AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘Lock Upp​’ ಹೋಸ್ಟ್ ಮಾಡುತ್ತಿರುವ ಕಂಗನಾಗೆ ಮೊದಲ ದಿನವೇ ತೀವ್ರ ಅವಮಾನ; ಟೀಕೆಗೆ ಗುರಿಯಾದ ಶೋ

ಬಿಗ್​ ಬಾಸ್​ ಮನೆಯ ರೀತಿಯಲ್ಲೇ ಜೈಲ್​ ಸೆಟ್​ಅನ್ನು ಹಾಕಲಾಗಿದೆ. 16 ಸ್ಪರ್ಧಿಗಳು ಈ ಶೋನಲ್ಲಿ ಇದ್ದು, ಒಟ್ಟು 72 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯಲಿದೆ.

‘Lock Upp​’ ಹೋಸ್ಟ್ ಮಾಡುತ್ತಿರುವ ಕಂಗನಾಗೆ ಮೊದಲ ದಿನವೇ ತೀವ್ರ ಅವಮಾನ; ಟೀಕೆಗೆ ಗುರಿಯಾದ ಶೋ
ಕಂಗನಾ
TV9 Web
| Edited By: |

Updated on:Mar 01, 2022 | 1:43 PM

Share

ಕಂಗನಾ ರಣಾವತ್ (Kangana Ranaut)​ ಅವರು ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರನ್ನು ಹೊಗಳುವುದಕ್ಕಿಂತ ಟೀಕೆ ಮಾಡುವವರೇ ಹೆಚ್ಚು. ಈಗ ಅವರು ‘ಲಾಕ್​ ಅಪ್​’ ಹೆಸರಿನ ಶೋ ಹೋಸ್ಟ್​ ಮಾಡುತ್ತಿದ್ದಾರೆ. ಭಾನುವಾರ ಈ ಶೋ ಒಟಿಟಿ ಪ್ಲಾಟ್​ಫಾರ್ಮ್​ ‘ಆಲ್ಟ್​ ಬಾಲಾಜಿ‘ಯಲ್ಲಿ (ALTBalaji)ಪ್ರಸಾರ ಆರಂಭಿಸಿದೆ. 16 ಸೆಲೆಬ್ರಿಟಿಗಳು ಈ ಶೋನ ಸ್ಪರ್ಧಿಗಳಾಗಿ ಆಗಮಿಸಿದ್ದಾರೆ. ಈ ರಿಯಾಲಿಟಿ ಶೋ  (Reality Show) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆದರೆ, ಆರಂಭದಲ್ಲೇ ಕಂಗನಾ ರಣಾವತ್​ ಅಭಿಮಾನಿಗಳಿಂದ ಹಾಗೂ ನೆಟ್ಟಿಗರಿಂದ ತೀವ್ರ ಅವಮಾನ ಎದುರಿಸಿದ್ದಾರೆ. ಅವರನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತಿದೆ. ಇದಕ್ಕೆ ಕಾರಣವಾಗಿದ್ದು, ‘ಬಿಗ್​ ಬಾಸ್’ ರಿಯಾಲಿಟಿ ಶೋ.

ಹಿಂದಿಯಲ್ಲಿ ‘ಬಿಗ್​ ಬಾಸ್​’ ಶೋ 15 ಸೀಸನ್​ಗಳನ್ನು ಪೂರ್ಣಗೊಳಿಸಿದೆ. ವರ್ಷ ಕಳೆದಂತೆ ಈ ಶೋ ತನ್ನ ಚಾರ್ಮ್​ ಕಳೆದುಕೊಳ್ಳುತ್ತಿದೆಯಾದರೂ ಒಂದು ವರ್ಗದ ಜನರು ಈ ಶೋಅನ್ನು ಇಷ್ಟಪಡುತ್ತಾರೆ. ಅದರಲ್ಲೂ ಸಲ್ಮಾನ್​ ಖಾನ್​ ಅವರ ನಿರೂಪಣೆ ಅನೇಕರಿಗೆ ಇಷ್ಟವಾಗುತ್ತದೆ. ಈ ಶೋನಿಂದ ಅನೇಕರ ಬದುಕು ಬದಲಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಅನೇಕ ಸ್ಪರ್ಧಿಗಳು ಈಗ ‘ಲಾಕ್​ ಅಪ್​​’ನಲ್ಲೂ ಇದ್ದಾರೆ. ಬಿಗ್​ ಬಾಸ್​ನಂತೆ ಇಲ್ಲೂ ಕೆಲವರ ಡ್ರಾಮಾಗಳು ಶುರುವಾಗಿದೆ. ಈ ಕಾರಣಕ್ಕೆ ವೀಕ್ಷಕರು ಈ ರಿಯಾಲಿಟಿ ಶೋಅನ್ನು ಟೀಕಿಸುತ್ತಿದ್ದಾರೆ. ಕಂಗನಾ ನಿರೂಪಕಿಯಂತೆ ಕಾಣುತ್ತಿಲ್ಲ ಎಂದು ವ್ಯಂಗ್ಯವಾಡುತ್ತಿದ್ದಾರೆ.

