AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜ ಜೀವನದಲ್ಲೂ ಗಂಗೂಬಾಯಿ ರೀತಿ ಬದಲಾದ ಆಲಿಯಾ; ಬಾಯ್​ಫ್ರೆಂಡ್​ ರಣಬೀರ್​ ಕಪೂರ್​ಗೆ ಕಿರಿಕಿರಿ

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಈಗ ಗೌಪ್ಯವಾಗಿ ಉಳಿದಿಲ್ಲ. ಶೀಘ್ರದಲ್ಲೇ ಇವರಿಬ್ಬರು ಹಸೆ ಮಣೆ ಏರಲಿದ್ದಾರೆ.

ನಿಜ ಜೀವನದಲ್ಲೂ ಗಂಗೂಬಾಯಿ ರೀತಿ ಬದಲಾದ ಆಲಿಯಾ; ಬಾಯ್​ಫ್ರೆಂಡ್​ ರಣಬೀರ್​ ಕಪೂರ್​ಗೆ ಕಿರಿಕಿರಿ
ರಣಬೀರ್​ ಕಪೂರ್, ಆಲಿಯಾ ಭಟ್​
TV9 Web
| Edited By: |

Updated on: Feb 18, 2022 | 11:33 AM

Share

ನಟಿ ಆಲಿಯಾ ಭಟ್​ (Alia Bhatt) ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋಯಿನ್​ ಆಗಿ ಮಿಂಚುತ್ತಿದ್ದಾರೆ. ತಮ್ಮ ಪ್ರತಿಭೆ ಏನು ಎಂಬುದನ್ನು ಅವರು ಅನೇಕ ಸಿನಿಮಾಗಳ ಮೂಲಕ ಸಾಬೀತುಪಡಿಸಿದ್ದಾರೆ. ಅವರ ಖಾತೆಯಲ್ಲಿ ಹಲವು ಸೂಪರ್​ ಹಿಟ್​ ಚಿತ್ರಗಳಿವೆ. ನೆಪೋಟಿಸಂ ಕಳಂಕವನ್ನು ಮೀರಿ ಆಲಿಯಾ ಭಟ್​ ಬೆಳೆದಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಅದರೊಳಗೆ ಪರಕಾಯ ಪ್ರವೇಶ ಮಾಡುವಷ್ಟು ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಈಗ ಅವರು ಅಭಿನಯಿಸಿರುವ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾದಲ್ಲಿ ಅವರು ವೇಶ್ಯೆ ಪಾತ್ರ ನಿಭಾಯಿಸಿದ್ದಾರೆ. ಕಾಮಾಟಿಪುರದ ಡಾನ್​ ಆಗಿ ಮೆರೆದ ಗಂಗೂಬಾಯಿ ಜೀವನ ಆಧರಿಸಿ ಈ ಚಿತ್ರ ಸಿದ್ಧವಾಗಿದ್ದು, ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ಈ ಪಾತ್ರವನ್ನು ಆಲಿಯಾ ಭಟ್​ ಅವರು ತುಂಬ ಶ್ರದ್ಧೆಯಿಂದ ನಿಭಾಯಿಸಿದ್ದಾರೆ ಎಂದು ನಿರ್ದೇಶಕರು ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಆದರೆ ಪಾತ್ರದಲ್ಲಿ ಆಲಿಯಾ ಮುಳುಗಿ ಹೋಗಿದ್ದರಿಂದ ಅವರ ಪ್ರಿಯಕರ ರಣಬೀರ್​ ಕಪೂರ್​ (Ranbir Kapoor) ಅವರಿಗೆ ಕಿರಿಕಿರಿ ಆಗಿದೆ. ಅದನ್ನು ಸಂಜಯ್​ ಲೀಲಾ ಬನ್ಸಾಲಿ ಬಳಿ ರಣಬೀರ್​ ಹೇಳಿಕೊಂಡಿದ್ದರು ಎಂಬುದು ಈಗ ಬಯಲಾಗಿದೆ.

ಬಹುನಿರೀಕ್ಷಿತ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಫೆ.25ರಂದು ರಿಲೀಸ್​ ಆಗಲಿದೆ. ಬಿಡುಗಡೆಗೂ ಮುನ್ನವೇ ಈ ಚಿತ್ರ ಸೌಂಡು ಮಾಡುತ್ತಿದೆ. ಅನೇಕ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ನಡೆದ 72ನೇ ಬರ್ಲಿನ್​ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕೂಡ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಪ್ರದರ್ಶನ ಆಯಿತು. ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಮತ್ತು ನಟಿ ಆಲಿಯಾ ಭಟ್​ ಕೂಡ ಹಾಜರಿ ಹಾಕಿದ್ದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಲೀಲಾ ಬನ್ಸಾಲಿ ಅವರು ಕೆಲವು ಫನ್ನಿ ವಿಚಾರಗಳನ್ನು ಹಂಚಿಕೊಂಡರು.

