Anushka Sharma: ‘ಒಂದುವೇಳೆ ಅನುಷ್ಕಾ ನನ್ನ ಬಯೋಪಿಕ್​ನಲ್ಲಿ ನಟಿಸಿದರೆ..’; ವಿರಾಟ್ ಕೊಹ್ಲಿ ಹಂಚಿಕೊಂಡಿದ್ರು ಅಚ್ಚರಿಯ ವಿಚಾರ!

shivaprasad.hs

shivaprasad.hs |

Updated on: Feb 10, 2022 | 11:14 AM

Virat Kohli: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳ ನೆಚ್ಚಿನ ತಾರಾ ಜೋಡಿಗಳಲ್ಲಿ ಒಂದು. ಈರ್ವರೂ ವೃತ್ತಿ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದವರು. ಒಂದು ವೇಳೆ ವಿರಾಟ್ ಬಯೋಪಿಕ್ ತಯಾರಾದರೆ... ಈ ಕುರಿತು ಈ ಹಿಂದೆ ವಿರಾಟ್ ಮಾತನಾಡಿದ್ದು ಮತ್ತೊಮ್ಮೆ ವೈರಲ್ ಆಗಿದೆ.

Anushka Sharma: ‘ಒಂದುವೇಳೆ ಅನುಷ್ಕಾ ನನ್ನ ಬಯೋಪಿಕ್​ನಲ್ಲಿ ನಟಿಸಿದರೆ..’; ವಿರಾಟ್ ಕೊಹ್ಲಿ ಹಂಚಿಕೊಂಡಿದ್ರು ಅಚ್ಚರಿಯ ವಿಚಾರ!
ವಿರಾಟ್- ಅನುಷ್ಕಾ ವಿವಾಹ ಸಮಾರಂಭದ ಫೋಟೋ
Image Credit source: Virat Kohli/ Instagram

ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ (Anushka Sharma) ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲೊಂದು. ಈರ್ವರೂ ಜತೆಯಾಗಿ ಸುತ್ತಾಡುತ್ತಿರುವ ಸಮಯದಿಂದಲೂ ಅಭಿಮಾನಿಗಳು ಈರ್ವರನ್ನೂ ಗಮನಿಸುತ್ತಿದ್ದಾರೆ. ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ಈರ್ವರೂ ನಡೆದುಕೊಳ್ಳುವುದು ಅಭಿಮಾನಿಗಳಿಗೆ ಅಚ್ಚುಮೆಚ್ಚು. 2017ರಲ್ಲಿ ಈರ್ವರೂ ವಿವಾಹವಾಗಿದ್ದರು. ಅನುಷ್ಕಾಗೆ ವೃತ್ತಿ ಜೀವನದಲ್ಲಿ ಕಷ್ಟವಾದಾಗ ವಿರಾಟ್ ಬೆನ್ನಿಗೆ ನಿಂತಿದ್ದಾರೆ. ವಿರಾಟ್ ಕ್ರಿಕೆಟ್​ನಲ್ಲಿ ಹಿನ್ನಡೆ ಅನುಭವಿಸಿದಾಗ ಅನುಷ್ಕಾ ಧೈರ್ಯ ತುಂಬಿದ್ದಾರೆ. ಇದೀಗ ಈರ್ವರ ಬಾಳಿಗೆ ಪುಟಾಣಿ ವಮಿಕಾ ಎಂಟ್ರಿ ಕೊಟ್ಟಿದ್ದಾಳೆ. ಪ್ರಸ್ತುತ ವ್ಯಾಲಂಟೈನ್ಸ್ ವೀಕ್ (Valentine’s Week) ನಡೆಯುತ್ತಿದೆ. ಅಂದರೆ ಫೆಬ್ರವರಿ 7ರಿಂದ ಫೆಬ್ರವರಿ 14ರವರೆಗೆ ಒಂದೊಂದು ವಿಶೇಷ ದಿನವನ್ನು ಆಚರಿಸಲಾಗುತ್ತದೆ. 14ನೇ ತಾರೀಖು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಖ್ಯಾತ ತಾರೆಯರು ತಮ್ಮ ಸಂಗಾತಿಯ ಕುರಿತು ಹೇಳಿದ ವಿಶೇಷ ಮಾತುಗಳನ್ನು ಸ್ಮರಿಸಲಾಗುತ್ತದೆ. ವಿರಾಟ್- ಹಾಗೂ ಅನುಷ್ಕಾ ಕುರಿತ ಒಂದು ಕುತೂಹಲಕರ ವಿಚಾರ ಇಲ್ಲಿದೆ.

ಬಾಲಿವುಡ್​​ನಲ್ಲಿ ಬಯೋಪಿಕ್ ಕುರಿತ ಚಿತ್ರಗಳು ಸದ್ಯದ ಟ್ರೆಂಡ್. ಈಗಾಗಲೇ ಎಂಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್ ಮೊದಲಾದವರ ಕುರಿತು ಬಯೋಪಿಕ್​ಗಳು ಬಂದಿವೆ. ಸಂದರ್ಶನವೊಂದರಲ್ಲಿ ಕೊಹ್ಲಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಉತ್ತರಿಸುತ್ತಾ ಕೊಹ್ಲಿ ಅನುಷ್ಕಾ ಕುರಿತು ಮಾತನಾಡಿದ್ದಾರೆ. ಈ ವಿಚಾರ ವೈರಲ್ ಆಗಿತ್ತು. ಏನದು? ಮುಂದೆ ಓದಿ.

