AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಗನಾ ಮಾಡಿದ ಟೀಕೆಗೆ ಒಂದೇ ಮಾತಲ್ಲಿ ತಿರುಗೇಟು ನೀಡಿದ ಆಲಿಯಾ; ಶುಕ್ರವಾರವೇ ಭವಿಷ್ಯ ನಿರ್ಧಾರ

ಆಲಿಯಾ ಭಟ್​ ಅವರನ್ನು ಕಂಗನಾ ರಣಾವತ್​ ದ್ವೇಷ ಮಾಡಲು ಹಲವು ಕಾರಣಗಳಿವೆ. ಆ ಬಗ್ಗೆ ಆಲಿಯಾ ತಮ್ಮದೇ ಆದ ನಿಲುವು ಹೊಂದಿದ್ದಾರೆ.

ಕಂಗನಾ ಮಾಡಿದ ಟೀಕೆಗೆ ಒಂದೇ ಮಾತಲ್ಲಿ ತಿರುಗೇಟು ನೀಡಿದ ಆಲಿಯಾ; ಶುಕ್ರವಾರವೇ ಭವಿಷ್ಯ ನಿರ್ಧಾರ
ಕಂಗನಾ ರಣಾವತ್​, ಆಲಿಯಾ ಭಟ್​
TV9 Web
| Updated By: ಮದನ್​ ಕುಮಾರ್​|

Updated on: Feb 23, 2022 | 12:01 PM

Share

ನಟಿ ಕಂಗನಾ ರಣಾವತ್​ (Kangana Ranaut) ಅವರು ಚಿತ್ರರಂಗದಲ್ಲಿ ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ಅದರಲ್ಲೂ ಆಲಿಯಾ ಭಟ್​ (Alia Bhatt) ಅವರನ್ನು ಕಂಡರೆ ಕಂಗನಾ ಉರಿದುರಿದು ಬೀಳುತ್ತಾರೆ. ಆಲಿಯಾ ವಿರುದ್ಧ ಅವರು ಹಲವು ಬಾರಿ ಕಟು ಟೀಕೆ ಮಾಡಿದ್ದಾರೆ. ಈಗಲೂ ಅದನ್ನು ಮುಂದುವರಿಸಿದ್ದಾರೆ. ಆದರೆ ಕಂಗನಾ ರಣಾವತ್​ ಮಾಡುವ ಟೀಕೆಗಳಿಗೆ, ಅವರ ವ್ಯಂಗ್ಯದ ಮಾತುಗಳಿಗೆ ಆಲಿಯಾ ಎಂದಿಗೂ ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ. ಆದರೆ ಎಲ್ಲದಕ್ಕೂ ಒಂದು ಮಿತಿ ಎಂಬುದು ಇರುತ್ತದೆ. ಸದ್ಯ ಆಲಿಯಾ ಭಟ್​ ಅವರು ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ ಅವರಿಗೆ ಕಂಗನಾ ರಣಾವತ್​ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಒಂದೇ ಮಾತಿನಲ್ಲಿ ಆಲಿಯಾ ಉತ್ತರ ನೀಡಿದ್ದಾರೆ. ಅದು ಕೂಡ ತುಂಬ ಜಾಣತನದಲ್ಲಿ ಉತ್ತರಿಸಿದ್ದಾರೆ. ‘ಸುಮ್ಮನಿರುವುದು ಕೂಡ ಒಂದು ಕ್ರಿಯೆ’ ಎಂದು ಹೇಳುವ ಮೂಲಕ ಅವರು ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ಫೆ.25ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಕಂಗನಾ ರಣಾವತ್​ ಅನಿಸಿಕೆ ಪ್ರಕಾರ ಈ ಚಿತ್ರ ಫ್ಲಾಪ್​ ಆಗಲಿದೆ.

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಬಾಕ್ಸ್​ ಆಫೀಸ್​ ಗಳಿಕೆ ಬಗ್ಗೆ ಕಂಗನಾ ಭವಿಷ್ಯ ನುಡಿದಿದ್ದಾರೆ. ಈ ಸಿನಿಮಾಗೆ 200 ಕೋಟಿ ರೂಪಾಯಿ ನಷ್ಟ ಆಗಲಿದೆ ಎಂದು ಅವರು ಹೇಳಿದ್ದಾರೆ. ಅವರ ಮಾತು ನಿಜವಾಗತ್ತೋ ಅಥವಾ ಸುಳ್ಳಾಗುತ್ತೋ ಎಂಬುದು ಶುಕ್ರವಾರ (ಫೆ.25) ಗೊತ್ತಾಗಲಿದೆ.

