AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ

ಹಲವು ವರ್ಷಗಳ ಹಿಂದೆಯೇ ಆಲಿಯಾ ಭಟ್​ ಅವರು ರಣಬೀರ್​ ಕಪೂರ್​ಗೆ ಮನಸೋತಿದ್ದರು. ಆಗಿನ್ನೂ ಅವರು ಚಿಕ್ಕ ಬಾಲಕಿ ಆಗಿದ್ದರು.

ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ
TV9 Web
| Updated By: ಮದನ್​ ಕುಮಾರ್​|

Updated on:Feb 24, 2022 | 10:21 AM

Share

ನಟಿ ಆಲಿಯಾ ಭಟ್​ (Alia Bhatt) ಅವರಿಗೆ ಯಾರ ಹಂಗು ಕೂಡ ಇಲ್ಲ. ಬಾಲಿವುಡ್​ನಲ್ಲಿ ಅವರು ಸ್ವಂತ ಐಡೆಂಟಿಟಿ ಪಡೆದುಕೊಂಡಿದ್ದಾರೆ. ಹಲವು ಸಿನಿಮಾಗಳ ಮೂಲಕ ತಮ್ಮ ಪ್ರತಿಭೆ ಏನು ಎಂಬುದನ್ನು ಅವರು ಸಾಬೀತು ಮಾಡಿಕೊಂಡಿದ್ದಾರೆ. ಈಗ ಅವರ ಮದುವೆ ವಿಚಾರ ಬಹಳ ಚರ್ಚೆ ಆಗುತ್ತಿದೆ. ಯಾವುದೋ ಸ್ಟಾರ್​ ನಟನನ್ನೋ ಅಥವಾ ಯಶಸ್ವಿ ಉದ್ಯಮಿಯನ್ನೋ ಮದುವೆಯಾಗಿ ಜೀವನ ಭದ್ರಪಡಿಸಿಕೊಳ್ಳಬೇಕು ಎಂಬ ಅನಿವಾರ್ಯತೆ ಆಲಿಯಾ ಭಟ್​ ಅವರಿಗೆ ಇಲ್ಲ. ಅದ್ಯಾಕೋ ಗೊತ್ತಿಲ್ಲ, ಅವರು ನಟ ರಣಬೀರ್​ ಕಪೂರ್​ಗೆ ಮನಸೋತಿದ್ದಾರೆ. ರಣಬೀರ್​ ಕಪೂರ್​ (Ranbir Kapoor) ಇತಿಹಾಸ ಏನು ಎಂಬುದು ಎಲ್ಲರಿಗೂ ತಿಳಿದಿದೆ. ದೀಪಿಕಾ ಪಡುಕೋಣೆ ಜೊತೆಗೆ ಅವರು ಡೇಟಿಂಗ್​ ಮಾಡುತ್ತಿದ್ದರು. ನಂತರ ಅದು ಬ್ರೇಕಪ್​ನಲ್ಲಿ ಅಂತ್ಯವಾಯ್ತು. ಕತ್ರಿನಾ ಕೈಫ್​ (Katrina Kaif) ಜೊತೆಯೂ ರಣಬೀರ್​ ಕಪೂರ್ ಪ್ರೀತಿ ಗಾಢವಾಗಿತ್ತು. ಆ ಸಂಬಂಧ ಕೂಡ ಮದುವೆವರೆಗೆ ಮುಂದುವರಿಯಲಿಲ್ಲ. ಹೀಗೆ ಅನೇಕ ಬ್ರೇಕಪ್​ ಮಾಡಿಕೊಂಡಿರುವ ರಣಬೀರ್​ ಕಪೂರ್​ ಜೊತೆ ಆಲಿಯಾ ಭಟ್​ ಅವರಿಗೆ ಪ್ರೀತಿ ಚಿಗುರಿದ್ದು ಯಾಕೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಆ ಬಗ್ಗೆ ಆಲಿಯಾ ಈಗ ಬಾಯಿ ಬಿಟ್ಟಿದ್ದಾರೆ.

