ಬದಲಾಯ್ತು ಕಂಗನಾ ಮನಸ್ಸು, ಹುಸಿ ಆಯ್ತು ನಿರೀಕ್ಷೆ; ಆಲಿಯಾ ಸಿನಿಮಾಗೆ ಕಿರಿಕ್​ ಕ್ವೀನ್​ ಮೆಚ್ಚುಗೆ​

ಆಲಿಯಾ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಕಂಗನಾ ರಣಾವತ್​ ಬೆರಗಾಗಿದ್ದಾರೆ. ಹಾಗಾಗಿ ಅವರು ಮನಸಾರೆ ಹೊಗಳಿದ್ದಾರೆ.

ಬದಲಾಯ್ತು ಕಂಗನಾ ಮನಸ್ಸು, ಹುಸಿ ಆಯ್ತು ನಿರೀಕ್ಷೆ; ಆಲಿಯಾ ಸಿನಿಮಾಗೆ ಕಿರಿಕ್​ ಕ್ವೀನ್​ ಮೆಚ್ಚುಗೆ​
ಕಂಗನಾ ರಣಾವತ್, ಆಲಿಯಾ ಭಟ್
Follow us
| Updated By: ಮದನ್​ ಕುಮಾರ್​

Updated on: Feb 27, 2022 | 8:01 AM

ನಟಿ ಕಂಗನಾ ರಣಾವತ್​ (Kangana Ranaut) ಅವರ ಗುಣ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತು. ಅನೇಕ ವಿಚಾರಗಳಲ್ಲಿ ಅವರು ಮೂಗು ತೂರಿಸುತ್ತಾರೆ. ತುಂಬ ಕಟುವಾದ ಮಾತುಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಅದೇ ಕಾರಣಕ್ಕಾಗಿ ಅವರು ಅನೇಕರ ವಿರೋಧ ಕಟ್ಟಿಕೊಂಡಿದ್ದುಂಟು. ಬಾಲಿವುಡ್​ನಲ್ಲಿ ಒಂದು ವರ್ಗದ ಫಿಲ್ಮ್​ ಮೇಕರ್​ಗಳನ್ನು ಅವರು ಖಾರವಾಗಿ ಟೀಕಿಸುತ್ತಾರೆ. ಆಲಿಯಾ ಭಟ್ (Alia Bhatt)​, ಕರಣ್​ ಜೋಹರ್​, ಮಹೇಶ್​ ಭಟ್​ ಮುಂತಾದವರನ್ನು ಕಂಡರೆ ಆಲಿಯಾ ಉರಿದುರಿದು ಬೀಳುತ್ತಾರೆ. ಆಲಿಯಾ ಭಟ್​ ಅಭಿನಯದ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ರಿಲೀಸ್​ ಆಗುವುದಕ್ಕೂ ಮುನ್ನ ಕಂಗನಾ ಅಪಶಕುನ ನುಡಿದಿದ್ದರು. ‘ಈ ಸಿನಿಮಾದಿಂದ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಸುಟ್ಟು ಹೋಗಲಿದೆ’ ಎಂದು ಭವಿಷ್ಯ ನಡಿದಿದ್ದರು. ಆದರೆ ಅವರ ಮಾತು ಸುಳ್ಳಾಗಿದೆ. ಫೆ.25ರಂದು ಬಿಡುಗಡೆ ಆಗಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಜನಮೆಚ್ಚುಗೆ ಗಳಿಸಿದೆ. ಮೊದಲ ದಿನವೇ 10 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಒಳ್ಳೆಯ ಓಪನಿಂಗ್​ ಪಡೆದುಕೊಂಡಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಂಗನಾ ರಣಾವತ್​ ಕೂಡ ಚಪ್ಪಾಳೆ ತಟ್ಟಿದ್ದಾರೆ.