ಆಲಿಯಾ ಭಟ್​ ಅವರನ್ನು ಕಂಗನಾ ರಣಾವತ್​ ದ್ವೇಷ ಮಾಡಲು ಹಲವು ಕಾರಣಗಳಿವೆ. ಬಾಲಿವುಡ್​ನಲ್ಲಿ ಆಳವಾಗಿ ಬೇರೂರಿರುವ ನೆಪೋಟಿಸಂ ಪಿಡುಗಿನ ಫಲಾನುಭವಿಯಾಗಿ ಆಲಿಯಾ ಭಟ್​ ಬೆಳೆದಿದ್ದಾರೆ ಎಂಬುದು ಕಂಗನಾ ಅಭಿಪ್ರಾಯ. ಆಲಿಯಾ ತಂದೆ ಮಹೇಶ್​ ಭಟ್​ ಅವರು ಮೂವೀ ಮಾಫಿಯಾ ನಡೆಸುತ್ತಾರೆ ಎಂಬ ಆರೋಪವನ್ನೂ ಕಂಗನಾ ಆಗಾಗ ಮಾಡುತ್ತಿರುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಕಂಗನಾ ಮತ್ತು ಆಲಿಯಾ ನಡುವೆ ದ್ವೇಷ ಸೃಷ್ಟಿ ಆಗಿದೆ.

ಸಾಧ್ಯವಾಗುವ ಎಲ್ಲ ರೀತಿಯಲ್ಲೂ ಆಲಿಯಾರನ್ನು ಕಂಗನಾ ವಿರೋಧಿಸುತ್ತಾರೆ. ಇತ್ತೀಚೆಗೆ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ವಿಡಿಯೋಗೆ ಕಿಯಾರಾ ಖನ್ನಾ ಎಂದು ಚಿಕ್ಕ ಬಾಲಕಿ ರೀಲ್ಸ್​ ಮಾಡಿದ್ದರು. ಅದಕ್ಕೂ ಕೂಡ ಕಂಗನಾ ಆಕ್ಷೇಪ ವ್ಯಕ್ತಪಡಿಸಿದ್ದರು. ರಿಯಲ್​ ಲೈಫ್​ ಘಟನೆಗಳನ್ನು ಆಧರಿಸಿ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಸಿದ್ಧವಾಗಿದೆ. ಗಂಗೂಬಾಯಿ ವೇಶ್ಯೆ ಆಗಿರುತ್ತಾಳೆ. ನಂತರ ಕಾಮಾಟಿಪುರದ ಡಾನ್​ ಆಗಿ ಬೆಳೆಯುತ್ತಾಳೆ. ಇದೇ ಕಥೆ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ರೀತಿಯ ಕಥೆಯುಳ್ಳ ಸಿನಿಮಾಗಳ ಡೈಲಾಗ್​ಗಳನ್ನು ಬಾಲಕಿ ಕಿಯಾರಾ ಕಾಪಿ ಮಾಡಿರುವುದಕ್ಕೆ ಕಂಗನಾ ಅಸಮಾಧಾನ ಹೊರಹಾಕಿದ್ದರು. ‘ಚಿಕ್ಕ ಮಕ್ಕಳು ಬಾಯಲ್ಲಿ ಬೀಡಿ ಇಟ್ಟುಕೊಂಡು, ವೇಶ್ಯೆ ಪಾತ್ರವನ್ನು ಅನುಕರಣೆ ಮಾಡುವುದು ಎಷ್ಟು ಸರಿ? ಇಷ್ಟು ಸಣ್ಣ ವಯಸ್ಸಿಗೆ ಅವಳ ಮನಸ್ಸಿನಲ್ಲಿ ಈ ರೀತಿ ವಿಚಾರ ತುಂಬುವುದು ಸರಿಯೇ? ಹಲವು ಚಿಕ್ಕಮಕ್ಕಳು ಇವರನ್ನೇ ಹಿಂಬಾಲಿಸುತ್ತಿರುತ್ತಾರೆ’ ಎಂದು ಕಂಗನಾ ಆತಂಕ ಹೊರ ಹಾಕಿದ್ದರು. ಈ ಪೋಸ್ಟ್​​ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಗೆ ಟ್ಯಾಗ್ ಮಾಡಿದ್ದರು.

ಇದನ್ನೂ ಓದಿ:

‘ಸದ್ಯಕ್ಕೆ ಮದುವೆ ಆಗಲ್ಲ’; ಹೊಸ ಟ್ವಿಸ್ಟ್​ ನೀಡಿದ ಆಲಿಯಾ; ರಣಬೀರ್​ ಕಪೂರ್​ ಲವ್​ ಕಥೆ ಏನಾಯ್ತು?

‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