ಆಲಿಯಾ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಫೆ.25ರಂದು ಎಲ್ಲ ಕಡೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಪ್ರಚಾರದ ಸಲುವಾಗಿ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಸಹಜವಾಗಿಯೇ ರಣಬೀರ್​ ಕಪೂರ್​ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಅದಕ್ಕೆ ಆಲಿಯಾ ಭಟ್​ ಉತ್ತರ ನೀಡಿದ್ದಾರೆ. ‘ಇಂಡಿಯಾ ಟುಡೇ’ ಜೊತೆ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಚ್ಚರಿ ಏನೆಂದರೆ, ರಣಬೀರ್​ ಕಪೂರ್​ ಮೇಲೆ ಆಲಿಯಾ ಭಟ್​ ಅವರಿಗೆ ಪ್ರೀತಿ ಮೂಡಿದ್ದು ಇಂದು-ನಿನ್ನೆ ಅಲ್ಲ!

ಹಲವು ವರ್ಷಗಳ ಹಿಂದೆಯೇ ಆಲಿಯಾ ಭಟ್​ ಅವರು ರಣಬೀರ್​ ಕಪೂರ್​ಗೆ ಮನಸೋತಿದ್ದರು. ಆಗಿನ್ನೂ ಅವರು ಚಿಕ್ಕ ಬಾಲಕಿ ಆಗಿದ್ದರು. ‘ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ನಾನು ಮಾನಸಿಕವಾಗಿ ಅವರ ಜೊತೆ ಈಗಾಗಲೇ ಮದುವೆ ಆಗಿದ್ದೇನೆ. ಅದನ್ನೂ ಬಿಡಿ, ನಾನು ಮೊಟ್ಟ ಮೊದಲ ಬಾರಿಗೆ ಅವರನ್ನು ತೆರೆಮೇಲೆ ನೋಡಿದಾಗಲೇ ಮದುವೆ ಆದರೆ ಇವರನ್ನೇ ಆಗೋದು ಅಂತ ನಿರ್ಧಾರ ಮಾಡಿದ್ದೆ. ಆಗಿನ್ನೂ ನಾನು ಚಿಕ್ಕ ಹುಡುಗಿ ಆಗಿದ್ದೆ. ಆದರೂ ಆಗ ನಾನು ಆ ನಿರ್ಧಾರ ತೆಗೆದುಕೊಂಡಿದ್ದೆ. ಅದು ಒಂದು ರೀತಿಯ ಮನಸ್ಥಿತಿ’ ಎಂದು ಆಲಿಯಾ ಹೇಳಿದ್ದಾರೆ.

ಮದುವೆಗೆ ಇನ್ನೂ ಸಮಯ ಬೇಕಿದೆ:

‘ನನ್ನ ಬದುಕಿನಲ್ಲಿ ನಾನು ಕಂಡು ಅತಿ ಆಕರ್ಷಕ ವ್ಯಕ್ತಿಗಳಲ್ಲಿ ರಣಬೀರ್​ ಕಪೂರ್​ ಕೂಡ ಒಬ್ಬರು. ಅವರ ಮೇಲೆ ನನಗೆ ತುಂಬ ಪ್ರೀತಿ-ಗೌರವ ಇದೆ. ಅವರು ನನಗೆ ಸಖತ್​ ಬೆಂಬಲ ನೀಡುತ್ತಾರೆ. ನನ್ನ ಬಗ್ಗೆ ಮಾತನಾಡಲು ಕೂಡ ಅವರಲ್ಲಿ ಸಾಕಷ್ಟು ವಿಷಯ ಇದೆ ಅಂದುಕೊಂಡಿದ್ದೇನೆ. ಆದರೆ ಅದೆಲ್ಲವೂ ಆಗಬೇಕು ಎಂದರೆ ಸೂಕ್ತ ಸಮಯ ಬರಬೇಕು’ ಎಂದು ಆಲಿಯಾ ಭಟ್​ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೇ ಶೀಘ್ರದಲ್ಲೇ ಮದುವೆ ಆಗಲ್ಲ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

ಕಂಗನಾ ಮಾಡಿದ ಟೀಕೆಗೆ ಒಂದೇ ಮಾತಲ್ಲಿ ತಿರುಗೇಟು ನೀಡಿದ ಆಲಿಯಾ; ಶುಕ್ರವಾರವೇ ಭವಿಷ್ಯ ನಿರ್ಧಾರ

‘ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ಸುಟ್ಟು ಬೂದಿಯಾಗಲಿದೆ’; ಆಲಿಯಾ ಭಟ್​ ಸಿನಿಮಾ ಬಗ್ಗೆ ಕಂಗನಾ ಟೀಕೆ

Published On - 9:56 am, Thu, 24 February 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