ಆಲಿಯಾ ಭಟ್​ ಅವರು ನೆಪೋಟಿಸಂ ಫಲಾಭವಿ ಎಂದು ಕಂಗನಾ ಯಾವಾಗಲೂ ಟೀಕೆ ಮಾಡುತ್ತಾರೆ. ಆ ಕಾರಣಕ್ಕಾಗಿ ಅವರು ಆಲಿಯಾ ನಟನೆಯ ಸಿನಿಮಾಗಳೆಂದರೆ ಮೂಗು ಮುರಿಯುತ್ತಾರೆ. ಆದರೆ ಈ ಬಾರಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಕಂಗನಾ ಬೆರಗಾಗಿದ್ದಾರೆ. ಹಾಗಾಗಿ ಅವರು ಈ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ದಕ್ಷಿಣ ಭಾರತದ ಸಿನಿಮಾಗಳ ದಾಖಲೆಯ ಕಲೆಕ್ಷನ್​ನಿಂದಾಗಿ ಚಿತ್ರಮಂದಿರಗಳಲ್ಲಿ ಮತ್ತೆ ಕಳೆ ಬಂದಿದೆ ಎಂಬುದನ್ನು ಕೇಳಿ ಖುಷಿ ಆಯಿತು. ಸೂಪರ್​ ಸ್ಟಾರ್​ ಡೈರೆಕ್ಟರ್​, ಸ್ಟಾರ್​ ಹೀರೋ ಇರುವ ಒಂದು ಮಹಿಳಾ ಪ್ರಧಾನ ಸಿನಿಮಾದಿಂದ ಹಿಂದಿ ಚಿತ್ರರಂಗ ಕೂಡ ಪುಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಪುಟ್ಟ ಹೆಜ್ಜೆಗಳೇ ಆಗಿರಬಹುದು, ಆದರೆ ಅವು ಮಹತ್ವವಾದವು. ಕಷ್ಟದ ಪರಿಸ್ಥಿತಿಯಲ್ಲಿ ಇರುವ ಚಿತ್ರಮಂದಿರಗಳಿಗೆ ಈ ಬೆಳವಣಿಗೆ ತುಂಬ ಮುಖ್ಯ. ಗ್ರೇಟ್​! ಇಂಥ ಸಂದರ್ಭದಲ್ಲಿ ಮೂವೀ ಮಾಫಿಯಾದವರು ಒಳ್ಳೆಯ ಕೆಲಸ ಮಾಡ್ತಾರೆ ಅಂಥ ನಾನು ನಿರೀಕ್ಷಿಸಿರಲಿಲ್ಲ. ಅವರು ಒಳ್ಳೆಯದು ಮಾಡಿದಾಗ ನಾನು ಖಂಡಿತಾ ಹೊಗಳುತ್ತೇನೆ. ಇನ್ನೂ ಒಳ್ಳೆಯದನ್ನು ನಿರೀಕ್ಷಿಸುತ್ತೇನೆ’ ಎಂದು ಕಂಗನಾ ರಣಾವತ್​ ಅವರು ಬರೆದುಕೊಂಡಿದ್ದಾರೆ.

ಕಂಗನಾ ಅವರಿಗೆ ಕರಣ್​ ಜೋಹರ್​ ಅವರನ್ನು ಕಂಡರೆ ಕೂಡ ಆಗುವುದಿಲ್ಲ. ಆದರೆ ಈ ಹಿಂದೆ ಕರಣ್​ ಜೋಹರ್​ ನಿರ್ಮಾಣ ಮಾಡಿದ್ದ ‘ಶೇರ್​ಷಾ’ ಚಿತ್ರವನ್ನು ಕೂಡ ಕಂಗನಾ ಹೊಗಳಿದ್ದರು. ಈಗ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಕ್ಕೆ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಅವರು ಮಾತ್ರವಲ್ಲದೇ ಬಾಲಿವುಡ್​ನ ಅನೇಕರು ಈ ಸಿನಿಮಾವನ್ನು ಹೊಗಳಿದ್ದಾರೆ.

