AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಕ್ವೆಲಿನ್, ನೋರಾ ನಂತರ ಸಾರಾ, ಜಾಹ್ನವಿ ಕಪೂರ್ ಅವರನ್ನೂ ಟಾರ್ಗೆಟ್ ಮಾಡಿದ್ದ ವಂಚಕ ಸುಕೇಶ್; ಹೇಗೆಲ್ಲಾ ಆಮಿಷ ನೀಡಿದ್ದ ಗೊತ್ತಾ?

Sara Ali Khan | Janhvi Kapoor: ಬಹುಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಫರ್ನಾಂಡಿಸ್, ನೋರಾ ಫತೇಹಿ ಜತೆಗೆ ಮತ್ತೂ ಮೂವರು ನಟಿಯರನ್ನು ಟಾರ್ಗೆಟ್ ಮಾಡಿದ್ದ ಎಂಬ ವಿಚಾರ ಬಹಿರಂಗವಾಗಿದೆ.

ಜಾಕ್ವೆಲಿನ್, ನೋರಾ ನಂತರ ಸಾರಾ, ಜಾಹ್ನವಿ ಕಪೂರ್ ಅವರನ್ನೂ ಟಾರ್ಗೆಟ್ ಮಾಡಿದ್ದ ವಂಚಕ ಸುಕೇಶ್; ಹೇಗೆಲ್ಲಾ ಆಮಿಷ ನೀಡಿದ್ದ ಗೊತ್ತಾ?
ಜಾಹ್ನವಿ ಕಪೂರ್, ಸಾರಾ ಅಲಿ ಖಾನ್
TV9 Web
| Updated By: shivaprasad.hs|

Updated on:Feb 23, 2022 | 2:15 PM

Share

ದಿನಕಳೆದಂತೆ ವಂಚಕ ಸುಕೇಶ್ ಚಂದ್ರಶೇಖರ್ (Conman Sukesh Chandrashekhar) ಕುರಿತು ಹೊಸ ಹೊಸ ಮಾಹಿತಿಗಳು ಲಭ್ಯವಾಗುತ್ತಿವೆ. ಈ ಹಿಂದೆ ಬಾಲಿವುಡ್​ನ ಖ್ಯಾತ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿಯನ್ನು ಸುಕೇಶ್ ಚಂದ್ರಶೇಖರ್ ಟಾರ್ಗೆಟ್ ಮಾಡಿದ್ದಾಗಿ ಬಹಿರಂಗವಾಗಿತ್ತು. ಇದೀಗ ಇಂಡಿಯಾ ಟುಡೆ ವರದಿ ಮಾಡಿರುವಂತೆ ಸುಕೇಶ್ ಮತ್ತೂ ಮೂವರು ಖ್ಯಾತ ನಟಿಯರನ್ನು ಟಾರ್ಗೆಟ್ ಮಾಡಿದ್ದ. ಇಡಿ ತನಿಖೆಯನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದ್ದು, ಜಾಹ್ನವಿ ಕಪೂರ್ (Janhvi Kapoor), ಭೂಮಿ ಪಡ್ನೇಕರ್ ಹಾಗೂ ಸಾರಾ ಅಲಿ ಖಾನ್ (Sara Ali Khan) ಅವರನ್ನೂ ಸುಕೇಶ್ ಟಾರ್ಗೆಟ್ ಮಾಡಿದ್ದು ಬಹಿರಂಗವಾಗಿದೆ. ಈ ಖ್ಯಾತ ನಟಿಯರಿಗೆ ಉಡುಗೊರೆ ಕಳುಹಿಸಲು ಸುಕೇಶ್ ವಂಚನೆ ಮಾಡಿದ್ದ ಹಣವನ್ನು ಬಳಸಿಕೊಳ್ಳುತ್ತಿದ್ದ ಎಂಬುದೂ ಬಹಿರಂಗವಾಗಿದೆ.

