ಸುಮಾರು 12 ಕೋಟಿ ರೂ ನೀಡಿ ಎರಡು ಹೊಸ ಫ್ಲಾಟ್ ಖರೀದಿಸಿದ ಕಾಜೊಲ್; ನಟಿಯ ಹೆಸರಿನಲ್ಲಿ ಒಟ್ಟು ಎಷ್ಟು ಮನೆಗಳಿವೆ?

Kajol | Ajay Devgan: ಬಾಲಿವುಡ್​ ತಾರೆಯರಿಗೆ ಮುಂಬೈನ ಪ್ರತಿಷ್ಠಿತ ಪ್ರದೇಶಗಳಲ್ಲಿ ಮನೆಯನ್ನು ಹೊಂದುವುದರಲ್ಲಿ ಬಹಳ ಆಸಕ್ತಿ. ಈ ಪಟ್ಟಿಗೆ ಹೊಸ ಸೇರ್ಪಡೆ ಕಾಜೊಲ್. ನಟಿ ದುಬಾರಿ ಮೊತ್ತ ನೀಡಿ ಎರಡು ಫ್ಲಾಟ್​​ಗಳನ್ನು ಇತ್ತೀಚೆಗೆ ಖರೀದಿ ಮಾಡಿದ್ದಾರೆ.

ಸುಮಾರು 12 ಕೋಟಿ ರೂ ನೀಡಿ ಎರಡು ಹೊಸ ಫ್ಲಾಟ್ ಖರೀದಿಸಿದ ಕಾಜೊಲ್; ನಟಿಯ ಹೆಸರಿನಲ್ಲಿ ಒಟ್ಟು ಎಷ್ಟು ಮನೆಗಳಿವೆ?
ಕಾಜೊಲ್
Follow us
TV9 Web
| Updated By: shivaprasad.hs

Updated on:Feb 17, 2022 | 3:41 PM

ಮುಂಬೈನಲ್ಲಿ (Mumbai) ಮನೆಯನ್ನು ಹೊಂದುವುದು ಬಹುತೇಕರಿಗೆ ದೊಡ್ಡ ಕನಸು. ಅದರಲ್ಲೂ ಬಾಲಿವುಡ್ ತಾರೆಯರಿಗೆ (Bollywood stars) ಇದೊಂದು ಪ್ರತಿಷ್ಠೆಯ ವಿಷಯ. ಬಹಳಷ್ಟು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿದ ನಂತರ ಹಲವರು ಸ್ವಂತ ಮನೆಯನ್ನು ಖರೀದಿಸುತ್ತಾರೆ. ಮತ್ತಷ್ಟು ತಾರೆಯರು ಪ್ರತಿಷ್ಠಿತ ಪ್ರದೇಶಗಳಲ್ಲಿ ಬಾಡಿಗೆಗೆ ಮನೆ ದೊರೆಯುತ್ತದೆಯೇ ಎಂದು ಹುಡುಕುತ್ತಾರೆ. ವಾಣಿಜ್ಯ ನಗರಿ ಮುಂಬೈನಲ್ಲಿ ನೆಲೆಯೂರುವುದು ವೃತ್ತಿಪರವಾಗಿ ಒಳ್ಳೆಯದು ಎಂಬುದು ಮನೆ ಖರೀದಿಸಲು ಇರುವ ಮುಖ್ಯ ಕಾರಣ. ಮತ್ತಷ್ಟು ತಾರೆಯರು ಈಗಾಗಲೇ ಹಲವು ಮನೆಗಳನ್ನು ಹೊಂದಿದ್ದರೂ, ಹೊಸ ಮನೆಗಳನ್ನು ಖರೀದಿಸುತ್ತಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಕಾಜೊಲ್ ದೇವಗನ್ (Kajol Devgan). ನಟಿ ದುಬಾರಿ ಮೊತ್ತ ನೀಡಿ ಎರಡು ಫ್ಲಾಟ್​​ಗಳನ್ನು ಖರೀದಿಸಿದ್ದಾರೆ. ಅದೂ ಕೂಡ ಪ್ರತಿಷ್ಠಿತ ಏರಿಯಾವಾದ ಜುಹುವಿನಲ್ಲಿ. ಅನನ್ಯಾ ಬುಲ್ಡಿಂಗ್​ನ 10ನೇ ಮಹಡಿಯ ಎರಡು ಅಪಾರ್ಟ್​ಮೆಂಟ್​ಗಳನ್ನು ಕಾಜೊಲ್ ಖರೀದಿಸಿದ್ದಾರೆ. ಇದಕ್ಕೆ ನಟಿ ಬರೋಬ್ಬರಿ 11.95 ಕೋಟಿ ರೂ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ಈ ವರ್ಷದ ಜನವರಿಯಲ್ಲಿ ಕಾಜೊಲ್ ಮನೆ ಖರೀದಿಸಿದ್ದಾರೆ. ಪ್ರಸ್ತುತ ಅವರು ಜುಹುವಿನಲ್ಲಿ ವಾಸವಿರುವ ‘ಶಿವಶಕ್ತಿ’ ನಿವಾಸಕ್ಕೆ ಹೊಸ ಮನೆ ಸಮೀಪದಲ್ಲಿದೆ ಎಂದು ವರದಿಯಾಗಿದೆ. ಹೃತಿಕ್ ರೋಶನ್, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವು ಖ್ಯಾತ ತಾರೆಯರು ಜುಹುವಿನಲ್ಲಿ ನೆಲೆಸಿದ್ದಾರೆ.