‘ಈ ಪಾತ್ರ ಮಾಡಿದ ಬಳಿಕ ರಿಯಲ್​ ಲೈಫ್​ನಲ್ಲಿಯೂ ಕೂಡ ಆಲಿಯಾ ಭಟ್​ ಅವರು ಗಂಗೂಬಾಯಿ ರೀತಿ ಬದಲಾಗಿದ್ದಾರೆ ಅಂತ ನನಗೆ ಅನಿಸುತ್ತದೆ. ಮನೆಯಲ್ಲಿ ಕೂಡ ಅವರು ಗಂಗೂಬಾಯಿ ಥರ ಮಾತನಾಡುತ್ತಾರೆ ಅಂತ ಅವರ ಬಾಯ್​ಫ್ರೆಂಡ್​ (ರಣಬೀರ್​ ಕಪೂರ್​) ನನಗೆ ಕಂಪ್ಲೇಂಟ್​ ಮಾಡಿದ್ದಾರೆ’ ಎಂದು ಸಂಜಯ್​ ಲೀಲಾ ಬನ್ಸಾಲಿ ಹೇಳಿದ್ದಾರೆ. ಪಕ್ಕದಲ್ಲೇ ಕುಳಿತಿದ್ದ ಆಲಿಯಾ ಭಟ್​ ಅವರು ಈ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ.

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಈಗ ಗೌಪ್ಯವಾಗಿ ಉಳಿದಿಲ್ಲ. ಶೀಘ್ರದಲ್ಲೇ ಇವರಿಬ್ಬರು ಹಸೆ ಮಣೆ ಏರಲಿದ್ದಾರೆ. ‘ನಾನು ಈಗಾಗಲೇ ಮಾನಸಿಕವಾಗಿ ರಣಬೀರ್​ ಕಪೂರ್​ ಜೊತೆ ಮದುವೆ ಆಗಿದ್ದೇನೆ’ ಎಂದು ಇತ್ತೀಚೆಗೆ ಆಲಿಯಾ ಭಟ್​ ಹೇಳಿಕೆ ನೀಡಿದ್ದ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ತಮ್ಮ-ತಮ್ಮ ಸಿನಿಮಾ ಕೆಲಸಗಳಲ್ಲಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಬ್ಯುಸಿ ಆಗಿದ್ದಾರೆ. ಆ ಕಾರಣದಿಂದ ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ ಎನ್ನುತ್ತಿವೆ ಆಪ್ತ ಮೂಲಗಳು.

ಸಂಜಯ್​ ಲೀಲಾ ಬನ್ಸಾಲಿ ಅವರ ಸಿನಿಮಾಗಳು ರಿಲೀಸ್​ಗೂ ಮುನ್ನ ವಿವಾದ ಮಾಡಿಕೊಳ್ಳುವುದು ಸಹಜ ಎಂಬಂತಾಗಿದೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಕೂಡ ಕೆಲವರಿಂದ ವಿರೋಧ ಎದುರಿಸುತ್ತಿದೆ. ಇನ್ನು, ಈ ಚಿತ್ರದಲ್ಲಿ ಕೆಲವು ಆಕ್ಷೇಪಾರ್ಹ ಅಂಶಗಳಿವೆ ಎಂಬ ಕಾರಣಕ್ಕೆ ಸೆನ್ಸಾರ್​ ಮಂಡಳಿಯವರು ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿದ್ದಾರೆ ಎಂಬ ಬಗ್ಗೆಯೂ ಇತ್ತೀಚೆಗೆ ವರದಿ ಆಗಿತ್ತು. ಜವಾಹರಲಾಲ್​ ನೆಹರು ಅವರ ಬಗ್ಗೆ ಪ್ರಸ್ತಾಪ ಆಗಿರುವ ಎರಡು ದೃಶ್ಯಗಳನ್ನು ಕಟ್​ ಮಾಡಲು ಆದೇಶಿಸಲಾಗಿದ್ದು, ಕೆಲವು ಪದಗಳನ್ನು ಮ್ಯೂಟ್​ ಮಾಡಲು ತಿಳಿಸಲಾಗಿದೆ. ಅದರಂತೆ ಚಿತ್ರತಂಡ ನಡೆದುಕೊಂಡಿದೆ. ಪರಿಣಾಮವಾಗಿ ಚಿತ್ರದ ಅವಧಿ ಕೊಂಚ ತಗ್ಗಿದೆ. ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ.

ಇದನ್ನೂ ಓದಿ:

ಆಲಿಯಾ ಭಟ್​ ಅನುಕರಣೆ ಮಾಡಿದ ಬಾಲಕಿ; ಕಂಗನಾ ಅಸಮಾಧಾನಕ್ಕೆ ಕಾರಣವಾಯ್ತು ಆ ವಿಡಿಯೋ

ಟಿವಿ9 ಜತೆ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಗ್ಗೆ ಮಾತನಾಡಿದ ಆಲಿಯಾ ಭಟ್​; ಇಲ್ಲಿದೆ ವಿಡಿಯೋ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್