Shankar Nag Birthday: ನಮ್ಮ ಮೆಟ್ರೋ ಶಂಕರ್ ನಾಗ್ ಮೆಟ್ರೋ ಆಗಲಿ; ಕೇಳಿಬಂತು ಹೊಸ ಕೂಗು
ಶಂಕರ್ ನಾಗ್ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನು ಕಳೆದುಕೊಂಡು ಹಲವು ವರ್ಷಗಳು ಕಳೆದಿದ್ದರೂ, ಇಂದಿಗೂ ಅವರು ಮಾಡಿದ ಕೆಲಸವನ್ನು ಜನರು ಸ್ಮರಿಸುತ್ತಿದ್ದಾರೆ. ಈಗ ಮೆಟ್ರೋಗೆ ಅವರ ಹೆಸರು ಇಡಿ ಎನ್ನುವ ಕೂಗು ಜೋರಾಗಿದೆ.
ಶಂಕರ್ ನಾಗ್ ಅವರು ಕನ್ನಡ ನಾಡು ಕಂಡ ಶ್ರೇಷ್ಠ ನಟ, ನಿರ್ಮಾಪಕ ಹಾಗೂ ನಿರ್ದೇಶಕ. 36ನೇ ವಯಸ್ಸಿಗೆ ನಿಧನ ಹೊಂದಿದ ಶಂಕ್ರಣ್ಣ ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಸಿನಿಮಾಗಳನ್ನು ನೀಡಿದ ಖ್ಯಾತಿ ಪಡೆದುಕೊಂಡರು. ಅವರು ಬದುಕಿದ್ದರೆ ಇಂದು (ನವೆಂಬರ್ 9) 67ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲೇ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳನ್ನು ನೀಡಿದ ಖ್ಯಾತಿ ಶಂಕರ್ ನಾಗ್ಗೆ ಸಲ್ಲುತ್ತದೆ. ಅವರ ನಿರ್ದೇಶನದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಆರಂಭವಾಗಿ ಹಲವು ವರ್ಷ ಕಳೆದಿದೆ. ಇದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೇಗ ತಲುಪಬಹುದು. ಟ್ರಾಫಿಕ್ ಕಿರಿಕಿರಿ ಇಲ್ಲ. ಬೆಂಗಳೂರಿಗೆ ಮೆಟ್ರೋ ಬರಬೇಕು ಎಂದು ಶಂಕರ್ ನಾಗ್ ಆಗಲೇ ಕನಸು ಕಂಡಿದ್ದರು. ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ತೆರಳಿ ಈ ಬಗ್ಗೆ ತಿಳಿದುಕೊಂಡು ಬಂದಿದ್ದರು ಅವರು. ಈಗ ನಮ್ಮ ಮೆಟ್ರೋ ಬದಲು, ಶಂಕರ್ ನಾಗ್ ಮೆಟ್ರೋ ಎಂದಾಗಲಿ ಎನ್ನುವ ಆಗ್ರಹ ಕೇಳಿ ಬಂದಿದೆ.
ಶಂಕರ್ ನಾಗ್ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನು ಕಳೆದುಕೊಂಡು ಹಲವು ವರ್ಷಗಳು ಕಳೆದಿದ್ದರೂ, ಇಂದಿಗೂ ಅವರು ಮಾಡಿದ ಕೆಲಸವನ್ನು ಜನರು ಸ್ಮರಿಸುತ್ತಿದ್ದಾರೆ. ಈಗ ಮೆಟ್ರೋಗೆ ಅವರ ಹೆಸರು ಇಡಿ ಎನ್ನುವ ಕೂಗು ಜೋರಾಗಿದೆ. ನಮ್ಮ ಮೆಟ್ರೋ ಹೆಸರನ್ನು ಬದಲಿಸಲು ಸಾಧ್ಯವಾಗದಿದ್ದರೆ ಒಂದು ನಿಲ್ದಾಣಕ್ಕೆ ಶಂಕರ್ ನಾಗ್ ಅವರ ಹೆಸರನ್ನು ಇಡಿ ಎಂದು ಕೋರಲಾಗಿದೆ.
