Virat Kohli: ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡ ವಿರಾಟ್, ಅನುಷ್ಕಾ; ಅಭಿಮಾನಿಗಳ ಪ್ರತಿಕ್ರಿಯೆ ಹೇಗಿತ್ತು?
Anushka Sharma: ಕ್ರಿಕೆಟ್ನಿಂದ ಕೆಲವು ದಿನಗಳ ಕಾಲ ಬಿಡುವು ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಪ್ರಸ್ತುತ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ. ಇಂದು ಪತ್ನಿ ಅನುಷ್ಕಾ ಶರ್ಮಾ ಜತೆ ಅವರು ಜಾಹಿರಾತು ಚಿತ್ರೀಕರಣವೊಂದರಲ್ಲಿ ಭಾಗಿಯಾಗಿದ್ದಾರೆ.
ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಸದ್ಯ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಒಂದು ವರ್ಷದ ಪುಟಾಣಿ ವಮಿಕಾಳನ್ನು (Vamika) ನೋಡಿಕೊಳ್ಳುತ್ತಾ, ಮತ್ತೆ ಚಿತ್ರರಂಗಕ್ಕೆ ಇತ್ತೀಚೆಗಷ್ಟೇ ಮರಳಿದ್ದಾರೆ ಅನುಷ್ಕಾ. ಚಿತ್ರರಂಗಕ್ಕೆ ಮರಳಿ ಕೆಲವೇ ದಿನಗಳಾಗಿದ್ದರೂ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ಕಳೆದ ಕೆಲ ಸಮಯದಿಂದ ನಿರ್ಮಾಣದಲ್ಲೂ ನಟಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ತಮ್ಮ ಪತಿ ವಿರಾಟ್ ಕೊಹ್ಲಿ (Virat Kohli) ಜತೆ ವಿದೇಶಗಳಲ್ಲಿ ಕ್ರಿಕೆಟ್ ಸರಣಿಯ ಸಮಯದಲ್ಲೂ ಅನುಷ್ಕಾ ಕೆಲವೊಮ್ಮೆ ಪ್ರವಾಸ ಕೈಗೊಳ್ಳುತ್ತಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಕ್ರಿಕೆಟ್ನಿಂದ ಕೆಲವು ದಿನಗಳ ಕಾಲ ರಜೆ ತೆಗೆದುಕೊಂಡಿರುವ ವಿರಾಟ್ ಕೊಹ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇಂದು (ಫೆ.23) ಈ ತಾರಾ ಜೋಡಿ ಚಿತ್ರೀಕರಣದ ಸೆಟ್ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದ ಚಿತ್ರಗಳು ಸಖತ್ ವೈರಲ್ ಆಗಿವೆ.
ಮುಂಬೈನ ಮೆಹ್ಬೂಬ್ ಸ್ಟುಡಿಯೋದಲ್ಲಿ ವಿರಾಟ್ ಹಾಗೂ ಅನುಷ್ಕಾ ಜಾಹಿರಾತೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ವಿಶೇಷವೆಂದರೆ ವಿರಾಟ್ ಟರ್ಬನ್ ಧರಿಸಿ ಕಾಣಿಸಿಕೊಂಡಿದ್ದರೆ, ಅನುಷ್ಕಾ ಸಿಂಪಲ್ ಗೆಟಪ್ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ಧಾರೆ. ಈ ಮೂಲಕ ಜಾಹಿರಾತಿನಲ್ಲಿ ವಿರಾಟ್ ಸಿಖ್ ಪಾತ್ರವೊಂದನ್ನು ನಿರ್ವಹಿಸುತ್ತಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ.
