AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್​ ಬಾಸ್​ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ

‘ನನ್ನ ಬಗ್ಗೆಯೂ ಹಲವರು ತುಂಬ ಮಾತುಗಳನ್ನು ಆಡಿದ್ದರು. ಆದರೆ ನಾನು ಅದನ್ನೆಲ್ಲ ದೊಡ್ಡದು ಮಾಡಲಿಲ್ಲ’ ಎಂದು ಬಿಗ್​ ಬಾಸ್​ 15ನೇ ಸೀಸನ್​ ವಿನ್ನರ್​ ತೇಜಸ್ವಿ ಪ್ರಕಾಶ್​ ಹೇಳಿದ್ದಾರೆ.

‘ಆಂಟಿ’ ಎಂಬುದನ್ನು ಬೈಗುಳವಾಗಿ ಉಪಯೋಗಿಸಿದೆ; ಬಿಗ್​ ಬಾಸ್​ನಿಂದ ಹೊರಬಂದು ಸತ್ಯ ಬಾಯ್ಬಿಟ್ಟ ನಟಿ
ತೇಜಸ್ವಿ ಪ್ರಕಾಶ್, ಶಮಿತಾ ಶೆಟ್ಟಿ
TV9 Web
| Edited By: |

Updated on: Feb 10, 2022 | 12:00 PM

Share

ರಿಯಾಲಿಟಿ ಶೋಗಳ ಪೈಕಿ ಅತಿ ಹೆಚ್ಚು ವಿವಾದಕ್ಕೆ ಕಾರಣ ಆಗುವಂತಹ ಕಾರ್ಯಕ್ರಮದ ಎಂದರೆ ಅದು ಬಿಗ್​ ಬಾಸ್​. ಪ್ರತಿ ಸೀಸನ್​ನಲ್ಲಿ ಬಿಗ್​ ಬಾಸ್​ ಮನೆಯೊಳಗೆ ಹತ್ತಾರು ಕಿರಿಕ್​ಗಳು ಆಗುತ್ತಲೇ ಇರುತ್ತವೆ. ಹಿಂದಿ ಬಿಗ್​ ಬಾಸ್​ 15ನೇ ಸೀಸನ್​ ಇತ್ತೀಚೆಗೆ ಮುಕ್ತಾಯ ಆಯಿತು. ಕಿರುತೆರೆ ನಟಿ ತೇಜಸ್ವಿ ಪ್ರಕಾಶ್​ ಅವರು ವಿನ್ನರ್​ (Bigg Boss 15 Winner) ಆಗಿ ಹೊರ ಹೊಮ್ಮಿದರು. ದೊಡ್ಮನೆಯೊಳಗೆ ಇದ್ದಷ್ಟು ದಿನವೂ ಅವರು ಹಲವು ವಿವಾದಗಳನ್ನು ಮಾಡಿಕೊಂಡಿದ್ದರು. ಅದರಲ್ಲೂ ನಟಿ ಶಮಿತಾ ಶೆಟ್ಟಿ ಜೊತೆ ತೇಜಸ್ವಿ ಪ್ರಕಾಶ್​ (Tejasswi Prakash) ಆಗಾಗ ಜಗಳ ಮಾಡುತ್ತಿದ್ದರು. ಒಂದು ಟಾಸ್ಕ್​ ಮಾಡುವಾಗ ತೇಜಸ್ವಿ ಸಖತ್​ ಕೋಪಗೊಂಡಿದ್ದರು. ಆಗ ಶಮಿತಾ ಶೆಟ್ಟಿಗೆ ಅವರು ಆಂಟಿ ಎಂದು ಕರೆದಿದ್ದರು. ಆಂಟಿ ಎಂಬ ಪದ ಬಳಸಿದ್ದಕ್ಕೆ ತೇಜಸ್ವಿ ಅವರ ವಿರುದ್ಧ ನೆಟ್ಟಿಗರು ಕೂಡ ಗರಂ ಆಗಿದ್ದರು. ಈಗ ಆ ವಿವಾದಗಳೆಲ್ಲ ತಣ್ಣಗಾಗಿವೆ. ವಿನ್ನರ್​ ಪಟ್ಟ ಪಡೆದಿರುವ ತೇಜಸ್ವಿ ಪ್ರಕಾಶ್​ ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಶಮಿತಾ ಶೆಟ್ಟಿ (Shamita Shetty) ಬಗ್ಗೆ ಮಾತನಾಡಿದ್ದಾರೆ. ‘ನ್ಯೂಸ್​ 18’ ಇಂಗ್ಲಿಷ್​ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ತೆರೆದಿಟ್ಟಿದ್ದಾರೆ.

