AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸದ್ಯಕ್ಕೆ ಮದುವೆ ಆಗಲ್ಲ’; ಹೊಸ ಟ್ವಿಸ್ಟ್​ ನೀಡಿದ ಆಲಿಯಾ; ರಣಬೀರ್​ ಕಪೂರ್​ ಲವ್​ ಕಥೆ ಏನಾಯ್ತು?

‘ತುಂಬ ಶೀಘ್ರದಲ್ಲಂತೂ ಮದುವೆ ಆಗಲ್ಲ’ ಎಂದು ಆಲಿಯಾ ಭಟ್​ ಹೇಳಿದ್ದಾರೆ. ಹಾಗಂತ ರಣಬೀರ್​ ಕಪೂರ್​ ಬಗ್ಗೆ ತಮಗೆ ಪ್ರೀತಿ ಇದೆ ಎಂಬುದನ್ನು ಆಲಿಯಾ ನಿರಾಕರಿಸಿಲ್ಲ.

‘ಸದ್ಯಕ್ಕೆ ಮದುವೆ ಆಗಲ್ಲ’; ಹೊಸ ಟ್ವಿಸ್ಟ್​ ನೀಡಿದ ಆಲಿಯಾ; ರಣಬೀರ್​ ಕಪೂರ್​ ಲವ್​ ಕಥೆ ಏನಾಯ್ತು?
ಆಲಿಯಾ ಭಟ್, ರಣಬೀರ್ ಕಪೂರ್
TV9 Web
| Edited By: |

Updated on: Feb 23, 2022 | 8:14 AM

Share

ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರಾದ ಆಲಿಯಾ ಭಟ್ (Alia Bhatt)​ ಮತ್ತು ರಣಬೀರ್​ ಕಪೂರ್​ ನಡುವಿನ ಪ್ರೇಮ್​ ಕಹಾನಿ ಈಗ ಗುಟ್ಟಾಗಿ ಉಳಿದಿಲ್ಲ. ತಮ್ಮಿಬ್ಬರ ಪ್ರೀತಿಯ ಬಗ್ಗೆ ಈ ಜೋಡಿ ಬಹಿರಂಗವಾಗಿಯೇ ಮಾತನಾಡಿಕೊಂಡಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದಕ್ಕೆ ಅವರ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳು ಕೂಡ ಸಾಕ್ಷಿ ಒದಗಿಸುತ್ತಿವೆ. ಅಷ್ಟೇ ಅಲ್ಲದೇ, ಅನೇಕ ಸಂದರ್ಶನಗಳಲ್ಲಿ ಈ ಬಗ್ಗೆ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ (Ranbir Kapoor) ಬಾಯಿ ಬಿಟ್ಟಿದ್ದುಂಟು. ಇನ್ನು ಕೆಲವೇ ದಿನಗಳಲ್ಲಿ ಇಬ್ಬರ ಮದುವೆ ನಡೆಯಲಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಮದುವೆ ಲೊಕೇಷನ್​ ಕೂಡ ಫೈನಲ್​ ಆಗಿದೆ ಎಂಬಿತ್ಯಾದಿ ಸುದ್ದಿ ಸಹ ಈ ಹಿಂದೆ ಹರಿದಾಡಿತ್ತು. ಈಗ ಆಲಿಯಾ ಭಟ್​ ಅವರು ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾದ ರಿಲೀಸ್​ಗಾಗಿ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಪ್ರಚಾರದ ಸಲುವಾಗಿ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮದುವೆ ಬಗ್ಗೆಯೂ ಪ್ರಶ್ನೆ ಎದುರಾಗುತ್ತಿದೆ. ಅದಕ್ಕೆ ಅವರು ನೀಡಿದ ಉತ್ತರ ಕೊಂಚ ಅನುಮಾನಕ್ಕೆ ಕಾರಣ ಆಗಿದೆ.

ಪದೇ ಪದೇ ಮದುವೆ ಬಗ್ಗೆ ಗಾಸಿಪ್​ ಕೇಳಿಬಂದರೆ ಕಿರಿಕಿರಿ ಆಗುವುದು ಸಹಜ. ಆ ಕುರಿತು ಆಲಿಯಾ ಭಟ್​ ಅವರಿಗೆ ಪ್ರಶ್ನೆ ಕೇಳಲಾಯಿತು. ‘ಬಾಲಿವುಡ್​ ಬಬಲ್​’ ನಡೆಸಿದ ಸಂದರ್ಶನದಲ್ಲಿ ಆಲಿಯಾಗೆ ಈ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿರುವ ಅವರು ವಿವರವಾಗಿ ಮಾತನಾಡಿದ್ದಾರೆ. ರಣಬೀರ್​ ಕಪೂರ್​ ಬಗ್ಗೆ ತಮಗೆ ಇರುವ ಪ್ರೀತಿ ಎಂಥದ್ದು ಎಂಬುದನ್ನು ಆಲಿಯಾ ತಿಳಿಸಿದ್ದಾರೆ.