‘ಕಂಗನಾ ನಿರೂಪಕಿ ಅಲ್ಲ, ಸ್ಪರ್ಧಿಯಂತೆ ಕಾಣಿಸುತ್ತಿದ್ದಾರೆ. ಅವರೇ ಇಲ್ಲಿ ಡ್ರಾಮಾ ಹುಟ್ಟು ಹಾಕುತ್ತಿದ್ದಾರೆ. ನಿಜಕ್ಕೂ ಬೋರಿಂಗ್​ ಶೋ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾರೆ. ‘ಇದು ಬಿಗ್​ ಬಾಸ್​ನ ಸಸ್ತಾ ಕಾಪಿ’ ಎಂದು ಬರೆದುಕೊಳ್ಳಲಾಗಿದೆ. ‘ನೆಟ್​ಫ್ಲಿಕ್ಸ್​​ನ​ ಸ್ಕ್ವಿಡ್​ ಗೇಮ್​+ಬಿಗ್​ ಬಾಸ್​= ಲಾಕ್​ಅಪ್​’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ಕಂಗನಾ ಇದೇ ಮೊದಲ ಬಾರಿಗೆ ಒಂದು ಶೋಅನ್ನು ನಡೆಸಿಕೊಡುತ್ತಿದ್ದಾರೆ. ಅವರು ನಟನೆಯಲ್ಲಿ ಸಾಕಷ್ಟು ಪಳಗಿದ್ದಾರೆ ನಿಜ. ಆದರೆ, ನಟಿ ಆದ ಮಾತ್ರಕ್ಕೆ ನಿರೂಪಣೆಯಲ್ಲಿ ಯಶಸ್ಸು ಕಾಣಬೇಕೆಂದೇನೂ ಇಲ್ಲ. ಮೊದಲ ಶೋನಲ್ಲೇ ಅವರು ಟೀಕೆ ಎದುರಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಅವರಿಗೆ ಈ ಕ್ಷೇತ್ರದಿಂದ ಆಫರ್ ಬರದೆಯೂ ಇರಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಬಿಗ್​ ಬಾಸ್​ ಮನೆಯ ರೀತಿಯಲ್ಲೇ ಜೈಲ್​ ಸೆಟ್​ಅನ್ನು ಹಾಕಲಾಗಿದೆ. 16 ಸ್ಪರ್ಧಿಗಳು ಈ ಶೋನಲ್ಲಿ ಇದ್ದು, ಒಟ್ಟು 72 ದಿನಗಳ ಕಾಲ ಈ ರಿಯಾಲಿಟಿ ಶೋ ನಡೆಯಲಿದೆ. ಅಂತಿಮವಾಗಿ ಯಾರು ಇದನ್ನು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ.

ಇದನ್ನೂ ಓದಿ: ಕಂಗನಾ ಮಾಡಿದ ಟೀಕೆಗೆ ಒಂದೇ ಮಾತಲ್ಲಿ ತಿರುಗೇಟು ನೀಡಿದ ಆಲಿಯಾ; ಶುಕ್ರವಾರವೇ ಭವಿಷ್ಯ ನಿರ್ಧಾರ

ಬದಲಾಯ್ತು ಕಂಗನಾ ಮನಸ್ಸು, ಹುಸಿ ಆಯ್ತು ನಿರೀಕ್ಷೆ; ಆಲಿಯಾ ಸಿನಿಮಾಗೆ ಕಿರಿಕ್​ ಕ್ವೀನ್​ ಮೆಚ್ಚುಗೆ​

Published On - 1:42 pm, Tue, 1 March 22

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