AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲವ್​ ಮಾಕ್ಟೇಲ್​ 2’ ನಟಿ ಸುಷ್ಮಿತಾ ಮದುವೆ; ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಂಕಿ

ಒಂದೆಡೆ ‘ಲವ್​ ಮಾಕ್ಟೇಲ್​ 2’ ಸಿನಿಮಾ ಬಿಡುಗಡೆಯಾದ ಖುಷಿ, ಇನ್ನೊಂದೆಡೆ ಮದುವೆಯ ಸಡಗರ. ಒಟ್ಟಿನಲ್ಲಿ ಸುಷ್ಮಿತಾ ಗೌಡ ಅವರು ಡಬಲ್​ ಸಂಭ್ರಮದಲ್ಲಿದ್ದಾರೆ.

‘ಲವ್​ ಮಾಕ್ಟೇಲ್​ 2’ ನಟಿ ಸುಷ್ಮಿತಾ ಮದುವೆ; ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜಂಕಿ
‘ಲವ್​ ಮಾಕ್ಟೇಲ್​ 2’ ನಟಿ ಸುಷ್ಮಿತಾ ಮದುವೆ
TV9 Web
| Updated By: ಮದನ್​ ಕುಮಾರ್​|

Updated on: Feb 11, 2022 | 8:17 AM

Share

‘ಲವ್​ ಮಾಕ್ಟೇಲ್​’ ಸಿನಿಮಾದ ಯಶಸ್ಸಿನಿಂದಾಗಿ ಅನೇಕರಿಗೆ ಬ್ರೇಕ್​ ಸಿಕ್ಕಿತ್ತು. ಅದೇ ರೀತಿ ಈಗ ‘ಲವ್​ ಮಾಕ್ಟೇಲ್​ 2’ (Love Mocktail 2) ಕೂಡ ಬಿಡುಗಡೆ ಆಗಿ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ಸುಷ್ಮಿತಾ ಗೌಡ ಅವರ ಜನಪ್ರಿಯತೆ ಹೆಚ್ಚಿದೆ. ಈ ಖುಷಿಯ ಸಂದರ್ಭದಲ್ಲೇ ಅವರು ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಹೌದು, ಸುಷ್ಮಿತಾ ಗೌಡ (Sushmitha Gowda) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ತುಂಬ ಫೇಮಸ್​ ಆಗಿರುವ ಅವರು ಈಗ ಚಿತ್ರರಂಗದಲ್ಲೂ ಮಿಂಚು ಹರಿಸುತ್ತಿದ್ದು, ಮದುವೆಯ ಕಾರಣದಿಂದಲೂ ಸುದ್ದಿ ಆಗಿದ್ದಾರೆ. ತುಂಬ ಅದ್ದೂರಿಯಾಗಿ ಸುಷ್ಮಿತಾ ಗೌಡ ವಿವಾಹ (Marriage) ಸಮಾರಂಭ ನೆರವೇರಿದೆ. ಈ ಸಂಭ್ರಮದ ಕ್ಷಣಕ್ಕೆ ಆಶಿಕಾ ರಂಗನಾಥ್​, ಅನುಷಾ ರಂಗನಾಥ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾದರು. ಮದುವೆಯ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅವು ವೈರಲ್​ ಆಗಿದ್ದು, ಸುಷ್ಮಿತಾ ಗೌಡ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಒಂದೆಡೆ ‘ಲವ್​ ಮಾಕ್ಟೇಲ್​ 2’ ಸಿನಿಮಾ ಬಿಡುಗಡೆಯಾದ ಖುಷಿ, ಇನ್ನೊಂದೆಡೆ ಮದುವೆಯ ಸಡಗರ. ಒಟ್ಟಿನಲ್ಲಿ ಸುಷ್ಮಿತಾ ಗೌಡ ಅವರು ಡಬಲ್​ ಸಂಭ್ರಮದಲ್ಲಿದ್ದಾರೆ.