‘ಮದುವೆ ಕುರಿತ ಗಾಸಿಪ್​ನಿಂದ ನನಗೆ ತೊಂದರೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ತೊಂದರೆ ಆಗಿದ್ದು ನನಗೆ ನೆನಪಿಲ್ಲ. ತುಂಬ ಜನ ಮದುವೆ ಆಗುತ್ತಿದ್ದಾರೆ. ಹಾಗಾಗಿ ನಮ್ಮ ಬಗ್ಗೆಯೂ ಸುದ್ದಿ ಹರಡಿರಬಹುದು. ಕಪಲ್​ ಎಂದಮೇಲೆ ಮದುವೆ ಆಗಲೇಬೇಕು. ಅದು ಭಾವನೆಗಳಿಂದ ಆಗಬೇಕು. ಕಂಫರ್ಟೆಬಲ್​ ಎನಿಸುವಂತಹ ಸೂಕ್ತ ಸಮಯ ಬಂದಾಗ ಮದುವೆ ಆಗಬೇಕು’ ಎಂದು ಆಲಿಯಾ ಹೇಳಿದ್ದಾರೆ.

ಶೀಘ್ರದಲ್ಲೇ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಮದುವೆ ಆಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ಆಲಿಯಾ ನೀಡಿದ್ದಾರೆ. ‘ತುಂಬ ಶೀಘ್ರದಲ್ಲಂತೂ ಮದುವೆ ಆಗಲ್ಲ’ ಎಂದು ಅವರು ಹೇಳಿದ್ದಾರೆ. ಸೆಲೆಬ್ರಿಟಿಗಳ ಲೈಫ್​ ವಿಚಿತ್ರವಾಗಿರುತ್ತದೆ. ಒಂದೆರಡು ಸಿನಿಮಾ ಒಟ್ಟಿಗೆ ಮಾಡಿ, ಅವು ರಿಲೀಸ್​ ಆಗುವತನಕ ಕಪಲ್​ ರೀತಿ ಓಡಾಡಿಕೊಂಡು, ನಂತರ ಬ್ರೇಕಪ್​ ಮಾಡಿಕೊಂಡವರು ಹಲವರು ಇದ್ದಾರೆ. ‘ತುಂಬ ಶೀಘ್ರದಲ್ಲಂತೂ ಮದುವೆ ಆಗಲ್ಲ’ ಎಂದು ಆಲಿಯಾ ಹೇಳಿದ್ದನ್ನು ಕೇಳಿ ‘ಹಾಗಾದರೆ ರಣಬೀರ್​ ಕಪೂರ್​ ಲವ್​ ಕಥೆ ಏನಾಗಬಹುದಪ್ಪ’ ಎಂಬ ಅನುಮಾನ ಅಭಿಮಾನಿಗಳ ಮನದಲ್ಲಿ ಒಂದು ಕ್ಷಣ ಮೂಡುವಂತಾಗಿದೆ. ಹಾಗಂತ ರಣಬೀರ್​ ಬಗ್ಗೆ ತಮಗೆ ಪ್ರೀತಿ ಇದೆ ಎಂಬುದನ್ನು ಆಲಿಯಾ ನಿರಾಕರಿಸಿಲ್ಲ.

‘ನನ್ನ ಬದುಕಿನಲ್ಲಿ ನಾನು ಕಂಡು ಅತಿ ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್​ ಕಪೂರ್​ ಕೂಡ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ. ಅವರು ನನಗೆ ಸಖತ್​ ಬೆಂಬಲ ನೀಡುತ್ತಾರೆ. ನನ್ನ ಬಗ್ಗೆ ಮಾತನಾಡಲು ಕೂಡ ಅವರಲ್ಲಿ ಸಾಕಷ್ಟು ವಿಷಯ ಇದೆ ಅಂದುಕೊಂಡಿದ್ದೇನೆ. ಆದರೆ ಅದೆಲ್ಲವೂ ಆಗಬೇಕು ಎಂದರೆ ಸೂಕ್ತ ಸಮಯ ಬರಬೇಕು’ ಎಂದು ಆಲಿಯಾ ಭಟ್​ ಹೇಳಿದ್ದಾರೆ.

ಇದನ್ನೂ ಓದಿ:

ನಿಜ ಜೀವನದಲ್ಲೂ ಗಂಗೂಬಾಯಿ ರೀತಿ ಬದಲಾದ ಆಲಿಯಾ; ಬಾಯ್​ಫ್ರೆಂಡ್​ ರಣಬೀರ್​ ಕಪೂರ್​ಗೆ ಕಿರಿಕಿರಿ

Alia Bhatt: ಮಾನಸಿಕವಾಗಿ ರಣಬೀರ್​ ಜತೆ ನನ್ನ ಮದುವೆ ಆಗಿದೆ ಎಂದ ಆಲಿಯಾ ಭಟ್​  

Follow Us
Web contact
Web contact

TV9 Kannada

Read More
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್