ನಮ್ಮ ಶಂಕರಣ್ಣ ಸ್ವಂತ ಖರ್ಚಿನಲ್ಲಿ ಮೆಟ್ರೊ ಬಗ್ಗೆ ತಿಳಿದು ಬೆಂಗಳೂರಲ್ಲಿ ಕಾರ್ಯರೂಪಕ್ಕೆ ತರಲು ಪಟ್ಟ ಪ್ರಯತ್ನ ಎಲ್ಲರಿಗೂ ತಿಳಿದಿದೆ. ಮಾನ್ಯ @BSBommai ಸರ್, ಅವರ ಕೊಡುಗೆಗಾಗಿ ನಮ್ಮ ಮೆಟ್ರೊ – ಶಂಕರನಾಗ್ ಮೆಟ್ರೊ ಎಂದಾಗಲಿ ಎಂಬುದೇ ನಮ್ಮೆಲ್ಲರ ಆಶಯ. ಕೊನೆಯಪಕ್ಷ ಒಂದು ನಿಲ್ದಾಣಕ್ಕಾದರೂ ಅವರ ಹೆಸರಿಡಿ ಆ ಮಹಾತ್ಮ ರ ಹೆಸರು ಅಮರವಾಗಲಿ pic.twitter.com/Fjt9uhFrav
— ಶಂಕರನಾಗ್_ಪ್ರೆಸ್_ಸಿನಿಕನಸು (@shankarnagpress) November 6, 2021
‘ನಮ್ಮ ಶಂಕರ್ನಾಗ್ ಸ್ವಂತ ಖರ್ಚಿನಲ್ಲಿ ಮೆಟ್ರೋ ಬಗ್ಗೆ ತಿಳಿದು ಬೆಂಗಳೂರಲ್ಲಿ ಕಾರ್ಯರೂಪಕ್ಕೆ ತರಲು ಪಟ್ಟ ಪ್ರಯತ್ನ ಎಲ್ಲರಿಗೂ ತಿಳಿದಿದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶಂಕರ್ ನಾಗ್ ಕೊಡುಗೆಗಾಗಿ ನಮ್ಮ ಮೆಟ್ರೋ ಹೆಸರನ್ನು ಶಂಕರನಾಗ್ ಮೆಟ್ರೋ ಎಂದು ಮಾಡಲಿ ಎಂಬುದೇ ನಮ್ಮೆಲ್ಲರ ಆಶಯ. ಕೊನೆಯಪಕ್ಷ ಒಂದು ನಿಲ್ದಾಣಕ್ಕಾದರೂ ಅವರ ಹೆಸರಿಡಿ. ಆ ಮಹಾತ್ಮರ ಹೆಸರು ಅಮರವಾಗಲಿ’ ಎಂದು ಶಂಕರ್ ನಾಗ್ ಫ್ಯಾನ್ ಕ್ಲಬ್ನವರು ಟ್ವೀಟ್ ಮಾಡಿದ್ದಾರೆ. ‘ಹೌದು ಇದು ಆಗಬೇಕು ನಮ್ಮ ಮೆಟ್ರೋ ಕನಸುಗಾರ ನಮ್ಮ ಶಂಕ್ರಣ್ಣ’ ಎಂದು ಕೆಲವರು ಇದನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: Happy Birthday Shankar Nag: ಇಂದು ಶಂಕರ್ ನಾಗ್ ಜನ್ಮದಿನ; ಕನ್ನಡಿಗರ ಕಣ್ಮಣಿ ನೆನೆದ ಸೆಲೆಬ್ರಿಟಿಗಳು
Published On - 9:28 am, Tue, 9 November 21