NBK107: ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ ‘ಮಫ್ತಿ’? ಕುತೂಹಲ ಮೂಡಿಸಿದ ‘ಎನ್​ಬಿಕೆ107’ ಪೋಸ್ಟರ್

Nandamuri Balakrishna | Shiva Rajkumar: ನಂದಮೂರಿ ಬಾಲಕೃಷ್ಣ ‘ಅಖಂಡ’ದ ಯಶಸ್ಸಿನಲ್ಲಿದ್ದಾರೆ. ಇದೀಗ ಅವರು ಹೊಸ ಚಿತ್ರ ‘ಎನ್​ಬಿಕೆ 107’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ತೀವ್ರ ಕುತೂಹಲ ಹುಟ್ಟುಹಾಕಿದೆ. ಕಾರಣವೇನು?

NBK107: ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ ‘ಮಫ್ತಿ’? ಕುತೂಹಲ ಮೂಡಿಸಿದ ‘ಎನ್​ಬಿಕೆ107’ ಪೋಸ್ಟರ್
‘ಎನ್​ಬಿಕೆ107’ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ (ಎಡ), ‘ಮಫ್ತಿ’ಯಲ್ಲಿ ಶಿವಣ್ಣ
Follow us
TV9 Web
| Updated By: shivaprasad.hs

Updated on:Feb 23, 2022 | 5:13 PM

ಟಾಲಿವುಡ್​ ಖ್ಯಾತ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ‘ಅಖಂಡ’ದ ಯಶಸ್ಸಿನಲ್ಲಿದ್ದಾರೆ. ಚಿತ್ರಮಂದಿರದಲ್ಲಿ ಧೂಳೆಬ್ಬಿಸಿದ್ದ ಈ ಚಿತ್ರ ಇದೀಗ ಒಟಿಟಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದರ ಎರಡನೇ ಭಾಗದ ಕುರಿತು ಸುದ್ದಿಗಳು ಕೇಳಿಬರುತ್ತಿರುವಂತೆಯೇ, ಅವರು ಹೊಸ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಾಲಕೃಷ್ಣ ನಟನೆಯ 107ನೇ ಚಿತ್ರದ ಶೂಟಿಂಗ್ ಆರಂಭವಾಗಿತ್ತು. ಇನ್ನೂ ಯಾವುದೇ ಶೀರ್ಷಿಕೆ ಅಂತಿಮಗೊಳ್ಳದ ಈ ಚಿತ್ರವನ್ನು ‘ಎನ್​ಬಿಕೆ107’ (NBK 107) ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ. ಚಿತ್ರದ ಮೊದಲ ದಿನದ ಶೂಟಿಂಗ್​ ಸಂದರ್ಭದಲ್ಲಿ ಸೆಟ್​ನಿಂದ ಬಾಲಕೃಷ್ಣ ಅವರ ಲುಕ್​ ಒಂದು ಲೀಕ್ ಆಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೆನ್ಸೇಶನ್ ಮೂಡಿಸಿದ್ದಲ್ಲದೇ, ಚರ್ಚೆಯನ್ನೂ ಹುಟ್ಟುಹಾಕಿತ್ತು. ಇದೀಗ ಚಿತ್ರತಂಡ, ಅಧಿಕೃತ ಪೋಸ್ಟರ್​ ಒಂದನ್ನು ರಿಲೀಸ್ ಮಾಡಿದೆ. ಅದರಲ್ಲಿ ಸಖತ್ ಮಾಸ್ ಆಗಿ ನಂದಮೂರಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಆದರೆ ಈ ಪೋಸ್ಟರ್​ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ನಂದಮೂರಿ ಬಾಲಕೃಷ್ಣ ಲುಕ್​ಗೂ ‘ಮಫ್ತಿ’ ಲುಕ್​ಗೂ ಹೋಲಿಕೆ ಮಾಡುತ್ತಿರುವ ನೆಟ್ಟಿಗರು:

‘ಎನ್​ಬಿಕೆ 107’ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಮೈತ್ರಿ ಮೂವಿ ಮೇಕರ್ಸ್. ಇದೀಗ ನಂದಮೂರಿ ಬಾಲಕೃಷ್ಣ ಅವರ ಮೊದಲ ಲುಕ್​ಅನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅದರಲ್ಲಿ ಬಾಲಕೃಷ್ಣ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವ ಗೋಪಿಚಂದ್ ಟ್ವೀಟ್ ಮಾಡಿ, ಹೊಸ ಅವತಾರದಲ್ಲಿ ಬಾಲಕೃಷ್ಣ ಅವರನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ದೊಡ್ಡ ಮಟ್ಟದಲ್ಲಿ ಇದು ಮೂಡಿಬರಲಿದೆ ಎಂದಿದ್ದಾರೆ.

‘ಎನ್​ಬಿಕೆ 107’ ಮೊದಲ ಪೋಸ್ಟರ್ ವೈರಲ್ ಆಗಿರುವಂತೆಯೇ ನೆಟ್ಟಿಗರಲ್ಲಿ ಹೊಸ ಪ್ರಶ್ನೆಯೊಂದು ಮೂಡಿದೆ. ಇದಕ್ಕೆ ಕಾರಣ ಸಾಮ್ಯತೆ! ಹೌದು. ಕನ್ನಡದ ಸೂಪರ್ ಹಿಟ್ ಚಿತ್ರವಾದ ‘ಮಫ್ತಿ’ಯಲ್ಲಿ ಶಿವರಾಜ್​ಕುಮಾರ್ ತೀರಾ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ನರ್ತನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಶ್ರೀಮುರುಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಣ್ಣುಗಳ ಮೂಲಕವೇ ಖಡಕ್ ಆಗಿ ಅಭಿನಯಿಸಿದ್ದ ಶಿವಣ್ಣ, ಹೊಸ ಟ್ರೆಂಡ್ ಸೃಷ್ಟಿಸಿದ್ದರು.