32ರ ಹರೆಯದ ಸುಕೇಶ್ ಚಂದ್ರಶೇಖರ್ ರಾನ್‌ಬಾಕ್ಸಿ ಸಂಸ್ಥೆಯ ಮಾಲೀಕನ ಪತ್ನಿ ಅದಿತಿ ಸಿಂಗ್ ಅವರಿಂದ 215 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಈಗ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅದಿತಿ ಸಿಂಗ್ ಅವರ ಪತಿಯನ್ನು ಜೈಲಿನಿಂದ ಹೊರಬರಲು ಸಹಾಯ ಮಾಡುವ ನೆಪದಲ್ಲಿ, ಅಧಿಕಾರಿಯಾಗಿ, ಕೆಲವೊಮ್ಮೆ ಕಾನೂನು ಕಾರ್ಯದರ್ಶಿಯಾಗಿ, ಗೃಹ ಕಾರ್ಯದರ್ಶಿಯಾಗಿ, ಗೃಹ ಸಚಿವ ಅಮಿತ್ ಶಾ ಅವರ ಪ್ರತಿನಿಧಿಯಾಗಿ ಮತ್ತು ಪ್ರಧಾನ ಮಂತ್ರಿ ಕಚೇರಿಯ ಪ್ರತಿನಿಧಿಯಾಗಿ ಹೇಳಿಕೊಳ್ಳುತ್ತಿದ್ದ ಸುಕೇಶ್, ಅದಿತಿಯವರಿಂದ ಬರೋಬ್ಬರಿ 215 ಕೋಟಿ ರೂ ಸುಲಿಗೆ ಮಾಡಿದ್ದ. ಈ ಆರೋಪದಲ್ಲಿ ಆತ ಪ್ರಸ್ತುತ ಜೈಲಿನಲ್ಲಿದ್ದಾನೆ.

ಸಾರಾ ಅಲಿ ಖಾನ್​:

ವಂಚಕ ಸುಕೇಶ್ ನಟಿ ಸಾರಾ ಅಲಿ ಖಾನ್​ ಅವರನ್ನು ಟಾರ್ಗೆಟ್ ಮಾಡಲು ನಾನಾ ವಿಧವಾಗಿ ಪ್ರಯತ್ನಿಸಿದ್ದ ಎಂಬುದು ಬೆಳಕಿಗೆ ಬಂದಿದೆ. 2021ರ ಮೇ 21ರಂದು ಸಾರಾಗೆ ಸೂರಜ್ ರೆಡ್ಡಿ ಎಂದು ಪರಿಚಯಿಸಿಕೊಳ್ಳುತ್ತಾ ಸುಕೇಶ್ ಮೆಸೇಜ್ ಮಾಡಿದ್ದ. ನಂತರದಲ್ಲಿ ಸ್ನೇಹದ ಸಂಕೇತವಾಗಿ ಕಾರ್ ಕೊಡುತ್ತೇನೆ ಎಂದು ಹೇಳಿದ್ದ. ಆದರೆ ಇದಕ್ಕೆ ಸಾರಾ ಒಪ್ಪಿರಲಿಲ್ಲ. ತಮ್ಮ ಸಿಇಒ ಎಂದು ಪಿಂಕಿ ಇರಾನಿಯನ್ನು ಪರಿಚಯಿಸಿದ್ದ. ಪಿಂಕಿ ಸುಕೇಶ್​​ ಅವರನ್ನು ಭೇಟಿಯಾಗುವಂತೆ ನಟಿಯರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದರು. ಏನಾದರೂ ಗಿಫ್ಟ್ ಕೊಡಬೇಕು ಎಂಬ ಸೂರಜ್ (ಸುಕೇಶ್) ಒತ್ತಾಯ ತಡೆಯಲಾರದೆ ಸಾರಾ ಕೇವಲ ಒಂದು ಚಾಕಲೇಟ್ ಬಾಕ್ಸ್ ಕೇಳಿದ್ದರು.

ಉಡುಗೊರೆ ರೂಪದಲ್ಲಿ ಚಾಕಲೇಟ್ ಕಳಿಸಿದ್ದ ಸುಕೇಶ್, ಅದರಲ್ಲಿ ಫ್ರಾಂಕ್ ಮುಲ್ಲರ್ ಕಂಪನಿಯ ವಾಚ್ ಒಂದನ್ನೂ ಕೊಟ್ಟಿದ್ದ. ಭಾರತದಲ್ಲಿ ಅದರ ಬೆಲೆ ಲಕ್ಷಾಂತರ ರೂಗಳು! ಉಡುಗೊರೆ ಪ್ರಕರಣದಲ್ಲಿ ಜನವರಿ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಸಾರಾ ಅವರನ್ನು ಪ್ರಶ್ನಿಸಿತ್ತು. ಆಗ ಸಾರಾ ಮೇಲಿನ ಮಾಹಿತಿಗಳನ್ನು ನೀಡಿದ್ದರು.

