Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಪಮಾ ಮದುವೆ ಬಗ್ಗೆ ವೇದಿಕೆ ಮೇಲೆ ತಾರಾ ಮಾತು; ‘ಬೇಡ ತಾರಮ್ಮ..’ ಎಂದು ಮನವಿ ಮಾಡಿದ್ದೇಕೆ ಈ ನಟಿ?

ಅನುಪಮಾ ಮದುವೆ ಬಗ್ಗೆ ವೇದಿಕೆ ಮೇಲೆ ತಾರಾ ಮಾತು; ‘ಬೇಡ ತಾರಮ್ಮ..’ ಎಂದು ಮನವಿ ಮಾಡಿದ್ದೇಕೆ ಈ ನಟಿ?

TV9 Web
| Updated By: ಮದನ್​ ಕುಮಾರ್​

Updated on: Feb 11, 2022 | 9:46 AM

ನೇರವಾಗಿ ಮದುವೆ ಬಗ್ಗೆ ತಾರಾ ಮಾತನಾಡಿದರು. ಅದಕ್ಕೆ ಅನುಪಮಾ ನೀಡಿದ ಪ್ರತಿಕ್ರಿಯೆ ಮಜವಾಗಿತ್ತು. ‘ಅಯ್ಯೋ ಬೇಡ ತಾರಮ್ಮ..’ ಎಂದು ಅವರು ಮನವಿ ಮಾಡಿಕೊಂಡರು. ಆ ಕ್ಷಣದ ವಿಡಿಯೋ ಇಲ್ಲಿದೆ.

ನಟಿ ಅನುಪಮಾ ಗೌಡ (Anupama Gowda) ಅವರು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ನಟಿಯಾಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ, ಕಿರುತೆರೆ ಕಾರ್ಯಕ್ರಮಗಳ ನಿರೂಪಕಿಯಾಗಿ ಅನುಪಮಾ ಗೌಡ ಗಮನ ಸೆಳೆದಿದ್ದಾರೆ. ಅವರು ನಡೆಸಿಕೊಡುತ್ತಿರುವ ‘ನನ್ನಮ್ಮ ಸೂಪರ್​ ಸ್ಟಾರ್​’ (Nanamma Superstar) ಶೋ ತುಂಬ ಫೇಮಸ್​ ಆಗಿದೆ. ಈ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಸೃಜನ್​ ಲೋಕೇಶ್​, ಹಿರಿಯ ನಟಿ ತಾರಾ ಅನುರಾಧ (Tara Anuradha) ಕೆಲಸ ಮಾಡುತ್ತಿದ್ದಾರೆ. ಈ ವೇದಿಕೆಯಲ್ಲಿ ಅನುಪಮಾ ಗೌಡ ಅವರ ಮದುವೆ ಕುರಿತು ತಾರಾ ಪ್ರಸ್ತಾಪಿಸಿದರು. ‘ಇಲ್ಲೊಬ್ಬಳು ಸುಂದರಿ ಇದ್ದಾಳೆ. ರಾಜಾ-ರಾಣಿ ಕಾರ್ಯಕ್ರಮದ ಸಮಯದಿಂದಲೂ ಅವಳಿಗೆ ಮದುವೆ ಮಾಡಬೇಕು ಅಂತ ನೋಡ್ತಾ ಇದೀವಿ. ಅವಳಿಗೆ ಹುಡುಗ ಸಿಕ್ತಾ ಇಲ್ಲ. ಎಲ್ಲರೂ ಪ್ರಚಾರ ಮಾಡಿ ಅವಳಿಗೊಂದು ಹುಡುಗನನ್ನು ಹುಡುಕಿಕೊಡಿ’ ಎಂದು ತಾರಾ ಹೇಳಿದರು. ಅದಕ್ಕೆ ಅನುಪಮಾ ನೀಡಿದ ಪ್ರತಿಕ್ರಿಯೆ ಮಜವಾಗಿತ್ತು. ‘ಅಯ್ಯೋ ಬೇಡ ತಾರಮ್ಮ..’ ಎಂದು ಅವರು ಮನವಿ ಮಾಡಿಕೊಂಡರು. ಆ ಕ್ಷಣದ ವಿಡಿಯೋ ಇಲ್ಲಿದೆ. ‘ಬಹಳ ಜನ ಬಂದು ಕೇಳಿದ್ದಾರೆ. ಆದರೆ ಅನುಪಮಾ ಒಪ್ಪುವಂತಹ ಗಂಡು ಸಿಕ್ಕುತ್ತಿಲ್ಲ. ಅವಳಿಗೆ ಒಂದು ಮದುವೆ ಮಾಡಬೇಕು ಎಂಬ ಆಸೆ ಇದೆ. ರಾಜಾ-ರಾಣಿ ಮತ್ತು ನನ್ನಮ್ಮ ಸೂಪರ್​ ಸ್ಟಾರ್​ ಕಾರ್ಯಕ್ರಮಗಳ ಸ್ಪರ್ಧಿಗಳು ನನ್ನ ಮನೆಯ ಸದಸ್ಯರ ರೀತಿ ಆಗಿದ್ದಾರೆ’ ಎಂದು ತಾರಾ ಹೇಳಿದರು.

ಇದನ್ನೂ ಓದಿ:

‘ಲವ್​ ಮಾಕ್ಟೇಲ್​ 2’ ನಟಿ ಸುಷ್ಮಿತಾ ಮದುವೆ; ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಂಕಿ

‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು