ಶಾರುಖ್-ಹಿರಾನಿ ಸಿನಿಮಾದಲ್ಲಿ ಹಲವು ಸ್ಟಾರ್​ಗಳು; ‘ಓಂ ಶಾಂತಿ ಓಂ’ ನೆನಪಿಸಿದ ಹೊಸ ಚಿತ್ರ

ಆರ್ಯನ್​ ಖಾನ್​ ಡ್ರಗ್​ ಕೇಸ್​ನಲ್ಲಿ ಜೈಲು ಸೇರಿದ್ದರಿಂದ ಶಾರುಖ್​ ಸುಮಾರು ಎರಡು ತಿಂಗಳಕಾಲ ಸಿನಿಮಾ ಕೆಲಸದಿಂದ ದೂರ ಉಳಿದುಕೊಂಡಿದ್ದರು. ಆ ಬಳಿಕ ಅವರು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ.

ಶಾರುಖ್-ಹಿರಾನಿ ಸಿನಿಮಾದಲ್ಲಿ ಹಲವು ಸ್ಟಾರ್​ಗಳು; ‘ಓಂ ಶಾಂತಿ ಓಂ’ ನೆನಪಿಸಿದ ಹೊಸ ಚಿತ್ರ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 22, 2022 | 3:00 PM

ಶಾರುಖ್​ ಖಾನ್​ (Shah Rukh Khan) ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಓಂ ಶಾಂತಿ ಓಂ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾದಿಂದ ಶಾರುಖ್​ ಖಾನ್​ ಅವರ ಬೇಡಿಕೆ ಮತ್ತಷ್ಟು ಹೆಚ್ಚಿತ್ತು. ಈ ಸಿನಿಮಾದ ವಿಶೇಷ ಹಾಡಿನಲ್ಲಿ ಬಾಲಿವುಡ್​ನ ಸಾಕಷ್ಟು ಸೆಲೆಬ್ರಿಟಿಗಳು ಹೆಜ್ಜೆ ಹಾಕಿದ್ದರು. ಈ ಹಾಡಿಗಾಗಿ ದೊಡ್ಡ ಮೊತ್ತವನ್ನೇ ಖರ್ಚು ಮಾಡಲಾಗಿತ್ತು. ಈಗ ಶಾರುಖ್​ ಮುಂದಿನ ಸಿನಿಮಾದಲ್ಲೂ ಹಲವು ಸ್ಟಾರ್​ಗಳು ಇರಲಿದ್ದಾರೆ. ಅವರೆಲ್ಲರದ್ದೂ ಅತಿಥಿ ಪಾತ್ರ ಅನ್ನೋದು ವಿಶೇಷ. ‘ಪಿಕೆ’, ‘3 ಈಡಿಯಟ್ಸ್​’, ‘ಸಂಜು’ ಅಂತಹ ಹಿಟ್​ ಚಿತ್ರಗಳನ್ನು ನೀಡಿದ ರಾಜ್​ಕುಮಾರ್ ಹಿರಾನಿ (Rajkumar Hirani) ತುಂಬಾನೇ ಕಾಳಜಿವಹಿಸಿ ಸಿನಿಮಾ ಮಾಡುತ್ತಾರೆ. ನಿರ್ದೇಶನಕ್ಕೆ ಇಳಿದು 20 ವರ್ಷವಾಗಿದೆ. ಈವರೆಗೆ ಅವರು ನಿರ್ದೇಶನ ಮಾಡಿದ್ದು 5 ಸಿನಿಮಾ ಮಾತ್ರ. ಇದರಲ್ಲಿ ಯಾವುದೂ ಸೋಲು ಕಂಡಿಲ್ಲ. ಈಗ ಶಾರುಖ್​ ಖಾನ್​ಗೆ ಆ್ಯಕ್ಷನ್​ ಹೇಳೋಕೆ ಅವರು ರೆಡಿ ಆಗಿದ್ದಾರೆ. ಏಪ್ರಿಲ್​ 15ರಂದು ಸಿನಿಮಾ ಸೆಟ್ಟೇರಲಿದೆ.