ಜಾಹ್ನವಿ ಕಪೂರ್:

ನಟಿ ಜಾಹ್ನವಿ ಕಪೂರ್ ಅವರನ್ನು ಸುಕೇಶ್ ಅವರ ಪತ್ನಿ ಲೀನಾ ಮರಿಯಾ ಪಾಲ್ ಮೂಲಕ ಟಾರ್ಗೆಟ್ ಮಾಡಲಾಗಿತ್ತು. 18 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ಜಾಹ್ನವಿಗೆ ನೀಡಲಾಗಿದೆ. ಅದಿತಿ ಸಿಂಗ್ ಅವರಿಂದ ಸುಕೇಶ್ ಸುಲಿಗೆ ಮಾಡಿದ ಹಣವೂ ಇದೇ ಆಗಿತ್ತು. ಲೀನಾ ಮರಿಯಾ ಪಾಲ್ ಅವರು ನೇಲ್ ಆರ್ಟಿಸ್ಟ್ರಿ ಎಂಬ ಸಲೂನ್‌ನ ಮಾಲಕಿ ಎಂದು ಹೇಳಿಕೊಂಡು ಜಾಹ್ನವಿಯನ್ನು ಸಂಪರ್ಕಿಸಿದರು ಮತ್ತು ಜುಲೈ 19, 2021 ರಂದು ಬೆಂಗಳೂರಿನಲ್ಲಿ ತಮ್ಮ ಸಲೂನ್ ತೆರೆಯಲು ಆಹ್ವಾನಿಸಿದ್ದರು. ಸುಕೇಶ್ ಮತ್ತು ಲೀನಾ ಅವರ ಹಿನ್ನೆಲೆಯನ್ನು ತಿಳಿಯದ ಜಾಹ್ನವಿ ಬೆಂಗಳೂರಿನಲ್ಲಿ ಸಲೂನ್ ಉದ್ಘಾಟಿಸಿ ಅದಕ್ಕೆ ವೃತ್ತಿಪರ ಶುಲ್ಕವಾಗಿ 18.94 ಲಕ್ಷ ರೂಗಳನ್ನು ಪಡೆದಿದ್ದರು. ಇದರ ಹೊರತಾಗಿ ಜಾಹ್ನವಿಗೆ ಉಡುಗೊರೆಯನ್ನೂ ನೀಡಲಾಗಿತ್ತು. ಪ್ರಕರಣದ ಕುರಿತು ಇಡಿ ಮುಂದೆ ಜಾಹ್ನವಿ ವಿವರಗಳನ್ನು ನೀಡಿದ್ದಾರೆ.

ಭೂಮಿ ಪಡ್ನೇಕರ್:

ಬಾಲಿವುಡ್​ನ ಮತ್ತೋರ್ವ ನಟಿಯನ್ನು ತನ್ನ ಸಹಾಯಕಿ ಪಿಂಕಿ ಇರಾನಿ ಮೂಲಕ ಸುಕೇಶ್ ಸಂಪರ್ಕಿಸಿದ್ದ. ಭೂಮಿ ಬಳಿ ಸುಕೇಶ್ ಶೇಖರ್ ಎಂದು ಪರಿಚಯಿಸಿಕೊಂಡಿದ್ದ. ನಟಿಗೂ ಕಾರನ್ನು ಉಡುಗೊರೆ ಕೊಡುವುದಾಗಿ ತಿಳಿಸಿದ್ದ. ಆದರೆ ಇಡಿಗೆ ಮಾಹಿತಿ ನೀಡಿರುವ ಭೂಮಿ, ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

‘ಜಾಕ್ವೆಲಿನ್​ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್​ ಚಂದ್ರಶೇಖರ್​ ಹೊಸ ಪುರಾಣ

ಜಾಕ್ವೆಲಿನ್​​ಗಾಗಿ ಬರೋಬ್ಬರಿ ₹ 500 ಕೋಟಿ ಬಜೆಟ್​ನ ಸೂಪರ್​ಹೀರೋ​ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದ್ದ ವಂಚಕ ಸುಕೇಶ್

Published On - 1:49 pm, Wed, 23 February 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