ವೇದಿಕೆ ಮೇಲೆ ‘ಲವ್​ ಮಾಕ್ಟೇಲ್​ 2’ ನಟಿಯ ಕಣ್ಣೀರು; ಅಪ್ಪ ಮತ್ತು 5 ವರ್ಷದ ಕಷ್ಟ ನೆನೆದ ನಟಿ

ವೇದಿಕೆ ಮೇಲೆ ‘ಲವ್​ ಮಾಕ್ಟೇಲ್​ 2’ ನಟಿಯ ಕಣ್ಣೀರು; ಅಪ್ಪ ಮತ್ತು 5 ವರ್ಷದ ಕಷ್ಟ ನೆನೆದ ನಟಿ

TV9 Web
| Updated By: ಮದನ್​ ಕುಮಾರ್​

Updated on: Feb 09, 2022 | 3:04 PM

‘ಲವ್​ ಮಾಕ್ಟೇಲ್​’ ಖ್ಯಾತಿಯ ಅಭಿಲಾಶ್​ ಮತ್ತು ಖುಷಿ ಅವರು ‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲೂ ನಟಿಸಿದ್ದಾರೆ. ನಟಿ ಖುಷಿ ಅವರ ಸಿನಿಜರ್ನಿಯ ಹಿಂದೆ ಅನೇಕ ಕಷ್ಟಗಳಿವೆ.

‘ಲವ್​ ಮಾಕ್ಟೇಲ್​ 2’ (Love Mocktail 2) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆ.11ರಂದು ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರಲಿದೆ. ‘ಲವ್​ ಮಾಕ್ಟೇಲ್​’ ಹಿಟ್​ ಆಗಿದ್ದರಿಂದ ಅದರ ಸೀಕ್ವೆಲ್​ ಮೇಲೆ ಸಹಜವಾಗಿಯೇ ನಿರೀಕ್ಷೆ ಮೂಡಿದೆ. ಈ ಬಾರಿಯೂ ಡಾರ್ಲಿಂಗ್​ ಕೃಷ್ಣ ಅವರು ನಟನೆ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಮಿಲನಾ ನಾಗರಾಜ್ (Milana Nagaraj)​ ಅವರು ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಲವ್​ ಮಾಕ್ಟೇಲ್​’ ಸಿನಿಮಾದಿಂದ ಕೇವಲ ಮಿಲನಾ ಮತ್ತು ಕೃಷ್ಣ ಅವರಿಗೆ ಯಶಸ್ಸು(Actress Khushi) ಸಿಕ್ಕಿಲ್ಲ. ಬದಲಾಗಿದೆ. ಆ ಚಿತ್ರದಲ್ಲಿ ನಟಿಸಿದ್ದ ಇನ್ನಿಬ್ಬರು ಕಲಾವಿದರಾದ ಅಭಿಲಾಶ್​ ಮತ್ತು ಖುಷಿ  ಅವರ ಜನಪ್ರಿಯತೆ ಕೂಡ ಹೆಚ್ಚಿತು. ಈಗ ‘ಲವ್​ ಮಾಕ್ಟೇಲ್​ 2’ ಸಿನಿಮಾದಲ್ಲೂ ಅವರಿಬ್ಬರು ಮುಂದುವರಿದಿದ್ದಾರೆ. ನಟಿ ಖುಷಿ ಅವರ ಸಿನಿಜರ್ನಿಯ ಹಿಂದೆ ಅನೇಕ ಕಷ್ಟಗಳಿವೆ. ಅದನ್ನು ನೆನಪಿಸಿಕೊಂಡು ಅವರು ಕಣ್ಣೀರು ಹಾಕಿದ್ದಾರೆ. ‘ಲವ್​ ಮಾಕ್ಟೇಲ್​ 2’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಅವರು ಎಮೋಷನಲ್​ ಆಗಿ ಮಾತನಾಡಿದರು.

ಇದನ್ನೂ ಓದಿ:

‘ಪ್ರೀತಿಗಿಂತ ದೊಡ್ಡ ಅಮಲು ಯಾವುದೂ ಇಲ್ಲ’; ಲವ್​ ಬಗ್ಗೆ ‘ಲವ್​ ಮಾಕ್ಟೇಲ್​ 2’ ವೇದಿಕೆಯಲ್ಲಿ ಕ್ರೇಜಿಸ್ಟಾರ್ ಮಾತು

‘ಲವ್​ ಮಾಕ್ಟೇಲ್​ 3’ ಮಾಡ್ತೀರಾ ಎಂಬ ಪ್ರಶ್ನೆಗೆ ಮಿಲನಾ ನಾಗರಾಜ್​ ಏನ್​ ಅಂದ್ರು?