ಆರ್ಯನ್​ ಖಾನ್​ ಡ್ರಗ್​ ಕೇಸ್​ನಲ್ಲಿ ಜೈಲು ಸೇರಿದ್ದರಿಂದ ಶಾರುಖ್​ ಸುಮಾರು ಎರಡು ತಿಂಗಳಕಾಲ ಸಿನಿಮಾ ಕೆಲಸದಿಂದ ದೂರ ಉಳಿದುಕೊಂಡಿದ್ದರು. ಆ ಬಳಿಕ ಅವರು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಸಿದ್ದಾರ್ಥ್​ ಆನಂದ್​ ನಿರ್ದೇಶನದ ‘ಪಠಾಣ್​’ ಹಾಗೂ ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್​ ಕಟ್​ ಹೇಳುತ್ತಿರುವ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈ ಎರಡೂ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಹೀಗಿರುವಾಗಲೇ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಮುಂಬೈನ ಸ್ಟುಡಿಯೋ ಒಂದರಲ್ಲಿ ಪಂಜಾಬ್​ ಗ್ರಾಮದ ಸೆಟ್​ ಹಾಕಲಾಗುತ್ತಿದೆ. ಮಾರ್ಚ್​​ 31ಕ್ಕೆ ಸೆಟ್​ ಸಂಪೂರ್ಣ ಸಿದ್ಧಗೊಳ್ಳಲಿದೆ. ಏಪ್ರಿಲ್​ 15ರ ನಂತರ ಈ ಸೆಟ್​ನಲ್ಲಿ ಶೂಟಿಂಗ್​ ಆರಂಭಗೊಳ್ಳಲಿದೆ. ಮುಂಬೈ ಹಾಗೂ ಇಂಗ್ಲೆಂಡ್​ನಲ್ಲಿ ಈ ಸಿನಿಮಾದ ಶೂಟಿಂಗ್​ ನಡೆಯಲಿದೆ.

ತಾಪ್ಸೀ ಪನ್ನು ಚಿತ್ರದ ನಾಯಕಿ. ಬೋಮನ್​ ಇರಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬೇರೆಬೇರೆ ಪ್ರದೇಶದಲ್ಲಿ ಕಥೆ ಸಾಗಲಿದ್ದು, ಪ್ರತಿ ಕಡೆಯಲ್ಲಿ ದೊಡ್ಡದೊಡ್ಡ ಸ್ಟಾರ್​ ನಟರ ಆಗಮನ ಆಗಲಿದೆ. ಹಲವು ಸ್ಟಾರ್​ ನಟರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ನಿಜವಾದಲ್ಲಿ ಬಾಲಿವುಡ್​ನ ಅನೇಕ ಸ್ಟಾರ್​ಗಳು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ಉತ್ತಮ ಜೀವನ ಹುಡುಕಿಕೊಂಡು ಹೀರೋ ಕೆನಡಾಗೆ ತೆರಳುತ್ತಾನೆ. ಅದೂ ಅಕ್ರಮವಾಗಿ. ಅಲ್ಲೇನಾಗುತ್ತದೆ ಎಂಬುದು ಚಿತ್ರದ ಕಥೆ. ರಾಜ್​ಕುಮಾರ್ ಹಿರಾನಿ ಕೆಲಸದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಅವರು ಈ ಚಿತ್ರವನ್ನು ಹೇಗೆ ಕಟ್ಟಿಕೊಡಲಿದ್ದಾರೆ ಎನ್ನುವ ಕುತೂಹಲ ಸದ್ಯದ್ದು.

ಇದನ್ನೂ ಓದಿ:ಶಾರುಖ್​ ಖಾನ್​ ಹೊಸ ಲುಕ್​ ವೈರಲ್​; ಇದು ಯಾವ ಸಿನಿಮಾ ಪೋಸ್ಟರ್​? 

ತಾವೇ ನಟಿಸಿದ ಹಲವು ಹಿಟ್​ ಚಿತ್ರಗಳನ್ನು ನೋಡಿಯೇ ಇಲ್ಲ ಶಾರುಖ್​ ಖಾನ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