Conman Sukesh: ತೆರೆಯ ಮೇಲೆ ಜಾಕ್ವೆಲಿನ್- ಸುಕೇಶ್ ಕಹಾನಿ?; ನೋರಾ- ಸುಕೇಶ್ ವೈಯಕ್ತಿಕ ಚಾಟ್ಸ್​​​​​ ಕೂಡ ಲೀಕ್

Jacqueline Fernandez | Nora Fatehi: ಬಹುಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಕತೆ ತೆರೆಯ ಮೇಲೆ ಬರಲಿದೆಯೇ? ಹೌದು ಎನ್ನುತ್ತವೆ ವರದಿಗಳು. ಈ ಕುರಿತ ಮಾಹಿತಿ ಇಲ್ಲಿದೆ.

Conman Sukesh: ತೆರೆಯ ಮೇಲೆ ಜಾಕ್ವೆಲಿನ್- ಸುಕೇಶ್ ಕಹಾನಿ?; ನೋರಾ- ಸುಕೇಶ್ ವೈಯಕ್ತಿಕ ಚಾಟ್ಸ್​​​​​ ಕೂಡ ಲೀಕ್
ಜಾಕ್ವೆಲಿನ್​​ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​
Follow us
TV9 Web
| Updated By: shivaprasad.hs

Updated on: Dec 22, 2021 | 1:00 PM

ಬಹುಕೋಟಿ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrasekhar) ಕುರಿತ ದಿನಕ್ಕೊಂದು ಕತೆಗಳು ಹೊರಬರುತ್ತಿದೆ. ಇತ್ತೀಚೆಗಷ್ಟೇ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ಬರೋಬ್ಬರಿ 500 ಕೋಟಿ ರೂ ಮೊತ್ತದ ಸೂಪರ್ ಹೀರೋ ಚಿತ್ರ ಸರಣಿ ನಿರ್ಮಾಣ ಮಾಡುವುದಾಗಿ ನಂಬಿಸಿದ್ದ ಎನ್ನುವುದು ಬಹಿರಂಗವಾಗಿತ್ತು. ಅಷ್ಟೇ ಅಲ್ಲದೇ ಜೈಲಿನಲ್ಲಿದ್ದುಕೊಂಡೇ ಜಾಕ್ವೆಲಿನ್​ಗೆ ₹ 10 ಕೋಟಿಗೂ ಅಧಿಕ ಮೊತ್ತದ ಗಿಫ್ಟ್ ಕಳುಹಿಸಿದ್ದ ಎನ್ನುವುದೂ ಸುದ್ದಿಯಾಗಿತ್ತು. ಈ ಪಟ್ಟಿಯಲ್ಲಿ ಬೆಕ್ಕು, ಕುದುರೆ, ಕಾರು ಎಲ್ಲವೂ ಸೇರಿತ್ತು. ಸುಕೇಶ್ ಹಾಗೂ ಜಾಕ್ವೆಲಿನ್ ಅವರ ಸಂಬಂಧ ಹಾಗೂ ವಂಚನೆ ಪ್ರಕರಣದ ಕುರಿತು ಇಡಿ (ED) ಜಾಕ್ವೆಲಿನ್ ಅವರನ್ನು ಹಲವಾರು ಬಾರಿ ಪ್ರಶ್ನಿಸಿದೆ. ಬಹುಕೋಟಿ ವಂಚಕ ಸುಕೇಶ್​ನಿಂದ ಕೇವಲ ಜಾಕ್ವೆಲಿನ್ ಮಾತ್ರವಲ್ಲ, ಇನ್ನೂ ಹಲವು ನಟಿಯರು ವಂಚನೆಗೆ ಒಳಗಾಗಿದ್ದಾರೆ ಎನ್ನುತ್ತವೆ ವರದಿಗಳು. ಇದೀಗ ಸುಕೇಶ್ ಆಡಂಬರದ ಜೀವನ, ವಂಚನೆ.. ಈ ಎಲ್ಲವನ್ನೂ ಸೇರಿಸಿ ಕತೆಯೊಂದು ತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ ಎನ್ನುತ್ತಿವೆ ವರದಿಗಳು. 