ವಿರಾಟ್- ಅನುಷ್ಕಾ ಒಟ್ಟಾಗಿ ಬಯೋಪಿಕ್​ನಲ್ಲಿ ನಟಿಸುತ್ತಾರಾ?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ವೃತ್ತಿ ಜೀವನವನ್ನು ಗಮನಿಸಿದರೆ ಈರ್ವರ ಸಾಧನೆಯೇನೂ ಕಡಿಮೆಯಲ್ಲ. ಅದರಲ್ಲೂ ಕೊಹ್ಲಿಯಂತೂ ದಾಖಲೆಗಳ ಒಡೆಯ. ಈಗಾಗಲೇ ಅಂತಾರಾಷ್ಟ್ರೀಯ ದಿಗ್ಗಜರ ಸಾಲಿನಲ್ಲಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ವೃತ್ತಿ ಬದುಕೇನೂ ಸುಲಭದ್ದಾಗಿರಲಿಲ್ಲ. ಹೀಗಾಗಿ ಅವರ ಕತಾ ವಸ್ತು ಬಯೋಪಿಕ್​ಗೆ ಹೇಳಿಮಾಡಿಸಿದ ವಸ್ತು ಎನ್ನುವುದು ಹಲವರ ಭಾವನೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಖ್ಯಾತ ಫುಟ್​ಬಾಲ್ ತಾರೆ ಸುನೀಲ್ ಛೆಟ್ರಿ ಸಂದರ್ಶನವೊಂದರಲ್ಲಿ ವಿರಾಟ್​ಗೆ ಪ್ರಶ್ನೆ ಕೇಳಿದ್ದರು.

‘ನಟಿಯಾಗಿರುವ ಅನುಷ್ಕಾ ಒಂದು ವೇಳೆ ವಿರಾಟ್ ಬಯೋಪಿಕ್​ನಲ್ಲಿ ಕೊಹ್ಲಿ ಪತ್ನಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲು ಒಪ್ಪಿದರೆ.. ವಿರಾಟ್, ನಿಮ್ಮ ಪಾತ್ರವನ್ನು ನೀವೇ ನಿರ್ವಹಿಸುತ್ತೀರಾ?’ ಎಂದು ಸುನೀಲ್ ಛೆಟ್ರಿ ಕುತೂಹಲಕರ ಪ್ರಶ್ನೆ ಕೇಳಿದ್ದರು. ಇದಕ್ಕೆ ತಕ್ಷಣ ಉತ್ತರಿಸಿದ್ದ ಕೊಹ್ಲಿ, ‘ಒಂದು ವೇಳೆ ಅನುಷ್ಕಾ ನಟಿಸುವುದಾದರೆ ಬಯೋಪಿಕ್​ನಲ್ಲಿ ನಾನೇ ನಟಿಸುತ್ತೇನೆ’ ಎಂದು ಪ್ರತ್ಯುತ್ತರಿಸಿದ್ದರು. ಈ ಸಂದರ್ಶನ ಮತ್ತೆ ವೈರಲ್ ಆಗಿದ್ದು, ವಿರುಷ್ಕಾ ಅಭಿಮಾನಿಗಳು ಪ್ರೇಮಿಗಳ ದಿನದ ಸಂದರ್ಭದಲ್ಲಿ ಈ ಕುರಿತು ಚರ್ಚಿಸುತ್ತಿದ್ದಾರೆ.

ಸಂದರ್ಶನದಲ್ಲಿ ವಿರಾಟ್ ಅನುಷ್ಕಾ ಬಂದ ನಂತರ ಬದುಕು ಹೇಗೆ ಬದಲಾಗಿದೆ ಎನ್ನುವುದನ್ನು ವಿವರಿಸಿದ್ದರು. ಅಲ್ಲದೇ ಅನುಷ್ಕಾ ಸಿಕ್ಕಿದ್ದಕ್ಕೆ ದೇವರಿಗೆ ಧನ್ಯವಾದಗಳನ್ನೂ ಕೊಹ್ಲಿ ತಿಳಿಸಿದ್ದರು. ಪ್ರಸ್ತುತ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಬ್ಯುಸಿಯಾಗಿದ್ದರೆ, ಅನುಷ್ಕಾ ಶರ್ಮಾ ಚಿತ್ರರಂಗಕ್ಕೆ ಕಮ್​ಬ್ಯಾಕ್ ಮಾಡಿದ್ದು, ನಿರ್ಮಾಣ, ನಟನೆಯಲ್ಲಿ ತೊಡಗಿಸಿಕೊಂಡಿದ್ಧಾರೆ.

ಇದನ್ನೂ ಓದಿ:

Deepika Padukone: ಬೋಲ್ಡ್ ಪಾತ್ರಗಳನ್ನು ಒಪ್ಪಿಕೊಳ್ಳಲು ಇವರೇ ಕಾರಣ; ಮುಕ್ತವಾಗಿ ಹೇಳಿಕೊಂಡ ದೀಪಿಕಾ ಪಡುಕೋಣೆ

ಕ್ರಿಕೆಟರ್​ ಶ್ರೀಶಾಂತ್​ ಈಗ ಮೊಹಮ್ಮದ್​ ಮೊಬಿ; ಹೊಸ ಜರ್ನಿಗೆ ಶುಭಕೋರಿದ ಸೆಲೆಬ್ರಿಟಿಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada