ಟಿವಿ9 ಜತೆ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಗ್ಗೆ ಮಾತನಾಡಿದ ಆಲಿಯಾ ಭಟ್​; ಇಲ್ಲಿದೆ ವಿಡಿಯೋ

ಮುಂಬೈನ ಕಾಮಾಟಿಪುರದ ಡಾನ್​ ಆಗಿ ಮೆರೆದ ಗಂಗೂಬಾಯಿ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಆಲಿಯಾ ಜೊತೆ ವಿಜಯ್​ ರಾಝ್​, ಹುಮಾ ಖುರೇಶಿ ಮತ್ತು ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

TV9kannada Web Team

| Edited By: Rajesh Duggumane

Feb 11, 2022 | 8:01 PM

ಸಂಜಯ್​ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ (Gangubai Kathiawadi) ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಗಂಗೂಬಾಯಿ ಆಗಿ ಆಲಿಯಾ ಭಟ್​ (Alia Bhatt) ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಲೀಸ್​ ಆದ ಚಿತ್ರದ ಟ್ರೇಲರ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಆಲಿಯಾ ಭಟ್​ ಅವರ ನಟನೆ ಕಂಡು ಎಲ್ಲರೂ ಪ್ರಶಂಸೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಚಿತ್ರ ಫೆಬ್ರವರಿ 25ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಕೊವಿಡ್​ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ವಿಳಂಬವಾಗುತ್ತಲೇ ಇತ್ತು. ಕೊನೆಗೂ ಸಿನಿಮಾ ತೆರೆಗೆ ಬರುತ್ತಿದೆ. ಮುಂಬೈನ ಕಾಮಾಟಿಪುರದ ಡಾನ್​ ಆಗಿ ಮೆರೆದ ಗಂಗೂಬಾಯಿ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಆಲಿಯಾ ಜೊತೆ ವಿಜಯ್​ ರಾಝ್​, ಹುಮಾ ಖುರೇಶಿ ಮತ್ತು ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ಗಮನ ಸೆಳೆದಿದೆ. ಈವರೆಗೂ 5 ಕೋಟಿಗೂ ಹೆಚ್ಚು ಬಾರಿ ಈ ಟ್ರೇಲರ್​ ವೀಕ್ಷಣೆ ಕಂಡಿದೆ. ಈ ಚಿತ್ರದಲ್ಲಿ ಯಾವೆಲ್ಲ ಅಂಶ ಇದೆ? ಈ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದೇಕೆ? ಅವರ ಪಾತ್ರ ಹೇಗಿದೆ ಎಂಬ ಬಗ್ಗೆ ಆಲಿಯಾ ಭಟ್ ಟಿವಿ9 ಜತೆಗೆ​ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: ನೆಹರುಗೆ ಸಂಬಂಧಿಸಿದ ಎರಡು ದೃಶ್ಯಗಳಿಗೆ ಸೆನ್ಸಾರ್​ ಕತ್ತರಿ; ‘ಗಂಗೂಬಾಯಿ..’ ಚಿತ್ರಕ್ಕೆ ಸಿಕ್ಕ ಪ್ರಮಾಣ ಪತ್ರ ಯಾವುದು?

Alia Bhatt: ಮಾನಸಿಕವಾಗಿ ರಣಬೀರ್​ ಜತೆ ನನ್ನ ಮದುವೆ ಆಗಿದೆ ಎಂದ ಆಲಿಯಾ ಭಟ್​  

Follow us on

Click on your DTH Provider to Add TV9 Kannada