ಅಶ್ವಿನ್​ ಗೌಡ ಎಂಬುವವರ ಜೊತೆ ಸುಷ್ಮಿತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು ಮತ್ತು ಸ್ನೇಹಿತರು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲಿ ಜಂಕಣ ಅಲಿಯಾಸ್​ ಜಂಕಿ ಎಂಬ ಪಾತ್ರವನ್ನು ಸುಷ್ಮಿತಾ ನಿಭಾಯಿಸಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುವ ಹುಡುಗಿಯಾಗಿ ಅವರು ಗಮನ ಸೆಳೆದಿದ್ದಾರೆ. ಅವರು ಮಾಡಿರುವ ಮ್ಯಾಚ್​ ಮೇಕರ್​​ ಪಾತ್ರ ಎಲ್ಲರಿಗೂ ಇಷ್ಟ ಆಗುತ್ತಿದೆ. ಈ ಮೂಗುತಿ ಸುಂದರಿಯ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ನೋಡಿಯೇ ಸುಷ್ಮಿತಾ ಗೌಡ ಅವರನ್ನು ‘ಲವ್​ ಮಾಕ್ಟೇಲ್​ 2’ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ‘ಅವರು ಹಾಕಿರುವ ಮೂಗುಬೊಟ್ಟಿನಿಂದಲೇ ಅವರನ್ನು ಸೆಲೆಕ್ಟ್​ ಮಾಡಿದೆವು’ ಎಂದು ಟ್ರೇಲರ್​ ಬಿಡುಗಡೆ ಸಮಯದಲ್ಲಿ ಮಿಲನಾ ನಾಗರಾಜ್​ ಹೇಳಿದ್ದರು.

ಡಾರ್ಲಿಂಗ್​ ಕೃಷ್ಣ ನಿರ್ದೇಶನದ, ಮಿಲನಾ ನಾಗರಾಜ್​ ನಿರ್ಮಾಣದ ‘ಲವ್​ ಮಾಕ್ಟೇಲ್​ 2’ ಸಿನಿಮಾ ಫೆ.10ರಂದು ರಾತ್ರಿಯೇ ರಾಜ್ಯದ ಹಲವು ನಗರಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಆರಂಭಿಸಿತು. ಬಹುತೇಕ ಕಡೆಗಳಲ್ಲಿ ಹೌಸ್​ಫುಲ್ ಆಗಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಇಂದು (ಫೆ.11) ರಾಜ್ಯಾದ್ಯಂತ ಈ ಸಿನಿಮಾ ಪ್ರದರ್ಶನ ಆರಂಭಿಸಲಿದೆ.

‘ಲವ್​ ಮಾಕ್ಟೇಲ್​’ ನೋಡಿ ಇಷ್ಟಪಟ್ಟಿದ್ದ ಎಲ್ಲರೂ ಇದರ ಸೀಕ್ವೆಲ್​ ನೋಡಲು ಕಾದಿದ್ದರು. ಪ್ರೇಕ್ಷಕರ ಕಾಯುವಿಕೆಗೆ ಈಗ ತೆರೆ ಬಿದ್ದಿದೆ. ಈಗಾಗಲೇ ಪ್ರೀಮಿಯರ್​ ಶೋನಲ್ಲಿ ಸಿನಿಮಾ ಕಣ್ತುಂಬಿಕೊಂಡ ಎಲ್ಲರಿಂದಲೂ ಪಾಸಿಟಿವ್​ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಹೊಸ ನಟಿ ರೇಚಲ್​ ಡೇವಿಡ್​ ಅಭಿನಯಿಸಿದ್ದಾರೆ. ರಚನಾ ಇಂದರ್​ ಕೂಡ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ:

ವೇದಿಕೆ ಮೇಲೆ ‘ಲವ್​ ಮಾಕ್ಟೇಲ್​ 2’ ನಟಿಯ ಕಣ್ಣೀರು; ಅಪ್ಪ ಮತ್ತು 5 ವರ್ಷದ ಕಷ್ಟ ನೆನೆದ ನಟಿ

‘ಪ್ರೀತಿಗಿಂತ ದೊಡ್ಡ ಅಮಲು ಯಾವುದೂ ಇಲ್ಲ’; ಲವ್​ ಬಗ್ಗೆ ‘ಲವ್​ ಮಾಕ್ಟೇಲ್​ 2’ ವೇದಿಕೆಯಲ್ಲಿ ಕ್ರೇಜಿಸ್ಟಾರ್ ಮಾತು

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