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಶಮಿತಾ ಶೆಟ್ಟಿ ಅವರಿಗೆ ಈಗ 42ರ ಪ್ರಾಯ. ತೇಜಸ್ವಿ ಪ್ರಕಾಶ್​ ಅವರಿಗೆ ಈಗ 28 ವರ್ಷ ವಯಸ್ಸು. ಶಮಿತಾಗೆ ತಾವು ಆಂಟಿ ಅಂತ ಕರೆದಿದ್ದು ಯಾಕೆ ಎಂಬುದನ್ನು ತೇಜಸ್ವಿ ಪ್ರಕಾಶ್​ ವಿವರಿಸಿದ್ದಾರೆ. ‘ಆ ಕ್ಷಣದಲ್ಲಿ ಆಂಟಿ ಎಂಬ ಪದವನ್ನು ನಾನು ಬೈಗುಳದ ರೀತಿ ಉಪಯೋಗಿಸಿದೆ. ಶಮಿತಾ ಅವರನ್ನು ನೀವು ನೋಡಿದ್ದೀರಾ? ಅವರು ತುಂಬ ಹಾಟ್​ ಆಗಿ ಕಾಣಿಸುವ ಹುಡುಗಿ. ಅಂಥವರಿಗೆ ಯಾರಾದರೂ ಆಂಟಿ ಅಂತ ಕರೆಯೋಕೆ ಸಾಧ್ಯವಾ? ನಾನು ಆ ರೀತಿ ಕರೆದಿದ್ದು ಅವರಿಗೆ ಇಷ್ಟ ಆಗಿಲ್ಲ ಅಂತ ಗೊತ್ತಾದ ತಕ್ಷಣ ನಾನು ಆ ಮಾತನ್ನು ವಾಪಸ್​ ಪಡೆದುಕೊಂಡೆ’ ಎಂದು ತೇಜಸ್ವಿ ಪ್ರಕಾಶ್​ ಹೇಳಿದ್ದಾರೆ.

ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು, ಅದಕ್ಕೆ ಕ್ಷಮೆಯನ್ನೂ ಕೇಳುತ್ತ ಮುಂದುವರಿದವರು ತೇಜಸ್ವಿ ಪ್ರಕಾಶ್​. ಆದರೆ ತೇಜಸ್ವಿಗೆ ಯಾರೂ ಕ್ಷಮೆ ಕೇಳಿಲ್ಲ. ಈ ವಿಚಾರವನ್ನು ಕೂಡ ಅವರು ಒತ್ತಿ ಹೇಳಿದ್ದಾರೆ. ‘ನನ್ನ ಬಗ್ಗೆಯೂ ಹಲವರು ತುಂಬ ಮಾತುಗಳನ್ನು ಆಡಿದ್ದರು. ಆದರೆ ನಾನು ಅದನ್ನೆಲ್ಲ ದೊಡ್ಡದು ಮಾಡಲಿಲ್ಲ. ಯಾವ ಸಂದರ್ಭದಲ್ಲಿ ಆ ಮಾತುಗಳು ಹೊರಬಂದಿವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಾನು ಹಲವು ಬಾರಿ ಕ್ಷಮೆ ಕೇಳಿದ್ದೇನೆ. ಆದರೆ ಯಾರೂ ಕೂಡ ನನ್ನ ಬಳಿ ಬಂದು ಕ್ಷಮೆ ಕೇಳಿಲ್ಲ’ ಎಂದಿದ್ದಾರೆ ತೇಜಸ್ವಿ ಪ್ರಕಾಶ್​.

‘ಹಿಂದಿ ಬಿಗ್​ ಬಾಸ್​ 15’ ಫಿನಾಲೆಯಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿತ್ತು. ರಶ್ಮಿ ದೇಸಾಯಿ, ಪ್ರತೀಕ್​ ಸೆಹಜ್ಪಾಲ್​, ತೇಜಸ್ವಿ ಪ್ರಕಾಶ್​, ಶಮಿತಾ ಶೆಟ್ಟಿ, ಕರಣ್​ ಕುಂದ್ರಾ ಮತ್ತು ನಿಶಾಂತ್​ ಭಟ್​ ಅವರು ಫಿನಾಲೆ ತಲುಪಿದ್ದರು. ಎಲ್ಲರೂ ಕೂಡ ಪ್ರಬಲ ಸ್ಪರ್ಧಿಗಳೇ ಆಗಿದ್ದರು. ಅಂತಿಮವಾಗಿ ತೇಜಸ್ವಿ ಪ್ರಕಾಶ್ ಅವರಿಗೆ ಟ್ರೋಫಿ ಸಿಕ್ಕಿತು.

ಇದನ್ನೂ ಓದಿ:

ಕಷ್ಟದ ಸಮಯದಲ್ಲಿ ಅಕ್ಕ-ಭಾವನನ್ನು ಬಿಟ್ಟು ಶಮಿತಾ ಶೆಟ್ಟಿ ಬಿಗ್​ ಬಾಸ್​ಗೆ ಹೋಗಿದ್ದು ಏಕೆ? ಕಾರಣ ತಿಳಿಸಿದ ನಟಿ

‘ಬಿಗ್​ ಬಾಸ್​ 15’ ಗೆದ್ದ ಸುಂದರಿ ತೇಜಸ್ವಿ ಪ್ರಕಾಶ್; ಇಲ್ಲಿವೆ ಖ್ಯಾತ ನಟಿಯ ಮನಮೋಹಕ ಫೋಟೋಗಳು

ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