ಸ್ಕ್ವಾರ್​ಫೀಟ್ ಇಂಡಿಯಾ ವರದಿಯ ಪ್ರಕಾರ ಕಾಜೊಲ್ ಖರೀದಿಸಿರುವ ಎರಡೂ ಅಪಾರ್ಟ್​​ಮೆಂಟ್​ಗಳ ಒಟ್ಟು ವಿಸ್ತೀರ್ಣ 2,000 ಚದರ ಅಡಿಗಳು. ಕಾಜೋಲ್ ವಿಶಾಲ್ ದೇವಗನ್ ಎಂಬ ಹೆಸರಿನಿಂದ ಮನೆಯನ್ನು ಖರೀದಿಸಲಾಗಿದೆ ಎಂದು ದಾಖಲೆಗಳಲ್ಲಿದೆ ಎಂದು ಹೇಳಲಾಗಿದೆ.

ಅಜಯ್ ದೇವಗನ್- ಕಾಜೊಲ್ ಬಳಿಯಿವೆ ಮತ್ತಷ್ಟು ಮನೆಗಳು:

ಹೌಸಿಂಗ್​.ಕಾಮ್ ವರದಿಯ ಪ್ರಕಾರ ಅಜಯ್ ದೇವಗನ್ ಹಾಗೂ ಕಾಜೊಲ್ ಪ್ರಸ್ತುತ ವಾಸವಿರುವ ‘ಶಿವಶಕ್ತಿ’ ಮನೆಯನ್ನು ಬರೋಬ್ಬರಿ ₹ 60 ಕೋಟಿ ನೀಡಿ ಖರೀದಿಸಿದ್ದರು. ಈ ಮನೆಯು 590 ಚದರ ಅಡಿ ಇದ್ದು, ಜುಹುದಲ್ಲಿರುವ ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ಇರುವ ಅಜಯ್ ಅವರ ಮತ್ತೊಂದು ಬಂಗಲೆ, ‘ಶಕ್ತಿ’ಗೆ ಸಮೀಪದಲ್ಲಿದೆ. ಅಜಯ್ ಮತ್ತು ಮನೆಯ ಹಿಂದಿನ ಮಾಲೀಕ ದಿವಂಗತ ಪುಷ್ಪಾ ವಲಿಯಾ ಅವರು ನವೆಂಬರ್ 2020 ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಆಸ್ತಿ ವರ್ಗಾವಣೆಯನ್ನು 2021ರ ಮೇನಲ್ಲಿ ಮಾಡಲಾಗಿತ್ತು.

ಕಾಜೊಲ್ ಕಳೆದ ವರ್ಷ ತಮ್ಮ ಒಡೆತನದಲ್ಲಿ ಹೀರಾನಂದಾನಿ ಗಾರ್ಡನ್​ನಲ್ಲಿದ್ದ ನಿವಾಸವೊಂದನ್ನು ಬಾಡಿಗೆಗೆ ನೀಡಿದ್ದರು. ಸುಮಾರು 771 ಚದರ ಅಡಿಯ ಆ ಮನೆಯಿಂದ ಪ್ರತಿ ತಿಂಗಳು ₹ 90,000ವನ್ನು ನಟಿ ಬಾಡಿಗೆ ಪಡೆಯುತ್ತಿದ್ದಾರೆ. ಈ ನಿವಾಸಕ್ಕೆ 3 ಲಕ್ಷ ರೂ ಬಾಡಿಗೆ ಪಡೆದಿರುವ ನಟಿ, ಮುಂದಿನ ವರ್ಷದಿಂದ 96,750 ರೂ ಬಾಡಿಗೆ ಪಡೆಯಲಿದ್ದಾರೆ.

ಚಿತ್ರಗಳ ವಿಷಯಕ್ಕೆ ಬಂದರೆ ಕಾಜೊಲ್ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ತ್ರಿಭಂಗ’ದಲ್ಲಿ. ನೆಟ್​ಫ್ಲಿಕ್ಸ್​​​ನಲ್ಲಿ ಇದು ತೆರೆಕಂಡಿತ್ತು. ಕಳೆದ ವಾರ ಕಾಜೊಲ್ ಹೊಸ ಚಿತ್ರ ಸೆಟ್ಟೇರಿತ್ತು. ಚಿತ್ರಕ್ಕೆ ‘ಸಲಾಂ ವೆಂಕಿ’ ಎಂದು ಹೆಸರಿಡಲಾಗಿದ್ದು, ಖ್ಯಾತ ನಟಿ, ನಿರ್ದೇಶಕಿ ರೇವತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದನ್ನೂ ಓದಿ:

Amitabh Bachchan: ದೆಹಲಿಯಲ್ಲಿದ್ದ ಅಮಿತಾಭ್ ನಿವಾಸ ಸೇಲ್; ಬಿಗ್​​ಬಿ ಮನೆ ಮಾರಿದ್ದು ಎಷ್ಟು ಕೋಟಿಗೆ?

ಪುನೀತ್​ ರಾಜ್​ಕುಮಾರ್ ಕುರಿತು ಬಯೋಗ್ರಫಿ; ಈ ಪುಸ್ತಕದಲ್ಲಿ ಏನೆಲ್ಲ ಮಾಹಿತಿ ಇರಲಿದೆ?

Published On - 3:38 pm, Thu, 17 February 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