ಭೈರತಿ ರಣಗಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣ ಅವರ ಲುಕ್​ನಂತೆಯೇ ನಂದಮೂರಿ ಬಾಲೃಷ್ಣ ಅವರ ಹೊಸ ಚಿತ್ರದ ಪಾತ್ರ ಮೂಡಿಬಂದಿದೆ. ಇದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿದೆ. ಈಗಾಗಲೇ ತಮಿಳಿನಲ್ಲಿ ರಿಮೇಕ್ ಆಗುತ್ತಿರುವ ‘ಮಫ್ತಿ’ ಚಿತ್ರ, ತೆಲುಗಿನಲ್ಲಿಯೂ ರಿಮೇಕ್ ಆಗುತ್ತಿದೆಯೇ ಎಂಬ ಅಚ್ಚರಿಯನ್ನು ನೆಟ್ಟಿಗರು ಹೊರಹಾಕಿದ್ದಾರೆ.

ಶಿವರಾಜ್​ಕುಮಾರ್ ಹಾಗೂ ಬಾಲಕೃಷ್ಣ ಅವರ ಗೆಟಪ್​ಗಳು ಬಹುತೇಕ ಒಂದೇ ರೀತಿ ಇದೆ. ಇದೇ ಕಾರಣದಿಂದ ನೆಟ್ಟಿಗರು ಇದು ‘ಮಫ್ತಿ’ಯ ರಿಮೇಕ್ ಹೌದೇ? ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಒಂದು ವೇಳೆ ಹೌದು ಎಂದಾಗಿದ್ದರೆ ಇದು ಮತ್ತೊಂದು ಅಮೋಘ ಚಿತ್ರವಾಗಲಿದೆ ಎಂದೂ ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ. ‘ಮಫ್ತಿ’ಯ ರಿಮೇಕ್ ಹೌದಾಗಿದ್ದರೆ, ಶ್ರೀಮುರುಳಿ ಪಾತ್ರ ಯಾರದ್ದು ಎಂಬ ಚರ್ಚೆಯೂ ಜೋರಾಗಿದೆ. ಕೆಲವರು ಇದು ಸ್ವಮೇಕ್ ಚಿತ್ರ. ಗೆಟಪ್ ಮಾತ್ರ ಒಂದೇ ರೀತಿ ಇರಬಹುದು ಎಂದೂ ಅನಿಸಿಕೆ ಹಂಚಿಕೊಂಡಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ‘ಎನ್​ಬಿಕೆ107’ ಮಫ್ತಿಯ ರಿಮೇಕ್ ಹೌದೇ ಅಥವಾ ಅಲ್ಲವೇ ಎಂಬುದು ಖಚಿತವಾಗಿಲ್ಲ. ಆದರೆ ಬಾಲಕೃಷ್ಣರ ಗೆಟಪ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿರೋದು ಸುಳ್ಳಲ್ಲ.

‘ಎನ್​ಬಿಕೆ 107’ ಚಿತ್ರದ ಪೋಸ್ಟರ್ ಇಲ್ಲಿದೆ:

ಈಗಾಗಲೇ ‘ಎನ್​ಬಿಕೆ107’ ತಾರಾಗಣದ ಕಾರಣದಿಂದ ಸುದ್ದಿ ಮಾಡಿದೆ. ಸ್ಯಾಂಡಲ್​ವುಡ್​​ನ ತಾರೆ ದುನಿಯಾ ವಿಜಯ್ ಇದೇ ಚಿತ್ರದ ಮೂಲಕ ಟಾಲಿವುಡ್​ ಪದಾರ್ಪಣೆ ಮಾಡುತ್ತಿದ್ದಾರೆ. ಶೃತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ವರಲಕ್ಷ್ಮಿ ಶರತ್​ಕುಮಾರ್ ಕೂಡ ನಟಿಸುತ್ತಿದ್ದಾರೆ. ಈ ಕಾರಣ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಮೂಡಿದೆ. ಇದೀಗ ಚಿತ್ರದಲ್ಲಿ ‘ಮಫ್ತಿ’ ಗೆಟಪ್​ನಲ್ಲಿ ನಂದಮೂರಿ ಬಾಲಕೃಷ್ಣ ಕಾಣಿಸಿಕೊಂಡಿದ್ದು ಚಿತ್ರ ಮತ್ತಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ:

Puneeth Rajkumar: ಥೇಟ್​​ ಪುನೀತ್​ರಂತೆಯೇ ಇದ್ದಾರೆ ಈ ನಾಯಕ ನಟ; ಅವರ ಹೊಸ ಸಿನಿಮಾ ಯಾವುದು?

‘ಇಂಥ ಸಿನಿಮಾ ಮಾಡೋದಕ್ಕೆ ಹೆಮ್ಮೆ ಇದೆ’ ಹೊಸ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ಮೇಘನಾ ರಾಜ್​

Published On - 5:10 pm, Wed, 23 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