ಪ್ರಸ್ತುತ ಉದ್ಯಮಿಯೊಬ್ಬರ ಪತ್ನಿಗೆ ₹ 200 ಕೋಟಿ ವಂಚನೆಗೆ ಸಂಬಂಧ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದಾನೆ. ಸುಕೇಶ್ ಜಾಕ್ವೆಲಿನ್ ಸಹೋದರಿ, ಜಾಕ್ವೆಲಿನ್ ತಾಯಿಗೂ ಉಡುಗೊರೆ ನೀಡಿದ್ದಾಗಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ. ಇದೀಗ ಇಂಡಿಯಾ ಟುಡೆ ವರದಿ ಮಾಡಿರುವಂತೆ ಜಾಕ್ವೆಲಿನ್ ಹಾಗೂ ಸುಕೇಶ್ ಕತೆಯನ್ನು ತೆರೆಯ ಮೇಲೆ ತರಲು ನಿರ್ಮಾಪಕರು ಮುಂದಾಗಿದ್ದಾರಂತೆ. ಅದೂ ಕೂಡ ಒಟಿಟಿಗೆ. ಈ ಹಿಂದೆ ಹರ್ಷದ್ ಮೆಹ್ತಾ ಅವರ ಜೀವನವನ್ನಾಧರಿಸಿದ ‘ಸ್ಕ್ಯಾಮ್ 1992’ ಸಖತ್ ಹಿಟ್ ಆಗಿತ್ತು. ಇದೇ ಆಧಾರದಲ್ಲಿ ವಂಚಕ ಸುಕೇಶ್ ಜೀವನವನ್ನೂ ತೆರೆಯ ಮೇಲೆ ತರಲು ಒಟಿಟಿ ನಿರ್ಮಾಪಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಇದೀಗ ಸುಕೇಶ್ ಹಾಗೂ ಜಾಕ್ವೆಲಿನ್ ಪಾತ್ರಗಳಲ್ಲಿ ಯಾರು ನಟಿಸಬಹುದು ಎಂಬುದರ ಕುರಿತು ಚರ್ಚೆಗಳು ಗರಿಗೆದರಿವೆ. ಇತ್ತೀಚಿನ ದಿನಗಳಲ್ಲಿ ನೋಡಿದ ಅತ್ಯಂತ ದೊಡ್ಡ ವಂಚನೆ ಪ್ರಕರಣ ಇದಾಗಿದ್ದು, ಸಹಜವಾಗಿಯೇ ಜನರಿಗೆ ಈ ಪ್ರಕರಣದ ಕುರಿತು ಕುತೂಹಲವಿದೆ. ಒಂದು ವೇಳೆ ಇದನ್ನು ತೆರೆಯ ಮೇಲೆ ತಂದರೆ ಒಳ್ಳೆಯ ಕಮಾಯಿ ಮಾಡಬಹುದು ಎಂಬ ಲೆಕ್ಕಾಚಾರ ಕೆಲವು ನಿರ್ಮಾಪಕರದ್ದು. ಈ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಸುಕೇಶ್- ನೋರಾ ಚಾಟ್ಸ್ ಲೀಕ್: ಬಾಲಿವುಡ್​ನ ಖ್ಯಾತ ಡಾನ್ಸರ್ ನೋರಾ ಫತೇಹಿ (Nora Fatehi) ಅವರಿಗೂ ಸುಕೇಶ್ ಗಿಫ್ಟ್​​ಗಳನ್ನು ನೀಡಿದ್ದರು ಎಂದು ವರದಿಯಾಗಿವೆ. ಇತ್ತೀಚೆಗೆ ನೋರಾ ಹಾಗೂ ಸುಕೇಶ್ ಚಾಟ್​ಗಳು ಲೀಕ್ ಆಗಿದ್ದು ಅದರಲ್ಲಿ ನೋರಾಗೆ ರೇಂಜ್ ರೋವರ್ ಕಾರು ಇಷ್ಟವೇ, ಎಂದು ಕೇಳಿದ್ದ. ಆಗ ನೋರಾ ಹೌದು, ಅದು ಚೆನ್ನಾಗಿದೆ ಎಂದಾಗ, ಅದರಲ್ಲಿ ಹೆಚ್ಚಿನ ಆಯ್ಕೆ ತೋರಿಸುತ್ತೇನೆ ಎಂದು ಸುಕೇಶ್ ಹೇಳಿದ್ದು ಬಹಿರಂಗವಾಗಿದೆ. ಮತ್ತೊಂದು ಮಾತುಕತೆಯಲ್ಲಿ ಸುಕೇಶ್, ಯಾಕೆ ಗಿಫ್ಟ್​ ನೀಡುತ್ತಿರುವುದು ಎಂಬುದರ ಕುರಿತು ಮಾತನಾಡಿದ್ದಾನೆ. ಯಾವುದಾದರೂ ವ್ಯಕ್ತಿ ಇಷ್ಟವಾದರೆ ಅವರಿಗೆ ಗಿಫ್ಟ್ ನೀಡುತ್ತೇವೆ. ಅದರ ಹೊರತಾಗಿ ಮತ್ಯಾವ ಕಾರಣಗಳೂ ಇಲ್ಲ ಎಂದು ನೋರಾಗೆ ತಿಳಿಸಿದ್ದಾನೆ. ಈ ಸಂಭಾಷಣೆಗಳು ಸದ್ಯ ಬಹಿರಂಗವಾಗಿದ್ದನ್ನು ಇಂಡಿಯಾ ಟುಡೆ ವರದಿ ಮಾಡಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ಈಗಾಗಲೇ ಜಾಕ್ವೆಲಿನ್ ಹಾಗೂ ನೋರಾ ಅವರನ್ನು ಪ್ರಶ್ನಿಸಿದೆ. ಪ್ರಸ್ತುತ ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಲ್ಲಿದ್ದಾನೆ.

ಇದನ್ನೂ ಓದಿ:

ಜಾಕ್ವೆಲಿನ್​​ಗಾಗಿ ಬರೋಬ್ಬರಿ ₹ 500 ಕೋಟಿ ಬಜೆಟ್​ನ ಸೂಪರ್​ಹೀರೋ​ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದ್ದ ವಂಚಕ ಸುಕೇಶ್

ಜಾಕ್ವೆಲಿನ್​ಗೆ ನೀಡಿದ ಉಡುಗೊರೆ ಲಿಸ್ಟ್​ ತೆಗೆದಿಟ್ಟ ಸುಕೇಶ್​ ಚಂದ್ರಶೇಖರ್; ಅಬ್ಬಬ್ಬಾ ಇಷ್ಟೊಂದಾ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