಲೆ ನಟಿ ಪೂನಂ ಪಾಂಡೆ ಆರೋಪಿಸಿದ್ದು, ಸ್ಯಾಮ್ ಬಾಂಬೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೂನಂ ಪಾಂಡೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೂನಂ ನೀಡಿರುವ ದೂರಿನ ಪ್ರಕಾರ, ಸ್ಯಾಮ್ ತನ್ನ ಮೊದಲ ಪತ್ನಿ ಅಲ್ವಿರಾ ಜೊತೆ ಜಗಳವಾಡಿ ಬಂದಿದ್ದರು. ಇದರಿಂದ ಸ್ಯಾಮ್ ಕೋಪಗೊಂಡಿದ್ದು, ಕೋಪದಲ್ಲಿ ಪೂನಂ ಪಾಂಡೆಯ ಕೂದಲು ಹಿಡಿದು ಆಕೆಯ ತಲೆಯನ್ನು ಗೋಡೆಗೆ ತಳ್ಳಿದ್ದಾರೆ. ಇದಾದ ನಂತರ ಸ್ಯಾಮ್ ಮುಖಕ್ಕೆ ಹೊಡೆದಿದ್ದಾರೆ ಎಂದು ಪೂನಂ ಆರೋಪಿಸಿದ್ದಾರೆ.

ಪೂನಂ ಪಾಂಡೆ ಒಂದು ಕಣ್ಣು ಮತ್ತು ಮುಖಕ್ಕೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ಪೂನಂ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪೂನಂ ಪಾಂಡೆ ಅವರ  ದೂರಿನ ಅನ್ವಯ ಬಾಂದ್ರಾ ಪೊಲೀಸರು ಕ್ರಮ ಕೈಗೊಂಡಿದ್ದು, ಪೂನಂ ಪಾಂಡೆ ಪತಿ ಸ್ಯಾಮ್ ಬಂಧಿಸಿದ್ದಾರೆ ಅಲ್ಲದೇ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪೂನಂ ಪಾಂಡೆ ಆಸ್ಪತ್ರೆಗೆ ದಾಖಲು ಮುಂಬೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಪೂನಂ ಪಾಂಡೆ ದೂರು ಸ್ವೀಕರಿಸಿದ ಪೊಲೀಸರು ನಿನ್ನೆ( ನವೆಂಬರ್ 8) ಸ್ಯಾಮ್​ನನ್ನು ಬಂಧಿಸಿದ್ದಾರೆ. ಆದರೆ ಪೂನಂ ಪಾಂಡೆ ಆಸ್ಪತ್ರೆಗೆ ದಾಖಲಾದ ಸುದ್ದಿಯನ್ನು ನೀಡುವಾಗ ಪೊಲೀಸರು ಆಕೆಯನ್ನು ಏಕೆ ದಾಖಲಿಸಿದ್ದಾರೆಂದು ಪ್ರಸ್ತಾಪಿಸಿಲ್ಲ.

ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ ಕಳೆದ ವರ್ಷ ವಿವಾಹವಾಗಿದ್ದರು ಪೂನಂ ಪಾಂಡೆ ಮತ್ತು ಸ್ಯಾಮ್ ಬಾಂಬೆ ಕಳೆದ ವರ್ಷ ಸೆಪ್ಟೆಂಬರ್ 10 ರಂದು ವಿವಾಹವಾಗಿದ್ದರು. ಮದುವೆಗೂ ಮುನ್ನ ಇಬ್ಬರೂ ಲಿವ್ ಇನ್ ರಿಲೇಷನ್ ಶಿಪ್​ನಲ್ಲಿ ಎರಡು ವರ್ಷ ಕಳೆದಿದ್ದರು. ಮದುವೆಯಾದ 12 ದಿನಗಳ ನಂತರವೇ ಇಬ್ಬರ ನಡುವಿನ ಜಗಳದ ಸುದ್ದಿ ಮುನ್ನೆಲೆಗೆ ಬರಲಾರಂಭಿಸಿತು. ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆ ವಿರುದ್ಧ ಗೋವಾದಲ್ಲಿ ಈ ಹಿಂದೆ ಕೂಡ ಕೇಸ್ ದಾಖಲಿಸಿದ್ದರು. ಸ್ಯಾಮ್‌ನನ್ನು ಗೋವಾ ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಸ್ಯಾಮ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಇದನ್ನೂ ಓದಿ: Poonam Pandey: ಪಡ್ಡೆಗಳ ದುಡ್ಡು ಕಬಳಿಸಲು ಹೊಸ ಐಡಿಯಾ ಮಾಡಿದ ಹಾಟ್​ ಬೆಡಗಿ ಪೂನಂ ಪಾಂಡೆ

ಬಲವಂತಕ್ಕೆ ನನ್ನನ್ನು ಪ್ರೆಗ್ನೆಂಟ್​ ಮಾಡಬೇಡಿ; ಮಾದಕ ನಟಿ ಪೂನಂ ಪಾಂಡೆ ಹೀಗೆ ಹೇಳಿದ್ದು ಯಾರಿಗೆ?

Published On - 11:27 am, Tue, 9 November 21