ಬಾಲಿವುಡ್​ ಸೆಲೆಬ್ರಿಟಿಗಳಾದ ರಿತೇಶ್​ ದೇಶಮುಖ್​, ವಿಕ್ಕಿ ಕೌಶಲ್​, ಶಶಾಂತ್​ ಕೈತಾನ್​, ರಿದ್ಧಿಮಾ ಕಪೂರ್​ ಮುಂತಾದವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ವೀಕ್ಷಿಸಿದ್ದಾರೆ. ಎಲ್ಲರಿಗೂ ಈ ಚಿತ್ರ ಇಷ್ಟ ಆಗಿದೆ. ‘ಈ ಸಿನಿಮಾವನ್ನು ಕಟ್ಟಿಕೊಡುವಲ್ಲಿ ತೋರಿದ ಬುದ್ಧಿವಂತಿಕೆ ಕಂಡು ನಾನು ಬೆರಗಾದೆ. ಸಂಜಯ್​ ಲೀನಾ ಬನ್ಸಾಲಿ ಸರ್​.. ನೀವು ಮಾಸ್ಟರ್​! ಆಲಿಯಾ ಭಟ್​ ಬಗ್ಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಗಂಗೂಬಾಯಿ ಪಾತ್ರದಲ್ಲಿ ಆಲಿಯಾ ನಟನೆ ಅಮೇಜಿಂಗ್​. ನಿಮಗೆ ಹ್ಯಾಟ್ಸ್​ಆಫ್​. ದೊಡ್ಡ ಪರದೆಯ ಮ್ಯಾಜಿಕ್​ ಇದು. ಈ ಸಿನಿಮಾವನ್ನು ಯಾರೂ ಮಿಸ್​ ಮಾಡಿಕೊಳ್ಳಬೇಡಿ’ ಎಂದು ವಿಕ್ಕಿ ಕೌಶಲ್​ ಅವರು ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ನೋಡಿ ಆಲಿಯಾ​ ಅಭಿಮಾನಿಗಳು ಏನಂದ್ರು? ಇಲ್ಲಿದೆ ಜನರ ವಿಮರ್ಶೆ

ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ

ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ದರ್ಶನ್ ಮಿತ್ರನಾದರೂ ಜಾಮೀನು ಸಿಕ್ಕಿರುವುದಕ್ಕೆ ಪ್ರತಿಕ್ರಿಯಿಸಲೊಲ್ಲದ ಜಮೀರ್
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ಚಾಮರಾಜನಗರ: ಸಾಲ ತೀರಿಸದ ರೈತರ ವಿರುದ್ಧ ದೂರು ದಾಖಲಿಸಲು ಮುಂದಾದ ಸರ್ಕಾರ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ
ನನ್ನ ಕೆಲಸಗಳ ಆಧಾರದಲ್ಲಿ ಚನ್ನಪಟ್ಟಣ ಜನರ ಮತ ಯಾಚಿಸುವೆ: ಕುಮಾರಸ್ವಾಮಿ
ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
ದರ್ಶನ್​ಗೆ ಜಾಮೀನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ: ಶಿವಕುಮಾರ್
ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ
ದುಬಾರಿ ದೀಪಾವಳಿ: ಹೂವು, ಹಣ್ಣು ತರಕಾರಿ ಬೆಲೆ ಏರಿಕೆ
ಶಸ್ತ್ರಚಿಕಿತ್ಸೆಗೊಳಗಾಗಲಿರುವ ದರ್ಶನ್​ಗೆ ಆಸ್ಪತ್ರೆಯೂ ಬಂಧಿಖಾನೆ ಎನಿಸಲಿದೆ
ಶಸ್ತ್ರಚಿಕಿತ್ಸೆಗೊಳಗಾಗಲಿರುವ ದರ್ಶನ್​ಗೆ ಆಸ್ಪತ್ರೆಯೂ ಬಂಧಿಖಾನೆ ಎನಿಸಲಿದೆ
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಯಾವ ರೈತನಿಗೂ ಸಮಸ್ಯೆಯಾಗಲ್ಲ, ಬಿಜೆಪಿ ರೈತರನ್ನು ಎತ್ತಿಕಟ್ಟುತ್ತಿದೆ: ಜಮೀರ್
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಜಮೀರ್ ಕೋಮುದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ದರ್ಶನ್ ಜಾಮೀನು ಅರ್ಜಿ ತೀರ್ಪು; ಲೈವ್ ನೋಡಿ
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು
ಗಣ್ಯರ ಅಗಮನದಿಂದ ಮತ್ತಷ್ಟು ಹೆಚ್ಚಲಿದೆ ನೂಕುನುಗ್ಗಲು, ಪೊಲೀಸರಿಗೆ ಸವಾಲು