ವಿರಾಟ್- ಅನುಷ್ಕಾ ಗೆಟಪ್ಗೆ ಅಭಿಮಾನಿಗಳ ಮಜವಾದ ಪ್ರತಿಕ್ರಿಯೆ:
ವಿರಾಟ್ ಹಾಗೂ ಅನುಷ್ಕಾ ಹೊಸ ಗೆಟಪ್ ನೋಡಿದ ಅಭಿಮಾನಿಗಳು ಮಜವಾಗಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಅನುಷ್ಕಾ- ಶಾರುಖ್ ನಟಿಸಿದ್ದ ‘ರಬ್ನೆ ಬನಾದಿ ಜೋಡಿ’ಯನ್ನು ನೆನಪಿಸಿಕೊಂಡಿರುವ ಫ್ಯಾನ್ಸ್, ಅದರ ಎರಡನೇ ಭಾಗವಿದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಅಭಿಮಾನಿ ಇಲ್ಲೂ ವಿರಾಟ್ ಶತಕದ ಬರವನ್ನು ಪ್ರಸ್ತಾಪಿಸಿ, ‘ಸಹೋದರಾ, ಕೊನೆಯ ಪಕ್ಷ ಒಂದು ಶತಕ ಹೊಡೆಯಿರಿ’ ಎಂದು ಕಾಮೆಂಟ್ ಮಾಡಿದ್ದಾಬೆ. ‘ಕ್ರಿಕೆಟ್ ಬಿಟ್ಟು ಇದನ್ನೇ ಮಾಡಿ’ ಎಂದು ಮತ್ತೋರ್ವ ಅಭಿಮಾನಿ ಕಾಲೆಳೆದಿದ್ದಾನೆ.
ಚಿತ್ರೀಕರಣದ ನಂತರ ವಿರಾಟ್ ಹಾಗೂ ಅನುಷ್ಕಾ ಪೋಸ್ ನೀಡಿದ್ದು ಹೀಗೆ:
View this post on Instagram
ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಸರಣಿಯ ಕಡೆಯ ಟಿ20 ಪಂದ್ಯದಿಂದ ಬ್ರೇಕ್ ತೆಗೆದುಕೊಂಡಿದ್ದರು. ಅಲ್ಲದೇ ಮುಂಬರುವ ಶ್ರೀಲಂಕಾ ಎದುರಿನ ಟಿ20 ಸರಣಿಯಿಂದಲೂ ಅವರಿಗೆ ರಜೆ ನೀಡಲಾಗಿದೆ. ವಿರಾಟ್ ಕುಟುಂಬದೊಂದಿಗೆ ಕಳೆಯುವ ನಿಟ್ಟಿನಲ್ಲಿ ರಜೆ ಪಡೆದಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು.
ಚಿತ್ರಗಳ ವಿಷಯಕ್ಕೆ ಬಂದರೆ ಅನುಷ್ಕಾ ಶರ್ಮಾ ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ‘ಚಕ್ದಾ ಎಕ್ಸ್ಪ್ರೆಸ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ತಯಾರಿ ನಡೆಸುತ್ತಿರುವ ಅನುಷ್ಕಾರ ಚಿತ್ರಗಳು ಇತ್ತೀಚೆಗೆ ವೈರಲ್ ಆಗಿದ್ದವು. ಸುಸಾಂತ ದಾಸ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ನೆಟ್ಫ್ಲಿಕ್ಸ್ನಲ್ಲಿ ಈ ಚಿತ್ರ ತೆರೆ ಕಾಣಲಿದೆ. ಕಳೆದ ತಿಂಗಳು ‘ಚಕ್ದಾ ಎಕ್ಸಪ್ರೆಸ್’ನ ಟೀಸರ್ ಬಿಡುಗಡೆ ಮಾಡಲಾಗಿತ್ತು. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.
ಇದನ್ನೂ ಓದಿ:
NBK107: ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ ‘ಮಫ್ತಿ’? ಕುತೂಹಲ ಮೂಡಿಸಿದ ‘ಎನ್ಬಿಕೆ107’ ಪೋಸ್ಟರ್
‘ಇಂಥ ಸಿನಿಮಾ ಮಾಡೋದಕ್ಕೆ ಹೆಮ್ಮೆ ಇದೆ’ ಹೊಸ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ಮೇಘನಾ ರಾಜ್
Published On - 5:52 pm, Wed, 23 February 22